ಪೆಟ್ರೋಲ್ ಬಂಕ್‌ನಲ್ಲಿ ಕಳ್ಳತನ : ಹಣದ ಬ್ಯಾಗ್ ದೋಚಿದ ದುಷ್ಕರ್ಮಿಗಳು
ಗದಗ, 10 ಜುಲೈ (ಹಿ.ಸ.) : ಆ್ಯಂಕರ್ : ಗದಗ ನಗರದ ಬೆಟಗೇರಿಯ ಶರಣಬಸವೇಶ್ವರ ನಗರದ ಸಾಯಿ ಪೆಟ್ರೋಲ್ ಬಂಕ್‌ನಲ್ಲಿ ಕಳ್ಳತನ ನಡೆದಿದೆ. ತಡರಾತ್ರಿ ನಡೆದ ಈ ಘಟನೆ ಸ್ಥಳೀಯರಲ್ಲೇ ಭಯ ಹಾಗೂ ಆತಂಕ ಸೃಷ್ಟಿಸಿದೆ. ಮೂವರು ದುಷ್ಕರ್ಮಿಗಳು ಗಾಜಿನ ಬಾಗಿಲು ಒಡೆದು ನುಗ್ಗಿ, ಮಲಗಿದ್ದ ಸಿಬ್ಬಂದಿ ಫಕೀರೇಶ ಅವರಿಗೆ ಖಾರದ
ಪೋಟೋ


ಗದಗ, 10 ಜುಲೈ (ಹಿ.ಸ.) :

ಆ್ಯಂಕರ್ : ಗದಗ ನಗರದ ಬೆಟಗೇರಿಯ ಶರಣಬಸವೇಶ್ವರ ನಗರದ ಸಾಯಿ ಪೆಟ್ರೋಲ್ ಬಂಕ್‌ನಲ್ಲಿ ಕಳ್ಳತನ ನಡೆದಿದೆ. ತಡರಾತ್ರಿ ನಡೆದ ಈ ಘಟನೆ ಸ್ಥಳೀಯರಲ್ಲೇ ಭಯ ಹಾಗೂ ಆತಂಕ ಸೃಷ್ಟಿಸಿದೆ.

ಮೂವರು ದುಷ್ಕರ್ಮಿಗಳು ಗಾಜಿನ ಬಾಗಿಲು ಒಡೆದು ನುಗ್ಗಿ, ಮಲಗಿದ್ದ ಸಿಬ್ಬಂದಿ ಫಕೀರೇಶ ಅವರಿಗೆ ಖಾರದ ಪುಡಿ ಎರಚಿ, ಚಾಕು ತೋರಿಸಿ ಬೆದರಿಸಿ ಹಣ ದೋಚಿದ್ದಾರೆ. ನಿನ್ನೆ ರಾತ್ರಿಯ ಕಲೆಕ್ಷನ್ ಇರುವ ಹಣದ ಬ್ಯಾಗ್‌ನ್ನು ಪಡೆದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

ಹಣ ನೀಡದಿದ್ದರೆ ಚುಚ್ಚುತ್ತೇನೆಂದು ಬೆದರಿಕೆ ಹಾಕಿದ್ದಕ್ಕೆ ಫಕೀರೇಶನ ಹಣ ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಬೆಳಿಗ್ಗೆ ಮಾಲೀಕರು ಬಂದು ಸಿಸಿಟಿವಿ ದೃಶ್ಯಾವಳಿಗಳನ್ನು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.

ಘಟನೆ ಸಂಬಂಧ ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸರು ಶ್ವಾನಪಡೆ ಹಾಗೂ ಫೊರೆನ್ಸಿಕ್ ತಂಡದೊಂದಿಗೆ ಪರಿಶೀಲನೆ ನಡೆಸುತ್ತಿದ್ದಾರೆ. ಪೆಟ್ರೋಲ್ ಬಂಕ್ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿಗಳನ್ನು ಪತ್ತೆ ಹಚ್ಚಲು ತನಿಖೆ ಮುಂದುವರೆದಿದೆ.

ಹಿಂದೂಸ್ತಾನ್ ಸಮಾಚಾರ್ / Lalita MP


 rajesh pande