ವಾಮ ಮಾರ್ಗದ ಮೂಲಕ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವುದಿಲ್ಲ ; ನಿಖಿಲ್ ಕುಮಾರಸ್ವಾಮಿ
ವಾಮ ಮಾರ್ಗದ ಮೂಲಕ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವುದಿಲ್ಲ ; ನಿಖಿಲ್ ಕುಮಾರಸ್ವಾಮಿ
ಕೋಲಾರ ಮತ್ತು ಬಂಗಾರಪೇಟೆಯಲ್ಲಿ ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಗುರುವಾರ ಕಾರ್ಯಕರ್ತರ ಸಭೆ ನಡೆಸಿದರು. ಬಂಗಾರಪೇಟೆಯಲ್ಲಿ ಎತ್ತಿನ ಬಂಡಿಯಲ್ಲಿ ಮೆರವಣಿಗೆಯಲ್ಲಿ ತೆರಳಿದರು.


ಕೋಲಾರ, ೧೦ ಜುಲೈ (ಹಿ.ಸ) :

ಆ್ಯಂಕರ್ : ನಾವು ೩ ವರ್ಷ ಯಾವುದೇ ವಾಮಮಾರ್ಗದಿಂದ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವುದಿಲ್ಲ. ರಾಜಕೀಯವಾಗಿ ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಬಿಜೆಪಿ ಮೈತ್ರಿಯ ಮೂಲಕ ಆಡಳಿತರೂಢ ಕಾಂಗ್ರೆಸ್ ಪಕ್ಷವನ್ನು ರಾಜಕೀಯವಾಗಿ ಎದುರಿಸುತ್ತೇವೆ. ಅಧಿಕಾರ ಹಿಡಿಯಲ್ಲ. ಜೆಡಿಎಸ್-ಬಿಜೆಪಿ ಮೈತ್ರಿ ಶಾಶ್ವತವಾಗಿ ಇರಲಿದೆ. ೨೦೨೮ಕ್ಕೆ ರಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಸರ್ಕಾರ ರಚನೆ ಮಾಡಲಿದ್ದೇವೆ. ಕುಮಾರಣ್ಣ ಸಿಎಂ ಆಗಬೇಕು ಎಂಬುದು ನಮ್ಮ ಅಪೇಕ್ಷೆ ಅಲ್ಲ, ಇದು ಕಾರ್ಯಕರ್ತರ ಅಪೇಕ್ಷೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬಂಗಾರಪೇಟೆ ಮತ್ತು ಕೋಲಾರದಲ್ಲಿ ಹಮ್ಮಿಕೊಂಡಿದ್ದ ಜನರೊಂದಿಗೆ ಜನತಾದಳ- ಜೆಡಿಎಸ್ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಕಾಂಗ್ರೆಸ್ ಗ್ಯಾರಂಟಿಗಳು ಚುನಾವಣೆ ಗಿಮಿಕ್ ಅಷ್ಟೇ. ಹಿಮಾಚಲ ಪ್ರದೇಶ ಮತ್ತು ತೆಲಂಗಾಣ ಕಾಂಗ್ರೆಸ್ ಸರ್ಕಾರಗಳು ಗ್ಯಾರಂಟಿ ಸ್ಕೀಮ್ ಗಳಿಂದ ದಿವಾಳಿ ಎದ್ದೋಗಿದ್ದಾವೆ ರಾಜ್ಯ ಸರ್ಕಾರದ ಗ್ಯಾರಂಟಿ ಕೊಡುವುದು ತಪ್ಪುಅಂತ ನಾನು ಹೇಳೋದಿಲ್ಲ. ಕೆಲವೊಂದು ಸಮುದಾಯ, ವರ್ಗ ಆರ್ಥಿಕವಾಗಿ ಹಿಂದುಳಿದಿರುತ್ತಾರೆ ಅಂತವರಿಗೆ ಗ್ಯಾರಂಟಿ ಯೋಜನೆ ಕೊಡುವುದರಿಂದ ಸರ್ಕಾರದ ಗಂಟೆನೂ ಹೋಗುವುದಿಲ್ಲ ಎಂದು ಅವರು ಕಿಡಿಕಾರಿದರು.

ವಸತಿ ಇಲಾಖೆಯಲ್ಲಿ ಏನಾಗಿದೆ.? ಸಂಬ0ಧಪಟ್ಟ ಮಂತ್ರಿಗಳು ಮಧ್ಯವರ್ತಿಗಳನ್ನ ಇಟ್ಕೊಂಡು ಪರ್ಸೆಂಟೇಜ್ ರಾಜಕಾರಣ ಮಾಡ್ತಿದ್ದಾರೆ. ಇದನ್ನ ಜೆಡಿಎಸ್ ಮತ್ತು ಬಿಜೆಪಿ ಪಕ್ಷದವರು ಹೇಳ್ತಿಲ್ಲ. ಇದನ್ನ ಕಾಂಗ್ರೆಸ್ ಹಿರಿಯ ಶಾಸಕರೇ ಹೇಳ್ತಿದ್ದಾರೆ.ಜನ ನಮಗೆ ಮತ ಹಾಕಿ ಗೆಲ್ಸಿದ್ದಾರೆ, ಅಭಿವೃದ್ಧಿ ಮಾಡೋಕ್ಕೆ ಆಗ್ತಿಲ್ಲ ಎಂದು ಅಸಹಾಯಕತೆ ಹೊರ ಹಾಕ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಇದೇ ವೇಳೆ ಕೋಲಾರ ಜಿಲ್ಲೆಗೆ ಹೆಚ್.ಡಿ. ದೇವೇಗೌಡರು ಹಾಗೂ ಕುಮಾರಣ್ಣನವರು ನೀಡಿದ ಕೊಡುಗೆಗಳ ಬಗ್ಗೆ ಕಾರ್ಯಕರ್ತರಿಗೆ ತಿಳಿಸಿದರು. ೨೦೦೬ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಯರಗೋಳ್ ಡ್ಯಾಂ ಯೋಜನೆಗೆ ಶಂಕುಸ್ಥಾಪನೆ ಮಾಡಲಾಗಿತ್ತು. ೩೦೦ ಎಕರೆ ಪ್ರದೇಶದಲ್ಲಿ ಯರಗೋಳ್ ಗ್ರಾಮದ ಬಳಿ ವ್ಯರ್ಥವಾಗಿ ತಮಿಳುನಾಡಿಗೆ ಹರಿದು ಹೋಗುತ್ತಿದ್ದ ನೀರಿಗೆ ಅಡ್ಡಲಾಗಿ ನಿರ್ಮಿಸಿರುವ ಡ್ಯಾಂ ಮೂರು ತಾಲ್ಲೂಕಿನ ಜನರ ಕುಡಿಯುವ ನೀರಿನ ಬವಣೆ ತೀರಿಸುತ್ತಿದೆ ಎಂದು ಅವರು ಹೇಳಿದರು.

ಮುಳಬಾಗಿಲು ಕ್ಷೇತ್ರದ ಸಮೃದ್ದಿ ಮಂಜುನಾಥ್ ನನ್ನ ಸಂಬ0ಧ ಧೀರ್ಘಕಾಲದ ಸಂಬ0ಧ ಚುನಾವಣೆಯಲ್ಲಿ ಸೋತರು ಛಲಬಿಡದೆ ಹೋರಾಡಿ ಗೆದ್ದಿದ್ದಾರೆ. ಡಿಸಿಸಿ ಬ್ಯಾಂಕ್, ಕೋಮುಲ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಮಂಜರವರಿಗೆ ಬೇಸರವಿದೆ ನನ್ನ ಜೊತೆಗೆ ಸರಿಯಾಗಿ ಹೆಜ್ಜೆ ಹಾಕುತ್ತಿಲ್ಲ ಎಂದು. ಮಂಜಣ್ಣನ ಮನಸ್ಸಿನಲ್ಲಿ ಕಲ್ಮಶವಿಲ್ಲ, ಹಿಂದೆ-ಮು0ದೆ ಮಾತನಾಡುವುದಿಲ್ಲ. ನೇರವಾಗಿ ಮಾತನಾಡುತ್ತಿದ್ದಾರೆ. ರಾಜ್ಯವಾಪ್ತಿ ಪಕ್ಷ ಸಂಘಟನೆ ಮಾಡುತ್ತಿದ್ದೇನೆ. ತಾ.ಪಂ.ಜಿ.ಪA ಚುನಾವಣೆಯಲ್ಲಿ ಜೆಡಿಎಸ್ ಗೆ ಗೆಲುವು ಆಗಬೇಕಯ. ನಮ್ಮ ಶಕ್ತಿ ಮುಂದಿನ ೨೦೨೮ಕ್ಕೆ ಜೆಡಿಎಸ್ ಶಾಸಕರು ಗೆಲ್ಲಬೇಕು. ನಾನು ಸುಮ್ನನೆ ಕೂರುವುದಿಲ್ಲ. ನಿಮ್ಮನ್ನ ಬಿಡುವುದಿಲ್ಲ. ನಿರಂತರವಾಗಿ ಸಂಘಟನೆ ಮಾಡುತ್ತೇನೆ. ಹಸುಗೊಸು ಇದ್ದಂತೆ, ಬಸವಣ್ಣನ ಥರ ತಲೆ ಅಲ್ಲಾಡಿಸುತ್ತಾರೆ. ಇಂತಹ ಎಂಪಿ ಪಡೆದಿರುವುದಕ್ಕೆ ಹೆಮ್ಮೆ.ಕೆಲಸಗಾರ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕೋಲಾರ ಜಿಲ್ಲೆಯ ಮೊಮ್ಮಗ. ತಳಗವಾರಕ್ಕೆ ಬರುತ್ತಿದ್ದೆ. ಕೋಲಾರ- ಚಿಕ್ಕಬಳ್ಳಾಪುರ ಜಿಲ್ಲೆಯ ಜನರು ಶಾಸಕರನ್ನ ಕೊಟ್ಟಿದ್ದಾರೆ. ೧೧ ಕ್ಷೇತ್ರದಲ್ಲಿ ೮ ಗೆಲ್ಲುತ್ತೇವೆ.ಅಭ್ಯರ್ಥಿಗಳು ತಯಾರಾಗಬೇಕು. ಜೆಡಿಎಸ್ ಮೈತ್ರಿಯಲ್ಲಿದ್ದೇವೆ. ಹಿಂದೆ ಸ್ವತಂತ್ರವಾಗಿ ಎದುರಿಸುತ್ತೇದ್ದೇವೆ. ಹಿಂದೆ ಚುನಾವಣೆಗೆ ಆರು ತಿಂಗಳು ಇದ್ದಾಗ ರೆಡಿಯಾಗುತ್ತಿದ್ದೇವು. ಸಂಘಟನೆ ಕುಸಿಯಬಾರದು. ಹೋರಾಟ ಮಾಡಬೇಕು ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಹೋರಾಡುತ್ತೇನೆ.ದೇವೇಗೌಡರಿಗೆ ಮಾತು ಕೊಟ್ಟಿದ್ದೇನೆ ಎಂದರು.

ಕುಮಾರಣ್ಣ ಮನಸ್ಸಿನಲ್ಲಿ ನೋವಿದೆ. ರಾಜ್ಯದಲ್ಲಿ ಕಡಿಮೆ ಆಡಳಿತ ಮಾಡಿದ್ದಾರೆ. ಪಕ್ಷಕ್ಕಾಗಿ ದುಡಿದವರಿಗೆ ಏನು ಮಾಡಿಲ್ಲ ಅನ್ನೋ ನೋವಿದೆ. ಕೆಟ್ಟ ಸರ್ಕಾರ ಇತಿಹಾದ ಪುಟಗಳಲ್ಲಿ ಉಳಿಯುತ್ತದೆ. ಕಾಂಗ್ರೆಸ್ ಶಾಸಕರು ಅಭಿವೃದ್ಧಿಗೆ ಅನುದಾನ ಕೋರಿ ಬೀದಿಗೆ ಬಂದಿದ್ದಾರೆ. ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕರು ಅಸಾಯಕರಾಗಿದ್ದಾರೆ. ಚೀ.ತೂ ಅಂತಾ ಉಗಿಯುತ್ತಿದ್ದಾರೆ ಎಂದು ಮಾಧ್ಯಮ ಮುಂದೆ ಬೇಸರ ಹೊರ ಹಾಕುತ್ತಿದ್ದಾರೆ. ಚುನಾವಣಾ ಬರುವವರಿಗೆ ಗ್ಯಾರಂಟಿ ಯೋಜನೆಗಳಿಗೆ ಹಣ ಹಾಕಲ್ಲ. ಜನರನ್ನು ಯಾಮಾರಿಸುತ್ತಿದ್ದಾರೆ. ಕಾಂಗ್ರೆಸ್ ಮೂರು ವರ್ಷದಲ್ಲಿ ಕುಸಿಯುತ್ತದೆ. ರಾಜಕಾರಣ ಅಧಿಕಾರಕ್ಕೆ ಮಾಡುವುದಿಲ್ಲ. ಅಧಿಕಾರ ನಮ್ಮನ್ನ ಹುಡುಕಿಕೊಂಡು ಬರಬೇಕು. ದೇವೇಗೌಡರು ಮೂರುಮುಕ್ಕಾಲು ವರ್ಷ ಆಡಳಿತ ನಡೆಸಿದ್ದಾರೆ ಎಂದು ತಿಳಿಸಿದರು.

ಹಿಮಾಚಕಪ್ರದೇಶ, ತೆಲಾಂಗಣದಲ್ಲಿ ಗ್ಯಾರಂಟಿಗೆ ಹಣವಿಲ್ಲದೆ ಒದ್ದಾಡುತ್ತಿದ್ದಾರೆ. ಗ್ಯಾರಂಟಿ ಹೆಸರಿನಲ್ಲಿ ಅಭಿವೃದ್ಧಿ ಶೂನ್ಯ. ಕಾಸು ಕೊಟ್ಟರೆ ಕೆಲಸಗಳನ್ನ ಹಾಕಿಸಿಕೊಂಡು ಬರುತ್ತಿದ್ದಾರೆ. ಇದು ಕಾಂಗ್ರೆಸ್ ಸಾಧನೆ. ತಾನಾಗಿ ತಾನೆ ಅಧಿಕಾರಕ್ಕೆ ಬರುತ್ತದೆ ಎಂದು ಮನೆಯಲ್ಲಿ ಕುಳಿತುಕೊಳ್ಳಬೇಡಿ. ಮುಖಂಡರಿಗೆ ಕಿವಿಮಾತು ಹೇಳಿದರು. ಬಂಗಾರಪೇಟೆಯಲ್ಲಿ ಬೃಹತ್ ಬೈಕ್ ರ‍್ಯಾಲಿ ಮತ್ತು ಎತ್ತಿನ ಗಾಡಿಯಲ್ಲಿ ನಿಖಿಲ್ ಕುಮಾರಸ್ವಾಮಿ ಅವರನ್ನ ರೋಡ್ ಶೋ ಮೂಲಕ ಪಕ್ಷದ ಕಾರ್ಯಕರ್ತರು ಪ್ರೀತಿಪೂರ್ವಕವಾಗಿ ಸ್ವಾಗತಿಸಲಾಯಿತು

ಕಾರ್ಯಕ್ರಮದಲ್ಲಿ ಸಂಸದರಾದ ಮಲ್ಲೇಶ್ ಬಾಬು, ಶಾಸಕರು ಜಿ.ಕೆ. ವೆಂಕಟಶಿವಾರೆಡ್ಡಿ ರವರು, ವಿಧಾನಪರಿಷತ್ ಸದಸ್ಯರಾದ ಗೋವಿಂದ ರಾಜಣ್ಣ ರವರು, ಮಾಜಿ ವಿಧಾನ ಪರಿಷತ್ ಸದಸ್ಯರಾದ ಆರ್. ಚೌಡರೆಡ್ಡಿ ರವರು, ಮಹಿಳಾ ಘಟಕದ ರಾಜ್ಯಾಧ್ಯಕ್ಷರಾದ ಶ್ರೀಮತಿ ರಶ್ಮಿ ರಾಮೇಗೌಡ ರವರು, ಮುಖಂಡರಾದ ಕೆ.ಬಿ. ಗೋಪಾಲಕೃಷ್ಣ, ಬಿ.ವಿ. ಹರೀಶ್ , ಶ್ರೀಮತಿ ಗಾಯತ್ರಿ ಮುತ್ತಪ್ಪ ಸೇರಿದಂತೆ ಪಕ್ಷದ ಪದಾಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

ಚಿತ್ರ : ಕೋಲಾರ ಮತ್ತು ಬಂಗಾರಪೇಟೆಯಲ್ಲಿ ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಗುರುವಾರ ಕಾರ್ಯಕರ್ತರ ಸಭೆ ನಡೆಸಿದರು. ಬಂಗಾರಪೇಟೆಯಲ್ಲಿ ಎತ್ತಿನ ಬಂಡಿಯಲ್ಲಿ ಮೆರವಣಿಗೆಯಲ್ಲಿ ತೆರಳಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande