ವಿಜಯಪುರ, 13 ಜುಲೈ (ಹಿ.ಸ.) :
ಆ್ಯಂಕರ್ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಡೆಗೆ ಮಾತ್ರ ಏಕೆ ಬೆರಳು ಎಂದು ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪ್ರಶ್ನಿಸಿದರು.
ಬಿಜೆಪಿಯಲ್ಲಿ 75 ವರ್ಷ ತುಂಬಿದ ಮೇಲೆ ನಿವೃತ್ತಿ ಪಡೆಯುವ ವಿಚಾರದಲ್ಲಿ ಆರ್ ಎಸ್ ಎಸ್ ಮುಖಂಡ ಮೋಹನ ಭಾಗವತ್ ಹೇಳಿಕೆಗೆ ಕಾಂಗ್ರೆಸ್‌ನವರು ಪ್ರಧಾನಿ ಮೋದಿಗೆ ಎದುರೇಟು ನೀಡಿದ್ದಾರೆ. ಮೋಹನ ಭಾಗವತ್ ಪ್ರಧಾನಿ ಮೋದಿಗೆ ಏಕೆ ಹೇಳ್ತಾರೆ. ದೇಶದಲ್ಲಿರುವ ಎಲ್ಲ 75 ವರ್ಷ ದಾಟಿದವರು ಮನೆಯಲ್ಲಿ ಮಕ್ಕಳನ್ನು, ಮೊಮ್ಮಕ್ಕಳನ್ನು ಆಟ ಆಡಿಸುತ್ತ ಕೂಡಿ ಅಂತಾ..? ಕೇವಲ ಮೋದಿ ಅವರಿಗೆ ಏಕೆ, ಪಾಪ ಮೋದಿವರಿಗೆ ಮಾತ್ರ ಏಕೆ ಬೆರಳು ಮಾಡ್ತಿರಿ. ಆರ್ ಎಸ್ ಎಸ್ ಅಂದ್ರೆ ಇಡೀ ದೇಶಕ್ಕೆ ಗುರು ಇದ್ದ ಹಾಗೆ. ಗುರುವಿನ ಸ್ಥಾನದಿಂದ, ಹಿರಿಯತನದಿಂದ ಹೇಳಿದ್ದಾರೆ. ಅದನ್ನು ಎಲ್ಲರು ಪಾಲಿಸಬೇಕು. ಅದು ಕೇವಲ ಬಿಜೆಪಿ ಮಾತ್ರ ಅಲ್ಲ. ಕಾಂಗ್ರೆಸ್ ಗೂ ಬಂತು, ಜನತಾ ದಳಕ್ಕೂ ಬಂತು, ಲಾಲೂಗೂ ಬಂತು, ಗೋಲುಗೂ ಬಂತು ಎಲ್ಲರಿಗೆ ಬಂತು ಎಂದು ಯತ್ನಾಳ ವಿರೋಧಿಗಳಿಗೆ ಕುಟುಕಿದರು.
ಹಿಂದೂಸ್ತಾನ್ ಸಮಾಚಾರ್ / jyothi deshpande