ಶಿವರಾಜ್‌ಕುಮಾರ್‌ 63ನೇ ಹುಟ್ಟುಹಬ್ಬ : ‘ಪೆದ್ದಿ’ ಚಿತ್ರ ತಂಡದಿಂದ ಪೋಷ್ಟರ್ ಬಿಡುಗಡೆ
ಬೆಂಗಳೂರು, 12 ಜುಲೈ (ಹಿ.ಸ.) : ಆ್ಯಂಕರ್ : ಕನ್ನಡ ಚಿತ್ರರಂಗದ ಖ್ಯಾತ ನಟ ಶಿವರಾಜ್‌ಕುಮಾರ್ ಇಂದು 63ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, ಅಭಿಮಾನಿಗಳಿಂದ ಶುಭಾಶಯಗಳ ಸುರಿ ಮಳೆಯಾಗಿದೆ. ಈ ಸಂಧರ್ಭದಲ್ಲಿ, ಅವರ ಮುಂದಿನ ತೆಲುಗು ಚಿತ್ರ ‘ಪೆದ್ದಿ’ ತಂಡ ವಿಶಿಷ್ಟವಾಗಿ ಗೌರ್ ನಾಯ್ಡು ಪಾತ್ರದ ಲುಕ್‌ ಪೋಸ
Shivrajkumar


ಬೆಂಗಳೂರು, 12 ಜುಲೈ (ಹಿ.ಸ.) :

ಆ್ಯಂಕರ್ : ಕನ್ನಡ ಚಿತ್ರರಂಗದ ಖ್ಯಾತ ನಟ ಶಿವರಾಜ್‌ಕುಮಾರ್ ಇಂದು 63ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, ಅಭಿಮಾನಿಗಳಿಂದ ಶುಭಾಶಯಗಳ ಸುರಿ ಮಳೆಯಾಗಿದೆ. ಈ ಸಂಧರ್ಭದಲ್ಲಿ, ಅವರ ಮುಂದಿನ ತೆಲುಗು ಚಿತ್ರ ‘ಪೆದ್ದಿ’ ತಂಡ ವಿಶಿಷ್ಟವಾಗಿ ಗೌರ್ ನಾಯ್ಡು ಪಾತ್ರದ ಲುಕ್‌ ಪೋಸ್ಟರ್‌ ಬಿಡುಗಡೆ ಮಾಡಿದೆ.

ರಾಮ್ ಚರಣ್ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ಈ ಚಿತ್ರವನ್ನು ‘ಉಪ್ಪೇನಾ’ ಖ್ಯಾತಿಯ ಬುಚ್ಚಿ ಬಾಬು ಸನಾ ನಿರ್ದೇಶಿಸುತ್ತಿದ್ದಾರೆ. ಜಾಹ್ನವಿ ಕಪೂರ್, ದಿವ್ಯೆಂದು ಶರ್ಮಾ ಮತ್ತು ಜಗಪತಿ ಬಾಬು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಎ.ಆರ್. ರೆಹಮಾನ್ ಸಂಗೀತ, ರತ್ನವೇಲು ಛಾಯಾಗ್ರಹಣ ನೀಡುತ್ತಿರುವ ಈ ಸಿನಿಮಾ ಮೈತ್ರಿ ಮೂವಿ ಮೇಕರ್ಸ್ ಮತ್ತು ಸುಕುಮಾರ್ ರೈಟಿಂಗ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande