ಕೋಲಾರ ೧೩ ಜುಲೈ (ಹಿ.ಸ) :
ಆ್ಯಂಕರ್ : ಮುಳಬಾಗಿಲಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಹಲವು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದ ಬೋಧಕರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಸಂಸ್ಥೆಯಲ್ಲಿ ಅವರು ಸಲ್ಲಿಸಿದ ಸೇವೆಯನ್ನು ಸ್ಮರಿಸಿ ವರ್ಗಾವಣೆಯಾಗಿರುವ ಸಂಸ್ಥೆಯಲ್ಲಿಯೂ ಸಹ ವಿದ್ಯಾರ್ಥಿಗಳಿಗೆ ಉತ್ತಮ ತರಬೇತಿ ಮತ್ತು ಬೋಧನೆ ನೀಡಲಿ ಎಂದು ಹಾರೈಸಲಾಯಿತು.
ಸಂಸ್ಥೆಯಿ0ದ ಬೇರೆ ಸಂಸ್ಥೆಗೆ ವರ್ಗಾವಣೆಯಾಗಿರುವ ಬೋಧಕರಾದ ಕೆ. ವಿ. ವೆಂಕಟರೆಡ್ಡಿ, ಡಾಕ್ಟರ್ ವಿಜಯ್ ಕುಮಾರ್, ಶ್ರೀಮತಿ ದೀಪಿಕಾ, ದೀಪ ಹಾಗೂ ಕಾವ್ಯಶ್ರೀ ರವರನ್ನು ಬೀಳ್ಕೊಡಲಾಯಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾಚಾರ್ಯರಾದ ಬಿ. ಕೆ. ರಘು, ಎಲ್ಲಾ ವಿಭಾಗದ ಮುಖ್ಯಸ್ಥರು, ಉಪನ್ಯಾಸಕರು, ಕಾರ್ಯಾಗಾರ ಸಿಬ್ಬಂದಿ ಹಾಗೂ ಕಚೇರಿ ಸಿಬ್ಬಂದಿ ಪಾಲ್ಗೊಂಡಿದ್ದರು.
ಚಿತ್ರ : ಮುಳಬಾಗಿಲು ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದು ವರ್ಗಾವಣೆಯಾದ ಬೋಧಕರಿಗೆ ಕಾಲೇಜಿನಲ್ಲಿ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿತ್ತು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್