ಹಳೇ ದಿನಪತ್ರಿಕೆಗಳು, ನಿಯತಕಾಲಿಕೆಗಳ ವಿಲೇವಾರಿಗೆ ದರಪಟ್ಟಿ ಆಹ್ವಾನ
ಹಾಸನ, 13 ಜುಲೈ (ಹಿ.ಸ.) : ಆ್ಯಂಕರ್ : ಹಾಸನ ನಗರ ಕೇಂದ್ರ ಗ್ರಂಥಾಲಯ ಮತ್ತು ಶಾಖಾ ಗ್ರಂಥಾಲಯಗಳಲ್ಲಿ 2024-25 ನೇ ಸಾಲಿನ ಅಂತ್ಯಕ್ಕೆ (ದಿನಾಂಕ:-01-04-2024 ರಿಂದ ದಿನಾಂಕ:-31-03-2025 ರವರೆಗೆ) ಸಂಗ್ರಹವಾಗಿರುವ ಹಳೇದಿನಪತ್ರಿಕೆಗಳು/ ನಿಯತಕಾಲಿಕೆಗಳನ್ನು ವಿಲೇವಾರಿ ಮಾಡಲು ದರಪಟ್ಟಿಗಳನ್ನು ಆಹ್ವಾನಿ
ಹಳೇ ದಿನಪತ್ರಿಕೆಗಳು, ನಿಯತಕಾಲಿಕೆಗಳ ವಿಲೇವಾರಿಗೆ ದರಪಟ್ಟಿ ಆಹ್ವಾನ


ಹಾಸನ, 13 ಜುಲೈ (ಹಿ.ಸ.) :

ಆ್ಯಂಕರ್ : ಹಾಸನ ನಗರ ಕೇಂದ್ರ ಗ್ರಂಥಾಲಯ ಮತ್ತು ಶಾಖಾ ಗ್ರಂಥಾಲಯಗಳಲ್ಲಿ 2024-25 ನೇ ಸಾಲಿನ ಅಂತ್ಯಕ್ಕೆ (ದಿನಾಂಕ:-01-04-2024 ರಿಂದ ದಿನಾಂಕ:-31-03-2025 ರವರೆಗೆ) ಸಂಗ್ರಹವಾಗಿರುವ ಹಳೇದಿನಪತ್ರಿಕೆಗಳು/ ನಿಯತಕಾಲಿಕೆಗಳನ್ನು ವಿಲೇವಾರಿ ಮಾಡಲು ದರಪಟ್ಟಿಗಳನ್ನು ಆಹ್ವಾನಿಸಲಾಗಿರುತ್ತದೆ.

ಹಳೇ ದಿನಪತ್ರಿಕೆ/ಪುಸ್ತಕಗಳನ್ನು ಕೊಂಡು ಕೊಳ್ಳುವ ವ್ಯಾಪಾರಿಗಳು ಭದ್ರತಾ ಠೇವಣೆಯಾಗಿ (ಇ.ಎಂ.ಡಿ) ಮೊತ್ತ ರೂ:- 1000 (ಒಂದು ಸಾವಿರ ರೂಪಾಯಿಗಳು ಮಾತ್ರ) ಪಾವತಿಸಿ ರಶೀಧಿಯನ್ನು ಪಡೆದು ಈ ಕಛೇರಿಯಲ್ಲಿ ಲಭ್ಯವಿರುವ ನಿಗಧಿತ ನಮೂನೆಯಲ್ಲಿ ಮಾಹಿತಿಯನ್ನು ಭರ್ತಿಮಾಡಿ ದಿನಾಂಕ:-18-07-2025 ರಂದು ಸಂಜೆ 4 ಗಂಟೆಯೊಳಗೆ ಈ ಕಛೇರಿಗೆ ಸಲ್ಲಿಸಲು ತಿಳಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರ ಕಛೇರಿ, ನಗರ ಕೇಂದ್ರ ಗ್ರಂಥಾಲಯ, ಮಹಾವೀರ ವೃತ್ತ, ಹಾಸನ ಇಲ್ಲಿ ಕಚೇರಿ ವೇಳೆಯಲ್ಲಿ (ಬೆಳ್ಳಗ್ಗೆ 10 ರಿಂದ ಸಂಜೆ 5.30 ರವರೆಗೆ) ಸಂಪರ್ಕಿಸುವಂತೆ ನಗರ ಕೇಂದ್ರ ಗ್ರಂಥಾಲಯ ಉಪನಿರ್ದೇಶಕರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande