ಬಳ್ಳಾರಿ, 14 ಜುಲೈ (ಹಿ.ಸ.) :
ಆ್ಯಂಕರ್ : ಮಹಿಳೆಯರಿಗೆ ಆತ್ಮಸ್ಥೈರ್ಯ ತುಂಬಲು ಸರಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ `ಶಕ್ತಿ’ ಯೋಜನೆಯು ಸಾಕಷ್ಟು ನೆರವಾಗಿದೆ ಎಂದು ಮಹಾನಗರ ಪಾಲಿಕೆಯ ಮಹಾಪೌರ ಮುಲ್ಲಂಗಿ ನಂದೀಶ್ ಅವರು ಹೇಳಿದ್ದಾರೆ.
ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಬಳ್ಳಾರಿ ವಿಭಾಗ ಮತ್ತು ಪಂಚ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸೋಮವಾರ ಏರ್ಪಡಿಸಿದ್ದ ಶಕ್ತಿ ಯೋಜನೆಯ `500 ಕೋಟಿ ಮಹಿಳೆಯರ ಪ್ರಯಾಣದ ಸಂಭ್ರಮಾಚರಣೆ’ಯನ್ನು ಮಹಿಳೆಯರಿಗೆ ಸಿಹಿ ಹಂಚುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಕೆ.ಇ. ಚಿದಾನಂದಪ್ಪ ಅವರು, ಸರಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಹಲವರು ಟೀಕೆ-ಟಿಪ್ಪಣಿ ಮಾಡಿದ್ದರು. ಆದರೆ ರಾಜ್ಯ ಸರಕಾರವು ಕೊಟ್ಟ ಮಾತಿನಂತೆ ಐದು ಗ್ಯಾರಂಟಿ ಯೋಜನೆಗಳಲ್ಲಿ ಮೊದಲ ಹಂತವಾಗಿ ಶಕ್ತಿ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಶಕ್ತಿ ಯೋಜನೆಯು 2023 ರ ಜೂನ್ 11 ರಂದು ಆರಂಭವಾಗಿ ಇಲ್ಲಿಯವರೆಗೆ 500 ಕೋಟಿಗಿಂತ ಹೆಚ್ಚಿನ ಮಹಿಳೆಯರು ಉಚಿತ ಪ್ರಯಾಣದ ಸೌಲಭ್ಯ ಪಡೆದಿದ್ದು, ಇಲ್ಲಿಯವರೆಗೆ ಒಟ್ಟು ಟಿಕೆಟ್ ಮೌಲ್ಯ 12 ಸಾವಿರ ಕೋಟಿ ದಾಟಿದೆ ಎಂದರು.
ಡಾ.ಬಾಬು ಜಗಜೀವನ್‍ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ ಅವರು, ಸರ್ಕಾರವು ಶಕ್ತಿ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸಿ ಮಧ್ಯಮ ವರ್ಗದ ಮಹಿಳೆಯರು ತನ್ನ ಕುಟುಂಬದ ಪೆÇೀಷಣೆಗಾಗಿ ಸಣ್ಣ ವ್ಯಾಪಾರ-ವಹಿವಾಟುಗಳಿಗೆ ನಗರಕ್ಕೆ ಮುಖಮಾಡಿ ಬರುವಾಗ ಅವಳ ಪ್ರಯಾಣದ ಖರ್ಚಿಗೆ ಸಹಕಾರಿಯಾಗಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ.ವಿ.ಜೆ. ಅವರು ಸೇರಿದಂತೆ ಗಣ್ಯರು ಮಹಿಳೆಯರಿಗೆ ಸಿಹಿ ಮತ್ತು ಸ್ಫೂರ್ತಿಧಾಯಕ ಮಹಿಳೆಯರ ಪುಸ್ತಕಗಳನ್ನು ವಿತರಿಸಿದರು.
ಬಳ್ಳಾರಿ ತಾಲ್ಲೂಕು ಗ್ಯಾರೆಂಟಿ ಅಧ್ಯಕ್ಷ ನಾಗಭೂಷಣ ಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ಲಂ ಪ್ರಶಾಂತ, ಕೆಕೆಆರ್‍ಟಿಸಿ ಬಳ್ಳಾರಿ ವಿಭಾಗದ ವಿಭಾಗೀಯ ನಿಯಂತ್ರಾಣಾಧಿಕಾರಿ ಇನಾಯತ್ ಭಾಗವಾನ್, ವಿಭಾಗೀಯ ಸಂಚಾರಾಧಿಕಾರಿ ಚಾಮರಾಜ, ವಿಭಾಗೀಯ ಉಸ್ತುವಾರಿ ಅಧಿಕಾರಿ ಅಯ್ಯಾಜ್, ಘಟಕದ ವ್ಯವಸ್ಥಾಪಕರಾದ ಗಂಗಾಧರ್, ಶಿವಪ್ರಕಾಶ್, ವಿಭಾಗೀಯ ಭದ್ರತಾ ಅಧಿಕಾರಿ ಶಾರದ ಅಂಭುಜ, ವಿಭಾಗೀಯ ಜಾಗೃತಾ ಅಧಿಕಾರಿ ಬಾಷಾ, ನಿಲ್ದಾಣಾಧಿಕಾರಿಗಳಾದ ಶಿವಕುಮಾರ್, ಪಂಪಾರೆಡ್ಡಿ, ರಾಜಶೇಖರ ಸೇರಿ ಅನೇಕರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್