ಬೆಂಗಳೂರು, 13 ಜುಲೈ (ಹಿ.ಸ.) :
ಆ್ಯಂಕರ್ : ಹೆಬ್ಬಾಳದ ಬಹುಮಾದರಿ ಸಾರಿಗೆ ಕೇಂದ್ರ ಯೋಜನೆಗೆ ಅಗತ್ಯವಿರುವ 45 ಎಕರೆ ಭೂಮಿಯನ್ನು ರಾಜ್ಯ ಸರ್ಕಾರ ತಕ್ಷಣ ಬಿಎಂಆರ್ ಸಿಎಲ್ ಹಸ್ತಾಂತರಿಸಬೇಕೆಂದು ಮಾಜಿ ಸಚಿವ ಎಸ್. ಸುರೇಶ್ ಕುಮಾರ್ ಆಗ್ರಹಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದ ಪತ್ರದಲ್ಲಿ ಅವರು, ಖಾಸಗಿ ಲಾಭಕ್ಕಿಂತ ಸಾರ್ವಜನಿಕ ಹಿತಾಸಕ್ತಿಗೆ ಆದ್ಯತೆ ನೀಡಬೇಕು ಎಂಬುದನ್ನು ಒತ್ತಿ ಹೇಳಿದ್ದು, ಮೆಟ್ರೋ ಯೋಜನೆಗೆ ಭೂಮಿ ನೀಡುವುದನ್ನು ವಿಳಂಬಗೊಳಿಸುವಂತೆ ರಿಯಲ್ ಎಸ್ಟೇಟ್ ಲಾಬಿಗಳು ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದರೆ ಅದು ದುರಂತವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಸಾರಿಗೆ ಮೂಲಸೌಕರ್ಯ ಅಭಿವೃದ್ಧಿಗೆ ಬಿಎಂಆರ್‌ಸಿಎಲ್ 45 ಎಕರೆ ಭೂಮಿ ಕೇಳಿದೆ. ಆದರೆ ಒತ್ತಡಕ್ಕೆ ಮಣಿದ ಸರ್ಕಾರ ಕೇವಲ 9 ಎಕರೆ ನೀಡಲು ಮುಂದಾಗಿದೆ. ಇದರಿಂದ ಯೋಜನೆಯ ಮಹತ್ವ ಕುಂದಲಿದೆ,” ಎಂದು ಅವರು ಎಚ್ಚರಿಸಿದ್ದಾರೆ.
ಮೆಟ್ರೋ ಯೋಜನೆಗಳು ನಿರ್ಧಿಷ್ಟ ಸಮಯದಲ್ಲಿ ಪೂರ್ಣಗೊಳ್ಳಬೇಕಾದ ಅಗತ್ಯವಿದೆ ಎಂದು ಸೂಚಿಸಿರುವ ಸುರೇಶ್ ಕುಮಾರ್, ರಿಯಲ್ ಎಸ್ಟೇಟ್ ಹಿತಾಸಕ್ತಿಗಳಿಗೆ ಬಲಿಯಾಗಿ ಸಾರ್ವಜನಿಕ ಹಿತದ ಮೇಲೆ ರಾಜಿ ಮಾಡಿಕೊಳ್ಳಬಾರದು ಎಂದು ಅವರು ಮನವಿ ಮಾಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa