ಕೋಲಾರ, ೧೪ ಜುಲೈ (ಹಿ.ಸ) :
ಆ್ಯಂಕರ್ : ಜಿಲ್ಲೆಯ ಸರ್ಕಾರಿ ಶಾಲೆಗಳ ಬಲವರ್ಧನೆಗೆ ನಿರಂತರವಾಗಿ ನೆರವು ನೀಡುತ್ತಾ ಬಂದಿರುವ ಎಪ್ಸನ್ ಕಂಪನಿ ಈ ಸಾಲಿನಲ್ಲಿ ೧.೫೦ ಕೋಟಿ ವೆಚ್ಚದ ೧.೮೦ ಲಕ್ಷ ನೋಟ್ ಪುಸ್ತಕ, ೨.೨೦ ಕೋಟಿ ವೆಚ್ಚದಲ್ಲಿ ೩೭೨ ವಾಟರ್‌ಫಿಲ್ಟರ್ ನೀಡಿದ್ದು, ಮಕ್ಕಳು ಶಿಕ್ಷಣದೊಂದಿಗೆ ಸಂಸ್ಕಾರ ಕಲಿತು ನೀವು ಸಮಾಜಕ್ಕೆ ಕೈಲಾದಷ್ಟು ಕೊಡುಗೆ ನೀಡಿ ಎಂದು ಎಪ್ಸನ್ ಕಂಪನಿಯ ಅಧ್ಯಕ್ಷ ಎನ್.ಸಾಂಭಮೂರ್ತಿ ಕರೆ ನೀಡಿದರು.
ಸೋಮವಾರ ತಾಲ್ಲೂಕಿನ ವೇಮಗಲ್ ಸರ್ಕಾರಿ ಮಾದರಿ ಶಾಲೆಯಲ್ಲಿ ಎಪ್ಸನ್ ಕಂಪನಿಯಿAದ ಕೋಲಾರ ಜಿಲ್ಲೆಯ ಸರ್ಕಾರಿ ಶಾಲೆಗಳ ೩೬ ಸಾವಿರ ಮಕ್ಕಳಿಗೆ ೧.೫೦ ಕೋಟಿ ಮೊತ್ತದ ೧.೮೦ಲಕ್ಷ ನೋಟ್ ಪುಸ್ತಕ ಹಾಗೂ ೨.೨೦ ಕೋಟಿ ವೆಚ್ಚದ ೩೭೨ ವಾಟರ್‌ಫಿಲ್ಟರ್ ಕೊಡುಗೆಯಾಗಿ ನೀಡಿ ಮಾತನಾಡಿದರು.
ಕಲಿಕೆಗೆ ಶ್ರದ್ಧೆ,ಛಲ, ನಿರ್ಧಿಷ್ಟ ಗುರಿಯಿದ್ದರೆ ಸಾಕು, ಕಷ್ಟಪಟ್ಟು ಕಲಿಯುವುದಕ್ಕಿಂತ ಇಷ್ಟಪಟ್ಟು ಕಲಿಯುವುದು ಮುಖ್ಯ, ಖುಷಿಯಿಂದ ಸಾಧನೆಯತ್ತ ಮುನ್ನುಗ್ಗಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ನಿಮ್ಮ ತಂದೆತಾಯಿಯ ಆಶಯ ನಿಜವಾಗಿಸಿ, ನಿಮ್ಮ ಕನಸಿಗೆ ನೋಟ್ ಪುಸ್ತಕ ನಮ್ಮ ಚಿಕ್ಕ ಕಾಣಿಕೆಯಷ್ಟೆ, ಸಮಾಜ,ದೇಶಕ್ಕೆ ಕೊಡುಗೆ ನೀಡುವ ರೀತಿಯಲ್ಲಿ ನಿಮ್ಮ ಸಾಧನೆ ಮುಂದುವರೆಸಿ, ನಿಮ್ಮೊಂದಿಗೆ ನಾವು ಸದಾ ಇರುತ್ತೇವೆ ಎಂದು ತಿಳಿಸಿದರು.
ಎಪ್ಸನ್ ಕಂಪನಿ ಉಪಾಧ್ಯಕ್ಷ ನಿಸ್ಸಿಮುರ ಕೋಜೋ ಮಾತನಾಡಿ, ಪ್ರತಿ ವಿದ್ಯಾರ್ಥಿಯಲ್ಲೂ ಅಗಾಧವಾದ ಶಕ್ತಿ ಇದೆ, ಅದುನ್ನು ಹೊರತರುವ ಕೆಲಸವಾಗಬೇಕು, ನೀವು ಸಾಧನೆಯ ಛಲದೊಂದಿಗೆ ಮುನ್ನುಗ್ಗಿದರೆ ನಿಮ್ಮನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ, ಜ್ಞಾನ,ಶೈಕ್ಷಣಿಕ ಸಾಧನೆ ಇದ್ದರೆ ಹಣ ನಿಮ್ಮನ್ನೇ ಹುಡುಕಿಕೊಂಡು ಬರುತ್ತದೆ. ಎಪ್ಸನ್ ಕಂಪನಿ ನಿಮ್ಮ ನೆರವಿಗೆ ಸದಾ ನಿಲ್ಲಲು ಸಿದ್ದವಿದೆ, ನಿಮಗೆ ಮುಂದಿನ ದಿನಗಳಲ್ಲಿಮತ್ತಷ್ಟು ನೆರವು ಒದಗಿಸುವ ಭರವಸೆ ನೀಡಿದ ಅವರು, ಶಿಕ್ಷಣ ಸಾಧಕನ ಸ್ವತ್ತು ಎಂಬ ಮಾತಿದೆ, ಇಲ್ಲಿ ಬಡತನ ಅಡ್ಡಿಯಾಗದು, ನಿಮ್ಮ ಪರಿಶ್ರಮವೇ ನಿಮ್ಮ ಕೈಹಿಡಿಯುತ್ತದೆ. ಎಪ್ಸನ್ ಕಂಪನಿ ಮಾನವ ಸಂಪನ್ಮೂಲ ವಿಭಾಗದ ವ್ಯವಸ್ಥಾಪಕ ರಾಜೇಂದ್ರನ್ ಮಾತನಾಡಿ, ನಾವು ಪ್ರತಿವರ್ಷ ನಿಮ್ಮ ನೆರವಿಗೆ ಬರುತ್ತೇವೆ, ನೀವು ದೊಡ್ಡ ಕನಸು ಕಾಣಿ, ಆ ಕನಸನ್ನು ನನಸಾಗಿಸಿಕೊಳ್ಳಲು ಪರಿಶ್ರಮ,ಛಲದಿಂದ ಓದಿ ಎಂದು ಹೇಳಿ, ನಾವು ನೀಡುತ್ತಿರುವ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಿ. ಪುಸ್ತಕ ಹರಿಯದಿರಿ ಎಂದು ಹೇಳಿದರು.
ಎಪ್ಸನ್ ಕಂಪನಿಯ ಐಟಿ ವಿಭಾಗದ ಅಧಿಕಾರಿ ವಿಜಯ ಮಾತನಾಡಿ, ಸರ್ಕಾರಿ ಶಾಲೆಗಳೆಂದರೆ ಕೀಳಿರಿಮೆ ತೊಡೆದು ಹಾಕಿ, ಇಲ್ಲಿ ಓದಿದವರೇ ಇಂದು ಉನ್ನತ ಸ್ಥಾನದಲ್ಲಿದ್ದಾರೆ, ನೀವು ಬೇರೊಬ್ಬರಿಗೆ ಹೋಲಿಕೆ ಮಾಡಿಕೊಳ್ಳುವುದು ಬೇಡ, ಕೋಲಾರ ಜಿಲ್ಲೆಯ ಸರ್ಕಾರಿ ಶಾಲೆಗಳ ಬಲವರ್ಧನೆಗೆ ನಾವು ಮತ್ತಷ್ಟು ನೆರವು ನೀಡಲು ಸಿದ್ದವಿದ್ದು, ಅದನ್ನು ನೀವು ಸಮರ್ಪಕವಾಗಿ ಬಳಸಿಕೊಂಡು ಸಾಧನೆ ಮಾಡಿ ತೋರಿಸಿ ಎಂದರು.
ಶಿಕ್ಷಕ ಗೆಳೆಯರ ಬಳಗದ ಅಧ್ಯಕ್ಷ ಎಸ್.ನಾರಾಯಣಸ್ವಾಮಿ ಮಾತನಾಡಿ, ವರ್ಷವೊಂದರಲ್ಲೇ ೩.೭ ಕೋಟಿ ರೂ ವೆಚ್ಚದ ನೆರವನ್ನು ಸರ್ಕಾರಿ ಶಾಲೆಗಳಿಗೆ ಎಪ್ಸನ್ ಕಂಪನಿ ಹರಿಸಿದೆ, ಸರ್ಕಾರಿ ಶಾಲೆಗಳ ದಾಖಲಾತಿ ಹೆಚ್ಚಳಕ್ಕೆ ಮತ್ತು ಬಲವರ್ಧನೆಗೆ ಇದು ಸಹಕಾರಿಯಾಗಿದೆ ಎಂದು ತಿಳಿಸಿ ಧನ್ಯವಾದ ಸಲ್ಲಿಸಿದರು.
ಶಿಕ್ಷಕ ಗೆಳೆಯರ ಬಳಗದ ಉಪಾಧ್ಯಕ್ಷ ವೀರಣ್ಣಗೌಡ ಮಾತನಾಡಿ ಎಪ್ಸನ್ ಕಂಪನಿ ೯ ವರ್ಷಗಳಿಂದ ಕೋಲಾರ ತಾಲ್ಲೂಕಿನ ಎಲ್ಲಾ ಶಾಲೆಗಳು, ಮಾಲೂರು,ಮುಳಬಾಗಿಲು,ಶ್ರೀನಿವಾಸಪುರ ಆಯ್ದ ಶಾಲೆಗಳಿಗೆ ನೆರವು ನೀಡುತ್ತಿದೆ ಮತ್ತು ಶಾಲೆಗಳ ಮಕ್ಕಳಿಗೆ ಶುದ್ದ ಕುಡಿಯುವ ನೀರು ಒದಗಿಸಿ ಆರೋಗ್ಯ ರಕ್ಷನೆಯ ಸಂಕಲ್ಪ ತೊಟ್ಟಿರುವ ಎಪ್ಸನ್ ಕಂಪನಿ ಎಲ್ಲಾ ಶಾಲೆಗಳಿಗೂ ವಾಟರ್‌ಫಿಲ್ಟರ್ ನೀಡುವ ನಿರ್ಧಾರ ಮಾಡಿದೆ. ಜಿಲ್ಲೆಯ ಸರ್ಕಾರಿ ಶಾಲಾ ಮಕ್ಕಳಿಗೆ ಶುದ್ದ ಕುಡಿಯುವ ನೀರು, ಸುಸಜ್ಜಿತ ಸ್ಮಾರ್ಟ್ ಕ್ಲಾಸ್ ಸೌಲಭ್ಯ, ನೋಟ್ ಪುಸ್ತಕ, ವಿಜ್ಞಾನ ಕಿಟ್,ಬ್ಯಾಗ್‌ಗಳ ನೆರವು ನಿರಂತರವಾಗಿ ನೀಡುತ್ತಾ ಬಂದಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಿದರು. ವಿದ್ಯಾರ್ಥಿನಿಯರು ತಮ್ಮ ಅನಿಸಿಕೆ ತಿಳಿಸಿ ತಮ್ಮ ಕಲಿಕೆಗೆ ನೆರವಾಗುತ್ತಿರುವ ಎಪ್ಸನ್‌ಗೆ ಧನ್ಯವಾದ ಅರ್ಪಿಸಿದರು.
ಕಾರ್ಯಕ್ರಮದಲ್ಲಿ ಎಪ್ಸನ್ ಕಂಪನಿಯ ಅಧಿಕಾರಿಗಳಾದ ಲೋಕೇಶ್, ಸತ್ಯನಾರಾಯಣ,ವಿ.ಅಶೋಕ್, ಶಿವಕುಮಾರ್, ಸುನೀಲ್‌ಕುಮಾರ್, ನಖಗಾವಾ, ಓರಿಸನ್, ಹೆಚ್.ಎಸ್.ಎನ್.ಮೂರ್ತಿ, ಕಿರಣ್‌ಕುಮಾರ್, ವಿಜಯ್‌ಗೋವಿಂದ್, ರಾಜೇಂದ್ರ, ವಿನಾಯಕ್, ಶಶಾಂಕ್, ಮೇಘಶ್ರೀ, ಅಂಕಿತಾ, ಶಿಕ್ಷಕ ಗೆಳೆಯರ ಬಳಗದ ವೆಂಕಟಾಚಲಪತಿಗೌಡ, ಗೋವಿಂದು, ಸಲಹೆಗಾರ ಚಿಕ್ಕಣ್ಣ, ಸೋಮಶೇಖರ್, ಚಲಪತಿ,ಕೃಷ್ಣಪ್ಪ, ವೆಂಕಟರಾA ಭಾಗವಹಿಸಿದ್ದರು.
ಚಿತ್ರ :ಕೋಲಾರ ತಾಲ್ಲೂಕಿನ ವೇಮಗಲ್ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಎಪ್ಸನ್ ಕಂಪನಿಯಿAದ ಜಿಲ್ಲೆಯ ವಿವಿಧ ಶಾಲೆಗಳಿಗೆ ೧.೫ ಕೋಟಿ ವೆಚ್ಚದ ನೋಟ್ ಪುಸ್ತಕಗಳನ್ನು ಎಪ್ಸನ್ ಕಂಪನಿಯ ಅಧ್ಯಕ್ಷ ಎನ್.ಸಾಂಭಮೂರ್ತಿ ವಿತರಿಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್