ಹಾಸನದಲ್ಲಿ ಮೂರು ಚಿರತೆಗಳ ಸಾವು
ಹಾಸನ, 13 ಜುಲೈ (ಹಿ.ಸ.) : ಆ್ಯಂಕರ್ : ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಹಾಗೂ ಹಳೆಬೀಡು ಪ್ರದೇಶಗಳಲ್ಲಿ ಮೂರು ಚಿರತೆಗಳು ವಿಷಪೂರಿತ ಬಲೆಗೆ ಬಿದ್ದು ಸಾವನಪ್ಪಿರುವ ಘಟನೆ ವನ್ಯಜೀವಿ ಹಿತಾಸಕ್ತರಲ್ಲಿ ಆತಂಕ ಹುಟ್ಟಿಸಿದೆ. ಚನ್ನರಾಯಪಟ್ಟಣದ ರೈಲ್ವೆ ಹಳಿಯ ಬಳಿ ಪತ್ತೆಯಾದ ಗಂಡು ಹಾಗೂ ಹೆಣ್ಣು ಚಿರತೆಗಳ ಮೃತ
Lepord


ಹಾಸನ, 13 ಜುಲೈ (ಹಿ.ಸ.) :

ಆ್ಯಂಕರ್ : ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಹಾಗೂ ಹಳೆಬೀಡು ಪ್ರದೇಶಗಳಲ್ಲಿ ಮೂರು ಚಿರತೆಗಳು ವಿಷಪೂರಿತ ಬಲೆಗೆ ಬಿದ್ದು ಸಾವನಪ್ಪಿರುವ ಘಟನೆ ವನ್ಯಜೀವಿ ಹಿತಾಸಕ್ತರಲ್ಲಿ ಆತಂಕ ಹುಟ್ಟಿಸಿದೆ.

ಚನ್ನರಾಯಪಟ್ಟಣದ ರೈಲ್ವೆ ಹಳಿಯ ಬಳಿ ಪತ್ತೆಯಾದ ಗಂಡು ಹಾಗೂ ಹೆಣ್ಣು ಚಿರತೆಗಳ ಮೃತದೇಹಗಳಲ್ಲಿ ಭಾರೀ ಗಾಯಗಳಿಲ್ಲದ ಕಾರಣ ರೈಲ್ವೆ ಡಿಕ್ಕಿಯ ಸಾಧ್ಯತೆಯನ್ನು ಅರಣ್ಯಾಧಿಕಾರಿಗಳು ತಳ್ಳಿಹಾಕಿದ್ದಾರೆ. ಮೃತದೇಹಗಳನ್ನು ಅಲ್ಲೇ ಎಸೆದು ಹೋಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.

ಅರಣ್ಯ ಸಂರಕ್ಷಣಾಧಿಕಾರಿ ಏಳುಕೊಂಡಲು ಅವರ ಮಾರ್ಗದರ್ಶನದಲ್ಲಿ ಲೋಹ ಶೋಧಕ ಉಪಕರಣಗಳೊಂದಿಗೆ ತಂಡವೊಂದನ್ನು ಸ್ಥಳಕ್ಕೆ ಕಳುಹಿಸಿ ತನಿಖೆ ಕೈಗೊಳ್ಳಲಾಗಿದೆ.

ಇನ್ನೊಂದೆಡೆ, ಹಳೇಬೀಡು ಬಳಿಯಲ್ಲಿ ಮತ್ತೊಂದು ಗಂಡು ಚಿರತೆ ಬಲೆಗೆ ಸಿಲುಕಿ ಸಾವನ್ನಪ್ಪಿದ್ದು, ಎಸಿಎಫ್ ಮೋಹನ್ ಮತ್ತು ಆರ್‌ಎಫ್‌ಒ ಯತೀಶ್ ಅವರು ವನ್ಯಜೀವಿ ಅಪರಾಧದ ವರದಿ ಸಲ್ಲಿಸಿದ್ದಾರೆ.

ಕಳೆದ ತಿಂಗಳು ಚಾಮರಾಜನಗರ ಹಾಗೂ ಎಂಎಂ ಹಿಲ್ಸ್ ವನ್ಯಜೀವಿ ಪ್ರದೇಶಗಳಲ್ಲಿ ಹುಲಿಗಳಿಗೂ ವಿಷಪ್ರಾಶನದ ಘಟನೆಯೊಂದು ನಡೆದಿದ್ದು, ಈ ಪ್ರಕರಣವೂ ಅದೇ ಮಾದರಿಯಲ್ಲಿದೆ ಎಂದು ಶಂಕಿಸಲಾಗಿದೆ.

ಇದರಿಂದ, ಕರ್ನಾಟಕದಲ್ಲಿ ಮಾನವ-ಪ್ರಾಣಿ ಸಂಘರ್ಷವು ತೀವ್ರ ಸ್ವರೂಪ ಪಡೆದುಕೊಂಡಿದ್ದು, ಜೈವಿಕ ವಿಭಿನ್ನತೆಯ ರಕ್ಷಣೆಗೆ ಸರ್ಕಾರದಿಂದ ಗಂಭೀರ ಕ್ರಮಗಳ ಅವಶ್ಯಕತೆ ಉಂಟಾಗಿದೆ ಎಂದು ವನ್ಯಜೀವಿ ಪ್ರಾಣಿ ಪ್ರಿಯರು ಆಗ್ರಹಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande