ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಲಿ : ಪ್ರೊ.ಶಿವಾನಂದ ಕೆಳಗಿನಮನಿ
ರಾಯಚೂರು, 14 ಜುಲೈ (ಹಿ.ಸ.) : ಆ್ಯಂಕರ್ : ಕನ್ನಡ ಸಾಹಿತ್ಯವನ್ನು ಇಟ್ಟುಕೊಂಡು ಚಾರಿತ್ರಿಕವಾಗಿ ಇತಿಹಾಸದ ನೋಟಗಳನ್ನು ನೋಡುವ ಕ್ರಮವನ್ನು ಅಳವಡಿಸಿಕೊಂಡಾಗ ನಮ್ಮಲ್ಲಿ ಆಸಕ್ತಿ, ಅಭಿರುಚಿ, ಪ್ರವೃತ್ತಿಗಳು ಬೆಳೆಯುತ್ತಾ ಪ್ರತಿಯೊಬ್ಬರ ಭವಿಷ್ಯ ಉಜ್ವಲವಾಗುತ್ತದೆ ಆ ನಿಟ್ಟಿನಲ್ಲಿ ಇತಿಹಾಸದ ವಿದ್ಯಾರ್ಥಿಗಳು
ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಲಿ : ಪ್ರೊ.ಶಿವಾನಂದ ಕೆಳಗಿನಮನಿ


ರಾಯಚೂರು, 14 ಜುಲೈ (ಹಿ.ಸ.) :

ಆ್ಯಂಕರ್ : ಕನ್ನಡ ಸಾಹಿತ್ಯವನ್ನು ಇಟ್ಟುಕೊಂಡು ಚಾರಿತ್ರಿಕವಾಗಿ ಇತಿಹಾಸದ ನೋಟಗಳನ್ನು ನೋಡುವ ಕ್ರಮವನ್ನು ಅಳವಡಿಸಿಕೊಂಡಾಗ ನಮ್ಮಲ್ಲಿ ಆಸಕ್ತಿ, ಅಭಿರುಚಿ, ಪ್ರವೃತ್ತಿಗಳು ಬೆಳೆಯುತ್ತಾ ಪ್ರತಿಯೊಬ್ಬರ ಭವಿಷ್ಯ ಉಜ್ವಲವಾಗುತ್ತದೆ ಆ ನಿಟ್ಟಿನಲ್ಲಿ ಇತಿಹಾಸದ ವಿದ್ಯಾರ್ಥಿಗಳು ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಬೇಕು ಎಂದು ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ.ಶಿವಾನಂದ ಕೆಳಗಿನಮನಿ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಾಲ್ಮೀಕಿ ವಿಶ್ವವಿದ್ಯಾನಿಲಯದ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಇತಿಹಾಸ ಮತ್ತು ಪುರಾತತ್ವ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪ್ರಥಮ ವರ್ಷದ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ಬದುಕಿನೊಳಗೆ ಕನಸುಗಳನ್ನು ಕಾಣಬೇಕು ಆ ಕನಸುಗಳನ್ನು ಈಡೇರಿಸಲು ಜ್ಞಾನ, ಉತ್ತಮ ಆಲೋಚನೆ, ಇಚ್ಛಾಶಕ್ತಿ, ಕ್ರಿಯಾಶಕ್ತಿ ನಮ್ಮಲ್ಲಿರಬೇಕು. ನೀವು ಮಾಡುವ ಪ್ರಯತ್ನಗಳು ಮತ್ತು ಅವಕಾಶಗಳು ಬಹುಮುಖ್ಯವಾಗಿ ಬೆಳೆಯಬೇಕು. ಜ್ಞಾನಸಂಪಾದನೆ ಮತ್ತು ಸ್ನಾತಕೋತ್ತರ ಪದವಿ ಪೂರೈಸಲು ಅವಕಾಶ ಮಾಡಿಕೊಟ್ಟ ಶಿಕ್ಷಣ ಸಂಸ್ಥೆ ಹಾಗೂ ಶಿಕ್ಷಕರ ಬಗ್ಗೆ ಹೊರಗಡೆ ಧನತ್ಮಾಕ ನುಡಿಗಳನ್ನಾಡಬೇಕು ಎಂದು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.

ಕಾರ್ಯಕ್ರಮದ ಅತಿಥಿಗಳಾಗಿ ಮಹರ್ಷಿ ವಾಲ್ಮೀಕಿ ವಿವಿಯ ಕುಲಸಚಿವರಾದ ಡಾ.ಚನ್ನಪ್ಪ.ಎ ಕೆ.ಎ.ಎಸ್.(ಸೀನಿಯರ್ ಸೂಪರ್ ಟೈಂ ಸ್ಕೇಲ್)ಮಾತನಾಡಿದ ಅವರು, ಉತ್ತಮ ವ್ಯಕ್ತಿತ್ವದಿಂದ ಉತ್ತಮ ಸಮಾಜ ಕಟ್ಟಲು ಸಾಧ್ಯ. ಶ್ರಮಜೀವಿಗಳು ನಿರಂತರ ಪ್ರಯತ್ನ ಪಡುವವರು ಬದುಕಿನಲ್ಲಿ ಏನಾದರೂ ಸಾಧಿಸಬಲ್ಲರು. ವಿದ್ಯಾರ್ಥಿಗಳಾದ ನೀವು ವಿಶ್ವವಿದ್ಯಾನಿಲಯದಲ್ಲಿ ಸಿಗುವ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಂಡು ಉನ್ನತ ಸ್ಥಾನವೇರಿ ಉತ್ತಮ ನಾಗರಿಕರಾಗಿ ಎಂದು ನುಡಿದರು.

ವಿವಿಯ ಹಣಕಾಸು ಅಧಿಕಾರಿ ಹಾಗೂ ಉಪಕುಲಸಚಿವರಾದ ಡಾ.ಕೆ.ವೆಂಕಟೇಶ್ ಅವರು ಮಾತನಾಡಿ, ನಮ್ಮ ಕಲ್ಯಾಣ ಕರ್ನಾಟಕ ಭಾಗದ ಐತಿಹಾಸಿಕ ಸಂಪತ್ತಿನ ಬಗ್ಗೆ ನಮಗೆ ಹೆಮ್ಮೆ, ಗೌರವ, ಪ್ರೀತಿ ಇರಬೇಕು. ಐತಿಹಾಸಿಕ ಚರಿತ್ರೆ ಬಗ್ಗೆ ಆಳವಾದ ಜ್ಞಾನ ಅರಿವು ಹೊಂದಬೇಕು. ವಿದ್ಯಾರ್ಥಿಗಳು ಚರಿತ್ರೆಯನ್ನು ಹೊಸ ರೀತಿಯಲ್ಲಿ ನೋಡುವ ಹಾಗೂ ರೂಪಿಸುವ ಸಂಶೋಧನಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವುದನ್ನು ರೂಢಿಸಿಕೊಳ್ಳಬೇಕು ಎಂದು ಕಾರ್ಯಕ್ರಮದ ಅಧ್ಯಕ್ಷೀಯ ನುಡಿಗಳನ್ನಾಡಿದರು.

ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕರಾದ ಡಾ.ಸುಯಮೀಂದ್ರ ಕುಲಕರ್ಣಿ, ಇತಿಹಾಸ ಮತ್ತು ಪುರಾತತ್ವ ವಿಭಾಗದ ಸಂಯೋಜಕರು ಹಾಗೂ ಅತಿಥಿ ಉಪನ್ಯಾಸಕರಾದ ಡಾ.ಪದ್ಮಜಾ ದೇಸಾಯಿ ವೇದಿಕೆ ಮೇಲೆ ಉಪಸ್ಥಿತರಿದ್ದರು. ಡಾ.ಮಂಜುನಾಥ.ಕೆ, ಕೃಷ್ಣಾ, ಸೌಮ್ಯ ಜಗಲಿ ವಿವಿಧ ವಿಭಾಗಗಳ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಲಕ್ಷ್ಮೀ ಪ್ರಾರ್ಥಿಸಿದರು, ಹಿರೇದ್ಯಾಮಣ್ಣ ಸ್ವಾಗತಿಸಿದರು. ಸಂಗೀತ ನಾಯಕ ನಿರೂಪಿಸಿದರೆ, ದೇವರಾಜ ವಂದಿಸಿದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande