ಬೆಂಗಳೂರು, 14 ಜುಲೈ (ಹಿ.ಸ.):
ಆ್ಯಂಕರ್:ಭಾರತವು 2030ರ ಗುರಿಗಿಂತ ಐದು ವರ್ಷ ಮೊದಲು ಶೇ.50ರಷ್ಟು ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯ ಸಾಧಿಸುವಲ್ಲಿ ಯಶಸ್ವಿಯಾಗಿದ್ದು, 242.8 ಗಿಗಾವಾಟ್ ನವೀಕರಿಸಬಹುದಾದ ವಿದ್ಯುತ್ ಸ್ಥಾಪನೆಗೆ ತಲುಪಿದೆ. ಪ್ಯಾರಿಸ್ ಒಪ್ಪಂದಕ್ಕೆ ಅನುಗುಣವಾಗಿ ಈ ಸಾಧನೆಯು ಜಾಗತಿಕ ಹವಾಮಾನ ಬದಲಾಗುವಿಕೆ ವಿರುದ್ಧದ ಹೋರಾಟದಲ್ಲಿ ಮಹತ್ವದ ಹೆಜ್ಜೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
ಪಿಎಂ ಕುಸುಮ್, ಸೂರ್ಯಘರ್ ಯೋಜನೆ, ಸೋಲಾರ್ ಪಾರ್ಕ್ ಮತ್ತು ಹೈಬ್ರಿಡ್ ಪಾಲಿಸಿ ಕಾರ್ಯಕ್ರಮಗಳು ಶುದ್ಧ ಇಂಧನ ಕ್ಷೇತ್ರಕ್ಕೆ ಬಲ ನೀಡಿವೆ. 2070ರ ವೇಳೆಗೆ ನಿವ್ವಳ ಶೂನ್ಯ ಹೊರಸೂಸುವಿಕೆ ಗುರಿಯತ್ತ ಭಾರತ ಕ್ರಮಿಸಲಿದೆ ಎಂದು ಸಚಿವರು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa