ಉರ್ದು ಶಾಲೆಗೆ ತೊಂದರೆ ಆಗಬಾರದು, ಮಹಿಳಾ ಕಾಲೇಜು ಕಟ್ಟಡಕ್ಕೆ ಬೇರೆ ಜಾಗ ನೋಡೋಣ : ಸಚಿವ ಎಚ್.ಕೆ. ಪಾಟೀಲ್
ಗದಗ, 13 ಜುಲೈ (ಹಿ.ಸ.) : ಆ್ಯಂಕರ್ : ಗದಗ ನಗರದಲ್ಲಿ ಎರಡು ಶಿಕ್ಷಣ ಸಂಸ್ಥೆಗಳ ಮಧ್ಯೆ ಭೂ ವಿವಾದ ಮೂಡಿತ್ತು. ಡಿಸಿ ಮೀಲ್ ಬಳಿ ಇರುವ ಸರ್ಕಾರಿ ಉರ್ದು ಶಾಲೆಯ ಮೈದಾನದಲ್ಲಿ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಕಟ್ಟಡ ನಿರ್ಮಿಸುವ ಯೋಜನೆಗೆ ಸಾರ್ವಜನಿಕ ಆಕ್ರೋಶ ವ್ಯಕ್ತವಾಯಿತು. ಕಾರ್ಯಕ್ರಮಕ್ಕೆ ಆಗಮಿಸ
ಪೋಟೋ


ಗದಗ, 13 ಜುಲೈ (ಹಿ.ಸ.) :

ಆ್ಯಂಕರ್ : ಗದಗ ನಗರದಲ್ಲಿ ಎರಡು ಶಿಕ್ಷಣ ಸಂಸ್ಥೆಗಳ ಮಧ್ಯೆ ಭೂ ವಿವಾದ ಮೂಡಿತ್ತು. ಡಿಸಿ ಮೀಲ್ ಬಳಿ ಇರುವ ಸರ್ಕಾರಿ ಉರ್ದು ಶಾಲೆಯ ಮೈದಾನದಲ್ಲಿ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಕಟ್ಟಡ ನಿರ್ಮಿಸುವ ಯೋಜನೆಗೆ ಸಾರ್ವಜನಿಕ ಆಕ್ರೋಶ ವ್ಯಕ್ತವಾಯಿತು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ್ ಅವರು ಸ್ಥಳದಲ್ಲಿಯೇ ಕಟ್ಟಡ ನಿರ್ಮಾಣಕ್ಕೆ ತಡೆ ನೀಡುವ ತೀರ್ಮಾನ ತೆಗೆದುಕೊಂಡರು.

ಹತ್ತಾರು ವರ್ಷಗಳಿಂದ ಖಾಸಗಿ ಕಟ್ಟಡದಲ್ಲಿ ನಡೆಯುತ್ತಿರುವ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿಗೆ ನೂತನ ಕಟ್ಟಡ ನಿರ್ಮಿಸಲು ಮೂರು ಕೋಟಿ ರೂಪಾಯಿ ವೆಚ್ಚದ ಯೋಜನೆ ಕೈಗೊಳ್ಳಲಾಗಿತ್ತು. ಇದಕ್ಕಾಗಿ ಭೂಮಿ ಪೂಜೆ ನಡೆಯಬೇಕಿತ್ತು. ಆದರೆ, ಜಾಗದ ಮೇಲೆ ಈಗಾಗಲೇ ಸರಕಾರಿ ಉರ್ದು ಶಾಲೆಯ ಮಕ್ಕಳ ಆಟದ ಮೈದಾನವಿದ್ದು, ಪೋಷಕರು ತೀವ್ರವಾಗಿ ವಿರೋಧ ವ್ಯಕ್ತಪಡಿಸಿದರು.

ಸಮಸ್ಯೆಯ ಬಗ್ಗೆ ಮಾಹಿತಿ ಪಡೆದ ಸಚಿವ ಎಚ್.ಕೆ. ಪಾಟೀಲ್ ಸ್ಥಳಕ್ಕೆ ಆಗಮಿಸಿ ಅಧಿಕಾರಿಗಳ ವಿರುದ್ಧ ಗರಂ ಆಗಿ, ಸ್ಥಳ ಪರಿಶೀಲನೆ ನಡೆಸಿದ ನಂತರ, ಉರ್ದು ಶಾಲೆಯ ಮಕ್ಕಳಿಗೆ ತೊಂದರೆ ಆಗಬಾರದು. ಈ ಜಾಗದಲ್ಲಿ ಕಾಲೇಜು ಕಟ್ಟಡ ಬೇಡ, ಬೇರೆ ಸರಿಯಾದ ಸ್ಥಳ ಹುಡುಕಿ ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ಈ ನಿರ್ಧಾನದಿಂದ ಉರ್ದು ಶಾಲೆಯ ಪೋಷಕರು ಹರ್ಷ ವ್ಯಕ್ತಪಡಿಸಿದ್ದು, ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಅವರ ಶಂಕೆಗಳು ನಿವಾರಣೆಯಾದವು. ಇನ್ನೊಂದೆಡೆ, ಮಹಿಳಾ ಕಾಲೇಜು ಕಟ್ಟಡದ ನಿರೀಕ್ಷೆಯಲ್ಲಿ ಇದ್ದ ಆಡಳಿತ ಮಂಡಳಿ ನಿರಾಸೆಯಾಗಿದೆ.

ಭೂಮಿ ಪೂಜೆ ಕಾರ್ಯಕ್ರಮ ಮಂಜೂರಿಯಾಗಿದ್ದರೂ, ಸಾರ್ವಜನಿಕ ಹಿತದೃಷ್ಟಿಯಿಂದ ಸಚಿವರು ಪೂಜೆ ಕೈ ಬಿಡಿ ಸ್ಥಳದಿಂದ ತೆರಳಿದರೆ, ಇದೊಂದು ದಿಟ್ಟ ಮತ್ತು ಜನಪರ ನಿರ್ಧಾರವೆಂದು ಸಾರ್ವಜನಿಕ ವಲಯದಲ್ಲಿ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಹಿಂದೂಸ್ತಾನ್ ಸಮಾಚಾರ್ / Lalita MP


 rajesh pande