ಬೀದಿ ನಾಯಿಗಳ ಕಡಿವಾಣ ಹಾಕಿದ ಮಹಾನಗರ ಪಾಲಿಕೆ
ವಿಜಯಪುರ, 13 ಜುಲೈ (ಹಿ.ಸ.) : ಆ್ಯಂಕರ್ : ವಿಜಯಪುರ ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿರುವ ಬಗ್ಗೆ ನಿನ್ನೆ ವರದಿ ಪ್ರಕಟ ಮಾಡಲಾಗಿತ್ತು. ವಿಜಯಪುರ ನಗರದ ವಾರ್ಡ್ ನಂ.3ರ ಗ್ಯಾಂಗ್ ಬಾವಡಿ ಪ್ರದೇಶದ ಭಾವಸಾರ ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿತ್ತು. ಪ್ರತಿದಿನವೂ ವಿದ್ಯಾರ್ಥಿಗಳು ಶಾಲೆಗೆ
ನಾಯಿಗಳು


ವಿಜಯಪುರ, 13 ಜುಲೈ (ಹಿ.ಸ.) :

ಆ್ಯಂಕರ್ : ವಿಜಯಪುರ ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿರುವ ಬಗ್ಗೆ ನಿನ್ನೆ ವರದಿ ಪ್ರಕಟ ಮಾಡಲಾಗಿತ್ತು. ವಿಜಯಪುರ ನಗರದ ವಾರ್ಡ್ ನಂ.3ರ ಗ್ಯಾಂಗ್ ಬಾವಡಿ ಪ್ರದೇಶದ ಭಾವಸಾರ ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿತ್ತು. ಪ್ರತಿದಿನವೂ ವಿದ್ಯಾರ್ಥಿಗಳು ಶಾಲೆಗೆ ಹೋಗುವಾಗ ಬೀದಿ ನಾಯಿಗಳ ಕಾಟದಿಂದ ಬೇಸತ್ತಿದ್ದರು. ಈ ಕುರಿತು ನಿನ್ನೆ ವರದಿ ಪ್ರಸಾರ ಮಾಡಿತ್ತು. ಅಲ್ಲದೇ, ಸ್ಥಳೀಯರು ಹಲವು ಬಾರಿ‌ ಮನವಿ ಸಲ್ಲಿಸಿದರು ಪ್ರಯೋಜನವಾಗಿಲ್ಲಾ ಎಂದು ಆಕ್ರೋಶ ವ್ಯಕ್ತವಾಗಿತ್ತು.

ಇದೀಗ ವರದಿಗೆ ಎಚ್ಚೆತ್ತುಕೊಂಡ ಮಹಾನಗರ ಪಾಲಿಕೆ ಅಧಿಕಾರಿಗಳು ರವಿವಾರ ಬೆಳಿಗ್ಗೆಯಿಂದ ಬೀದಿ ನಾಯಿಗಳನ್ನು ಹಿಡಿದ ಬೇರೆಕಡೆ ಸ್ಥಳಾಂತರ ಮಾಡಿದ್ದಾರೆ.

ವರದಿಯಿಂದ ಮಹಾನಗರ ಪಾಲಿಕೆ ಎಚ್ಚೆತ್ತುಕೊಂಡು ಆಪರೇಷನ್ ಶುರು ಮಾಡಿದೆ. ಐತಿಹಾಸಿಕ ನಗರದಲ್ಲಿ ಹೆಚ್ಚಾಗುತ್ತಿರುವ ಬೀದಿನಾಯಿಗಳ ಹಾವಳಿ ತಡೆಯಲು ಏನೆಲ್ಲಾ ಕ್ರಮ ವಹಿಸಬೇಕೋ ಆ ಕ್ರಮಗಳನ್ನು ಕಟ್ಟು ನಿಟ್ಟಾಗಿ ಜಾರಿಗೆ ತಂದು ನಾಯಿಗಳ ಹಾವಳಿ ತಡೆಯಲಿ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande