ಕೊಪ್ಪಳ, 10 ಜುಲೈ (ಹಿ.ಸ.) :
ಆ್ಯಂಕರ್ : ಹಿಟ್ ಅಂಡ್ ರನ್ ಪ್ರಕರಣಗಳಲ್ಲಿ ಮರಣ ಹೊಂದಿದವರಿಗೆ ಮತ್ತು ತೀವ್ರ ಗಾಯಗೊಂಡವರಿಗೆ ಪರಿಹಾರ ನೀಡಲು ಅನುಷ್ಠಾನಗೊಳಿಸಲಾಗಿರುವ ಯೋಜನೆಯ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸುರೇಶ ಬಿ. ಇಟ್ನಾಳ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ ಅವರು ಸೂಚನೆ ನೀಡಿದ್ದಾರೆ.
ಹಿಟ್ ಅಂಡ್ ರನ್ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರದ ಆದೇಶಗಳನ್ವಯ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಮೋಟಾರು ವಾಹನಗಳ ಕಾಯಿದೆಯಡಿ ಅಪರಿಚಿತ ವಾಹನ ಡಿಕ್ಕಿಯಾಗಿ ಅಪಘಾತದಲ್ಲಿ ಮರಣ ಹೊಂದಿದ ವಾರಸುದಾರರಿಗೆ ರೂ.2 ಲಕ್ಷಗಳು ಮತ್ತು ತೀವು ಗಾಯಗೊಂಡವರಿಗೆ ರೂ.50.000 ಗಳನ್ನು ಪರಿಹಾರ ನೀಡಲು ಆದೇಶಿಸಲಾಗಿರುತ್ತದ. ಈ ಯೋಜನೆಯಲ್ಲಿ ಸಂತ್ರಸ್ತರು ಸಲ್ಲಿಸಿದ ಅರ್ಜಿ ಮತ್ತು ದಾಖಲೆಗಳನ್ನು ತಹಶೀಲ್ದಾರ ಅಥವಾ ಉಪವಿಭಾಗಾಧಿಕಾರಿಗಳು 30 ದಿನಗಳ ಒಳಗಾಗಿ ಪರಿಶೀಲಿಸಿ ಶಿಫಾರಸ್ಸು ಮಾಡಿ ಪರಿಹಾರದ ಆದೇಶಕ್ಕಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕಾಗುತ್ತದೆ ನಂತರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಈ ಪ್ರಸ್ತಾವನೆಯನ್ನು ಪರಿಶೀಲಿಸಿ 15 ದಿನದೊಳಗೆ ಪರಿಹಾರ ಮಂಜೂರಾತಿ ಆದೇಶವನ್ನು ಜನರಲ್ ಇನ್ಸೂರೆನ್ಸ್ ಕೌನ್ಸಿಲ್(General Insurance Council) ) ಇವರಿಗೆ ಸಲ್ಲಿಸಲಾಗುತ್ತದೆ.
ಆದರೆ, ಈ ಯೋಜನಯು ಕಾಲಮಿತಿಯೊಳಗ ಕಾರ್ಯನಿರ್ವಹಿಸಬೇಕಾಗಿದ್ದರೂ ಸಹ ಸಂಬಂಧಪಟ್ಟ ಪ್ರಾಧಿಕಾರದಲ್ಲಿ ಈ ಯೋಜನ ಅನುμÁ್ಠನಗೊಂಡ ಮಹತ್ವವನ್ನು ಅರಿಯದೇ ಕಾಲ ವಿಳಂಬದಲ್ಲಿ ಕಾರ್ಯ ನಿರ್ವಹಿಸಲಾಗಿತ್ತಿದ್ದು, ಇದರಿಂದ ಪರಿಹಾರ ಕೋರಿ ಸಲ್ಲಿಸುವ ಅರ್ಜಿಗಳನ್ನು ಆದ್ಯತೆ ಮೇರೆಗೆ ಪರಿಗಣಿಸಿ ನಿರ್ವಹಿಸದೇ ಇರುವ ಪ್ರಯುಕ್ತ ಸಂತ್ರಸ್ತರಿಗೆ ಪರಿಹಾರದ ಅವಶ್ಯಕತವಿರುವ ಸಮಯದಲ್ಲಿ ಸಿಗದೇ ಕಷ್ಟ ಪಡುತ್ತಿರುವುದು ಗಮನಿಸಲಾಗಿದೆ.
ಈ ಪ್ರಯುಕ್ತ ಆ ಯೋಜನೆಯಡಿ ಸಂತ್ರಸ್ಥರು ನಿಗದಿತ ಸಮಯದಲ್ಲಿ ಪರಿಹಾರ ಪಡೆಯಲು ಸರ್ಕಾರದ ಆದೇಶ ಅಥವಾ ಸುತ್ತೋಲೆ ಅಥವಾ ಮಾರ್ಗಸೂಚಿಗಳನ್ನಯ ಕಡ್ಡಾಯವಾಗಿ ಕಾರ್ಯನಿರ್ವಹಿಸಬೇಕಾಗಿರುವುದು ಎಲ್ಲರ ಜವಾಬ್ದಾರಿಯಾಗಿದ್ದು, ಈ ಯೋಜನೆಯಲ್ಲಿ ಪ್ರಮುಖವಾಗಿ ಮಹಾ ನಿರ್ದೇಶಕರು ಮತ್ತು ಆರಕ್ಷಕ ಮಹಾ ನಿರೀಕ್ಷಕರು ಬೆಂಗಳೂರು ರವರ ಸುತ್ತೋಲೆಯಲ್ಲಿ ಪೆÇಲೀಸ್ ಠಾಣಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಹಿಟ್ ಅಂಡ್ ರನ್ ಯೋಜನೆಯಡಿ ಪರಿಹಾರ ಕುರಿತು ಕಾರ್ಯವಿಧಾನ:
ಅವಘಾತ ನಡೆದ ವ್ಯಾಪ್ತಿಯ ಪೊಲೀಸ್ ಠಾಣಾಧಿಕಾರಿಗಳು ಎಫ್.ಐ.ಆರ್ ದಾಖಲಿಸಿ, ಸಂತ್ರಸ್ಥರಿಗೆ ವರಿಹಾರಕ್ಕಾಗಿ ಅರ್ಜಿ ನಮೂನೆ ನೀಡಿ ಮೃತ ಅಥವಾ ತೀವು ಗಾಯಗೊಂಡ ಕಟುಂಬದವರಿಗೆ ಅಗತ್ಯ ದಾಖಲೆಯೊಂದಿಗೆ ಕ್ಲೇಮ್ ಎನ್‍ಕ್ವೈರಿ ಆಫಿಸರ್ ((Claim Enquiry Officer ಆಗಿರುವ ತಹಶೀಲ್ದಾರ್ ಅಥವಾ ಉಪವಿಭಾಗಾಧಿಕಾರಿಗಳ ರವರಿಗೆ ಅರ್ಜಿಯನ್ನು ಸಲ್ಲಿಸಲು ತಿಳುವಳಿಕೆ ನೀಡಿ ಸಂತ್ರಜ್ಞರಿಗೆ ಪರಿಹಾರ ಪಡೆಯುವಂತೆ ಸಹಕರಿಸಬೇಕು.
ಪರಿಹಾರ ಕೋರಿ ಅರ್ಜಿ ಸಲ್ಲಿಸುವ ವಾರಸುದಾರರು ಅಥವಾ ಭಾದಿತ ವ್ಯಕ್ತಿಯು ಸಂಬಂಧಿಸಿದ ಠಾಣಾಧಿಕಾರಿಗಳಿಂದ ಅರ್ಜಿ ನಮೂನೆ-1ನ್ನು ಪಡೆದು ಎಫ್.ಐ.ಆರ್. ಸಿ ರಿಪೆÇೀರ್ಟ್, ಬ್ಯಾಂಕ್ ವಾಸ್ ಬುಕ್ ಪ್ರತಿ, ನಮೂನೆ-4 (Under Taking) ಹಾಗೂ ಮೃತ ಪ್ರಕರಣಗಳಲ್ಲಿ ಪೆÇೀಸ್ಟ್ ಮಾರ್ಟಮ್ ವರದಿ ಮರಣ ಪ್ರಮಾಣ ಪತ್ರ ಅಥವಾ ತೀವ್ರ ಗಾಯಗೊಂಡಿದ್ದಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಗ್ಗೆ, ದಾಖಲೆಗಳು ಮತ್ತು ಆಧಾರ ಪ್ರತಿಗಳೊಂದಿಗೆ ಅವಘಾತ ಸಂಭವಿಸಿದ ವ್ಯಾಪ್ತಿಯ ಕ್ಲೇಮ್ ಎನ್‍ಕ್ವೈರಿ ಆಫಿಸರ್ ಆಗಿರುವ ತಹಶೀಲ್ದಾರ್ ಅಥವಾ ಉಪವಿಭಾಗಾಧಿಕಾರಿಗಳಿಗೆ ಸಲ್ಲಿಸಬೇಕು.
ತದನಂತರ ಸಂಬಂಧಪಟ್ಟ ಉಪವಿಭಾಗಾಧಿಕಾರಿ ಅಥವಾ ತಹಶೀಲ್ದಾರ್‍ರವರು ಪರಿಹಾರ ಅರ್ಜಿ ಹಾಗೂ ದಾಖಲೆಗಳನ್ನು ಪರಿಶೀಲಿಸಿ ನಮೂನೆ-2ರಲ್ಲಿ ಸದರಿಯವರ ಸೂಕ್ತ ಶಿಫಾರಸಿ ನೊಂದಿಗೆ ಅರ್ಜಿ ದಿನಾಂಕದಿಂದ 30 ದಿನದೊಳಗಾಗಿ ಜಿಲ್ಲಾಧಿಕಾರಿಗಳು ಕ್ಲೇಮ್ ಸೆಟಲ್‍ಮೆಂಟ್ ಆಫಿಸರ್ ((Claim Settlement Officer) ಆಗಿದ್ದು ಇವರಿಗೆ ಸಲ್ಲಿಸಬೇಕು.
ನಂತರ ಜಿಲ್ಲಾಧಿಕಾರಿಗಳು, ಪರಿಹಾರ ಅರ್ಜಿಯನ್ನು ಪರಿಶೀಲಿಸಿ ನಮೂನೆ-3 ರಲ್ಲಿ ಪರಿಹಾರ ಕುರಿತು ಆದೇಶ ಮಂಜೂರು ಮಾಡಿ ಜನರಲ್ ಇನ್ಸೂರೆನ್ಸ್ ಕೌನ್ಸಿಲ್, ಇವರಿಗೆ ಪರಿಹಾರ ಪಾವತಿಸುವಂತೆ ಪ್ರಸ್ತಾವನೆಯೊಂದಿಗೆ ಅದೇಶದ ಪ್ರತಿಯನ್ನು 15 ದಿನದೊಳಗಾಗಿ ಸಲ್ಲಿಸಲಾಗುತ್ತದೆ.
ನಂತರ ಜನರಲ್ ಇನ್ಸೂರೆನ್ಸ್ ಕೌನ್ಸಿಲ್ ಇವರಿಂದ ಪರಿಶೀಲನೆಗೊಂಡು ಸಂಬಂಧಪಟ್ಟ ವ್ಯಕ್ತಿಗಳ ಬ್ಯಾಂಕ್ ಖಾತೆಗೆ ಜನರಲ್ ಇನ್ಸೂರೆನ್ಸ್ ಕೌನ್ಸಿಲ್ ಇವರಿಂದ ನೇರವಾಗಿ ಪರಿಹಾರದ ಮೊತ್ತವನ್ನು 15 ದಿನದೊಳಗಾಗಿ ಸಂಬಂಧಪಟ್ಟವರಿಗೆ ಜಮೆಯಾಗುತ್ತದೆ.
ಈ ಮೇಲ್ಕಂಡ ಕಾರ್ಯವಿಧಾನವನ್ನು ಸಂಬಂಧಪಟ್ಟ ಇಲಾಖೆಯವರು ಕಾಲಮಿತಿಯಲ್ಲಿ ಕಡ್ಡಾಯವಾಗಿ ನಿರ್ವಹಿಸಬೇಕಾಗಿದ್ದು ಜನ ಸಾಮಾನ್ಯರಲ್ಲಿ ಈ ಕಾರ್ಯವಿಧಾನದ ಮಾಹಿತಿ ಕೊರತೆಯಿಂದ ಸರ್ಕಾರದ ಹಿತಚಿಂತಕ ಯೋಜನೆಯು ಪರಿಣಾಮಕಾರಿಯಾಗಿ ,ಅನುಷ್ಠಾನವಾಗುತ್ತಿಲ್ಲ. ಸರ್ಕಾರದ ಈ ಯೋಜನೆಯನ್ನು ಸಮರ್ಪಕವಾಗಿ ,ಅನುಷ್ಠಾನಗೊಳಿಸಲು ಸಾವರ್ಜನಿಕರಲ್ಲಿ ಹೆಚ್ಚಿನ ಅರಿವು ಮತ್ತು ಪ್ರಚಾರವನ್ನು ಮೂಡಿಸುವುದು ಅವಶ್ಯಕವಾಗಿದ್ದು, ಈ ಪರಿಹಾರ ಕಾರ್ಯವಿಧಾನವನ್ನು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ತಮ್ಮ ಕಚೇರಿಯಲ್ಲಿ ಹಾಗೂ ತಮ್ಮ ಕಾರ್ಯ ವ್ಯಾಪ್ತಿಯಲ್ಲಿರುವ ಎಲ್ಲಾ ಅಧೀನ ಕಚೇರಿಗಳಲ್ಲಿ ಕಡ್ಡಾಯವಾಗಿ ಕಚೇರಿಯ ಆವರಣದಲ್ಲಿ ಸಾರ್ವಜನಿಕರಿಗೆ ಕಾಣುವ ಸ್ಥಳಗಳಲ್ಲಿ ಫಲಕಗಳನ್ನು ಅಳವಡಿಸುವ ಮೂಲಕ ವ್ಯಾಪಕ ಪ್ರಚಾರ ಅಥವಾ ಅರಿವು ಮೂಡಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಇದರಿಂದ ಸಾರ್ವಜನಿಕರಲ್ಲಿ ಅರಿವು ಮೂಡಿ ಮೃತರ ಕುಟುಂಬಗಳಿಗೆ ಹಾಗೂ ಅವಘಾತದಿಂದ ಭಾದಿತರಾಗುವ ವ್ಯಕ್ತಿಗಳಿಗೆ ಸರ್ಕಾರವು ನೀಡುವ ನೆರವು ಸಕಾಲದಲ್ಲಿ ದೊರಕಿಸುವಂತಾಗುತ್ತದೆ ಎಂದು ಜಿಲ್ಲಾಧಿಕಾರಿ ಸುರೇಶ ಬಿ. ಇಟ್ನಾಳ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ ಅವರು ಜಂಟಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್