ಬೆಂಗಳೂರಿನ ಕ್ರೆಸ್ಟ್ ಕಾಲೇಜಿನಲ್ಲಿ ಕನ್ನಡ ನಿತ್ಯೋತ್ಸವ
ಬೆಂಗಳೂರಿನ ಕ್ರೆಸ್ಟ್ ಕಾಲೇಜಿನಲ್ಲಿ ಕನ್ನಡ ನಿತ್ಯೋತ್ಸವ
ಬೆಂಗಳೂರಿನ ಕ್ರೆöÊಸ್ಟ್ ಕಾಲೇಜಿನ ಕನ್ನಡ ಕಟ್ಟಾಳುಗಳು.


ಕೋಲಾರ, ಜುಲೈ ೧೩ :

ಆ್ಯಂಕರ್ : ನಾವು ಜಾಗತೀಕರಣ ಮತ್ತು ಖಾಸಗೀಕರಣದ ಕಾಲದಲ್ಲಿದ್ದೇವೆ. ಸಾಮ್ರಾಜ್ಯಶಾಹಿ ಭಾಷೆಯಾದ ಇಂಗ್ಲೀಷ್ ಉದ್ಯೋಗ ನೀಡುವ ಭಾಷೆಯಾಗಿದೆ ಎಂಬ ಪರಿಕಲ್ಪನೆ ನಮ್ಮಲ್ಲಿದೆ. ಇಂಗ್ಲೀಷ್ ಕಲಿತವರೇ ಬುದ್ಧಿವಂತರು ಇಲ್ಲದಿದ್ದರೆ ಭವಿಷ್ಯವೇ ಇಲ್ಲ ಎಂದು ನಂಬಿರುವ ಪೋಷಕರು ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮದ ಕಾನ್ವೆಂಟ್‌ಗಳಿಗೆ ಕಳುಹಿಸುತ್ತಾರೆ. ಬೆಂಗಳೂರು ಮಹಾ ನಗರ ಪಾಲಿಕೆಯ ಬಹುತೇಕ ಶಾಲಾ ಕಾಲೇಜುಗಳಲ್ಲಿ ಕನ್ನಡ ಕಲಿಯ ಬಗ್ಗೆ ಅಸಡ್ಡೆ ಇದೆ. ಆದರೆ ಸಿಲಿಕಾನ್ ಸಿಟಿಯ ಕ್ರೆöÊಸ್ಟ್ ಕಾಲೇಜ್ ಕಳೆದ ೨೫ ವರ್ಷಗಳಿಂದ ಕನ್ನಡ ಭಾಷೆಯ ಕಂಪು ಹರಡುತ್ತಿದೆ.

ಕರ್ನಾಟಕದೊಳಗೆ ಕನ್ನಡ ಭಾಷೆ-ಸಾಹಿತ್ಯ-ಸಂಸ್ಕೃತಿಗಳನ್ನು ಪುನರುಜ್ಜೀವನಗೊಳಿಸುವಲ್ಲಿ ಕ್ರೈಸ್ತ ಮಿಷನರಿಗಳ ಪಾತ್ರವು ಅವಿಸ್ಮರಣೀಯವಾದುದು. ರೆವರೆಂಡ್ ಫಾದರ್ ಕಿಟ್ಟೆಲ್ ಅವರಿಂದ ಹಿಡಿದು ಇಂದಿನ ರೆವರೆಂಡ್ ಫಾದರ್ ವಿಲ್ಯಂಮಾಡ್ತಾ ಅವರ ವರೆಗೂ ಕ್ರೈಸ್ತರ ಕನ್ನಡ ಕೈಂಕರ್ಯ ನಿರಂತರವಾಗಿದೆ. ಇದರ ಭಾಗವಾಗಿಯೇ ಕ್ರೈಸ್ಟ್ ಕಾಲೇಜಿನ ನಂತರದ ನಮ್ಮ ಕ್ರಿಸ್ತು ಜಯಂತಿ ಕಾಲೇಜು ತನ್ನ ಕನ್ನಡಪರವಾದ ಕಾಳಜಿಯನ್ನು ಕಳೆದ ೨೫ ವರ್ಷಗಳಿಂದ ಕಾಪಿಟ್ಟುಕೊಂಡು ಬರುತ್ತಿದೆ.

ಬೆಂಗಳೂರಿನAತಹ ಸಿಲಿಕಾನ್ ಸಿಟಿಯ ವ್ಯಾವಹಾರಿಕ ಭರಾಟೆಯಲ್ಲಿ ಅನೇಕ ಕಾಲೇಜುಗಳು ‘ಕನ್ನಡ ನಮಗೇಕೆ ಬೇಕು?, ಕನ್ನಡದಿಂದ ನಮಗೇನು ಸಿಗುತ್ತದೆ?, ಕನ್ನಡ ಪಾಠ ಬೋರಿಂಗ್ ಆಗಲ್ವ?’ ಅಂತ ನಿರ್ಲಕ್ಷಿಸುತ್ತಿರುವಾಗ, ನಮ್ಮ ಹೆಮ್ಮೆಯ ಕ್ರಿಸ್ತು ಜಯಂತಿ ಕಾಲೇಜಿನ ಮುತ್ಸದ್ಧಿಗಳು ಈ ನೆಲದ ಎದೆಯ ದನಿಯನ್ನು ಆಲಿಸಿದವರು. ನಮಗೆ ನೆಲ, ಜಲ, ಜನ, ಜೀವನ ಕೊಟ್ಟು ಕಾಪಿಟ್ಟ ಕನ್ನಡವನ್ನು ನಮ್ಮೊಳಗು ಕಾಪಿಟ್ಟುಕೊಳ್ಳಬೇಕೆಂಬ ಆಶಯದಲ್ಲಿ ಕನ್ನಡ ವಿಭಾಗವನ್ನು ಪೋಷಿಸಲಾಗುತ್ತಿದೆ.

ಕಾಲೇಜಿನ ಮಾನವಿಕಶಾಸ್ತ್ರಗಳ ನಿಕಾಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕನ್ನಡ ವಿಭಾಗವು ಪದವಿ ಹಂತದ ಬಿ.ಎ., ಬಿ.ಎಸ್ಸಿ., ಬಿ.ಕಾಂ., ಬಿಬಿಎ., ಬಿಸಿಎ. ಮತ್ತು ಎಲ್.ಎಲ್.ಬಿ ಕೋರ್ಸುಗಳಿಗೆ ಕನ್ನಡ ಭಾಷಾ ಪಠ್ಯವನ್ನು ಬೋಧಿಸುತ್ತಿದೆ. ನಿರಂತರವಾಗಿ ಕನ್ನಡೇತರರಿಗೆ ಕನ್ನಡ ಭಾಷಾ ಕಲಿಕೆಯ ಕೋರ್ಸ್ ನಡೆಸಿಕೊಂಡು ಬರಲಾಗುತ್ತಿದೆ. ವಿಭಾಗವು 'ಕನ್ನಡ ಸಾಹಿತ್ಯ ವೇದಿಕೆ' ವತಿಯಿಂದ ಕಲೆ, ಸಾಹಿತ್ಯ, ಭಾಷೆ, ಸಂಸ್ಕೃತಿಯನ್ನು ಬಿಂಬಿಸುವ ಹಲವು ಸ್ಪರ್ಧೆಗಳು ಹಾಗೂ ಸಾಹಿತ್ಯ ಪ್ರವಾಸ, ಕನ್ನಡ ಹಬ್ಬ ಮೊದಲಾದ ಸಾಂಸ್ಕೃತಿಕ ಚಟುವಟಿಕೆಗಳನ್ನು ಆಯೋಜಿಸುತ್ತಾ, 'ರಂಗಾAತರAಗ' ಮೂಲಕ ರಂಗಭೂಮಿ ತರಬೇತಿಯೊಂದಿಗೆ ರಂಗಚಟುವಟಿಕೆಗಳನ್ನು ಸಕ್ರಿಯಗೊಳಿಸಿದೆ ಎಂದು ಕನ್ನಡ ವಿಭಾಗದ ಪ್ರಾಧ್ಯಾಪಕ ಪ್ರೊ. ಡಾ. ಕುಪ್ಪಳ್ಳಿ ಬೈರಪ್ಪ ತಿಳಿಸಿದ್ದಾರೆ.

ಕನ್ನಡ ವಿದ್ಯಾರ್ಥಿಗಳಿಗೆ ವಿಭಾಗವು ಪುಸ್ತಕ ಓದು, ಪುಸ್ತಕ ವಿಮರ್ಶೆ, ಗಾಯನ ಸ್ಪರ್ಧೆ, ಕಾವ್ಯವಾಚನ, ಕವಿಗೋಷ್ಠಿ ಮತ್ತು ಕನ್ನಡ ಸಂಸ್ಕೃತಿ ಎಂಬ ಹೆಸರಿನ ಬ್ಲಾಗ್‌ನಲ್ಲಿ ತಮ್ಮ ಪ್ರತಿಭೆ ಅನಾವರಣಕ್ಕೆ, ಬರವಣಿಗೆಗೆ ಅವಕಾಶ ಕಲ್ಪಿಸಲಾಗಿದೆ. ಅಧ್ಯಾಪಕ ಅಭಿವೃದ್ಧಿ ಕಾರ್ಯಕ್ರಮ, ಕನ್ನಡ ರಾಜ್ಯೋತ್ಸವ, ಸಂಶೋಧನ ಕಾರ್ಯಾಗಾರ, ರಾಷ್ಟ್ರೀಯ ವಿಚಾರ ಸಂಕಿರಣದAತಹ ಹಲವು ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತಾ ಬಂದಿದೆ. ರಾಷ್ಟ್ರಮಟ್ಟದ “ಕ್ರಿಸ್ತು ಜಯಂತಿ ಕನ್ನಡ ಸಂಶೋಧನ ಪತ್ರಿಕೆ”(ಕೆಜೆಕೆಎಸ್ಪಿ)ಯನ್ನು ಕಾಲೇಜಿನ ಕನ್ನಡ ವಿಭಾಗದ ವತಿಯಿಂದ ಪ್ರಕಟಿಸಲಾಗುತ್ತಿದೆ.

ಈಗಾಗಲೇ 'ಜಾನಪದ ಸಾಹಿತ್ಯ: ಸಾಂಸ್ಕೃತಿಕ ಚಿಂತನೆ', ‘ಕನ್ನಡ ಸಾಹಿತ್ಯ: ನಾಟಕ, ರಂಗಭೂಮಿ ಮತ್ತು ಸಿನೆಮಾ’, ‘ಮುದ್ದಣ ಎಂಬ ಸಾಹಿತ್ಯ ಸೌರಭ’, ‘ಸಮತೆಯ ಕಡಲು ಮಮತೆಯ ಒಡಲು’, ‘ಕನ್ನಡ ಅಸ್ಮಿತೆ: ಶಾಂತಿ ಮತ್ತು ಸಾಮರಸ್ಯ’, ‘ಅರಿವಿನೊಳಗಣ ಬೆರಗು’, ‘ಕನ್ನಡ ನೋಟ ಶಾಂತಿಯ ತೋಟ’, ‘ವಚನ ಚಿಂತನ ವಿಶ್ವ ದರ್ಶನ: ಸಂಪುಟ ೧ ಮತ್ತು ೨’, ಜಾನಪದ-ವಿಶ್ವಪಥ: ಸಂಪುಟ ೧ ಮತ್ತು ೨’ ಎಂಬ ಮಹತ್ವದ ಗ್ರಂಥಗಳು ವಿಭಾಗದಿಂದ ಪ್ರಕಟಗೊಂಡಿವೆ ಎಂದು ತಿಳಿಸಿದ್ದಾರೆ.

ಇಂತಹ ನಮ್ಮ ಕ್ರಿಸ್ತು ಜಯಂತಿ ಕಾಲೇಜಿನ ಕನ್ನಡ ವಿಭಾಗವೆಂಬೋ ಅನುಭವ ಮಂಟಪದಲ್ಲಿ ಶರಣಗಣಂಗಳ ಕೂಡಲಸಂಗಮದ ತಿರುವ ಬಳಗದಲ್ಲಿ-ಡಾ.ಸರ್ವೇಶ್ ಬಿ.ಎಸ್, ಪ್ರೊ.ಚಂದ್ರಶೇಖರ್ ಎನ್., ಡಾ.ಸೈಯದ್ ಮುಯಿನ್, ಡಾ.ರವಿಶಂಕರ್ ಎ.ಕೆ., ಡಾ.ಎಂ.ಭೈರಪ್ಪ ಹಾಗೂ ಡಾ.ಕಿರಣಕುಮಾರ್ ಹೆಚ್.ಜಿ. ಇದ್ದಾರೆ.

ಚಿತ್ರ : ಬೆಂಗಳೂರಿನ ಕ್ರೆöÊಸ್ಟ್ ಕಾಲೇಜಿನ ಕನ್ನಡ ಕಟ್ಟಾಳುಗಳು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande