ಮುಂಬಯಿ, 11 ಜುಲೈ (ಹಿ.ಸ.) :
ಆ್ಯಂಕರ್ : ಬಾಲಿವುಡ್ ನಟ ಅಜಯ್ ದೇವಗನ್ ಮತ್ತೊಮ್ಮೆ ‘ಸನ್ ಆಫ್ ಸರ್ದಾರ್ 2’ ಚಿತ್ರದ ಮೂಲಕ ಬೃಹತ್ ತೆರೆಯ ಮೇಲೆ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ.
ಈ ಬಹು ನಿರೀಕ್ಷಿತ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿ, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ.
೨೦೧೨ರಲ್ಲಿ ಬಿಡುಗಡೆಯಾದ 'ಸನ್ ಆಫ್ ಸರ್ದಾರ್' ಚಿತ್ರದಲ್ಲಿ ಅಜಯ್ ದೇವಗನ್ ಅವರ ಹಾಸ್ಯ, ಆಕ್ಷನ್ ಮತ್ತು ನಿರ್ವಹಣೆ ಪ್ರೇಕ್ಷಕರ ಮನ ಗೆದ್ದಿತ್ತು. ಈಗ ಅವರು ಜಸ್ಸಿ ರಾಂಧವ ಪಾತ್ರದಲ್ಲಿ ಮತ್ತೊಮ್ಮೆ ಹಿಂದಿರುಗಿದ್ದಾರೆ.
ಹೊಸ ಟ್ರೇಲರ್‌ನಲ್ಲಿ ಹಾಸ್ಯ, ಸ್ಫೋಟಕ ಆಕ್ಷನ್ ಹಾಗೂ ಭರ್ಜರಿ ಸಂಭಾಷಣೆಗಳು ಗಮನ ಸೆಳೆಯುತ್ತಿವೆ. ಮೃಣಾಲ್ ಠಾಕೂರ್ ಮತ್ತು ನೀರು ಬಜ್ವಾ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಚಿತ್ರದ ಮೇಲಿನ ಕುತೂಹಲವನ್ನೂ ಹೆಚ್ಚಿಸಿದೆ.
ಇದಕ್ಕೂ ಮುನ್ನ ಅಜಯ್ ದೇವಗನ್ ಅವರ ‘ರೈಡ್ 2’ ಚಿತ್ರ ಯಶಸ್ಸು ಕಂಡಿದ್ದು, ಈಗ ‘ಸನ್ ಆಫ್ ಸರ್ದಾರ್ 2’ ಮೇಲೆ ಅಪಾರ ನಿರೀಕ್ಷೆ ಮೂಡಿದೆ. ಈ ಚಿತ್ರವು ಚಿತ್ರಮಂದಿರಗಳಲ್ಲಿ ಯಾವ ಮಟ್ಟದ ಸಂಚಲನ ಮೂಡಿಸುತ್ತದೆ ಎಂಬುವುದಕ್ಕೆ ಕಾಯಬೇಕಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa