ಸುಖ ಸಂಸಾರಕ್ಕೆ ಒಂದು ಬೇಕು ಎರಡು ಸಾಕು
ಕೊಪ್ಪಳ, 10 ಜುಲೈ (ಹಿ.ಸ.) : ಆ್ಯಂಕರ್ : ವಿಶ್ವ ಜನಸಂಖ್ಯಾ ದಿನವನ್ನು ಪ್ರತಿ ವರ್ಷ ಜುಲೈ 11ರಂದು ಆಚರಿಸುತ್ತಾ ಬರಲಾಗುತ್ತಿದೆ. ಇದರ ಉದ್ದೇಶ ಜಾಗತಿಕಮಟ್ಟದಲ್ಲಿ ಜನಸಂಖ್ಯೆ ಹೆಚ್ಚಳದಿಂದಾಗುವ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸುವುದರ ಜೊತೆಗೆ ಕುಟುಂಬ ಯೋಜನೆ ಪ್ರಾಮುಖ್ಯತೆ, ಲಿಂಗ ಸಮಾನತೆ, ಬಡತನ,
ಸುಖ ಸಂಸಾರಕ್ಕೆ ಒಂದು ಬೇಕು ಎರಡು ಸಾಕು


ಸುಖ ಸಂಸಾರಕ್ಕೆ ಒಂದು ಬೇಕು ಎರಡು ಸಾಕು


ಸುಖ ಸಂಸಾರಕ್ಕೆ ಒಂದು ಬೇಕು ಎರಡು ಸಾಕು


ಕೊಪ್ಪಳ, 10 ಜುಲೈ (ಹಿ.ಸ.) :

ಆ್ಯಂಕರ್ : ವಿಶ್ವ ಜನಸಂಖ್ಯಾ ದಿನವನ್ನು ಪ್ರತಿ ವರ್ಷ ಜುಲೈ 11ರಂದು ಆಚರಿಸುತ್ತಾ ಬರಲಾಗುತ್ತಿದೆ. ಇದರ ಉದ್ದೇಶ ಜಾಗತಿಕಮಟ್ಟದಲ್ಲಿ ಜನಸಂಖ್ಯೆ ಹೆಚ್ಚಳದಿಂದಾಗುವ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸುವುದರ ಜೊತೆಗೆ ಕುಟುಂಬ ಯೋಜನೆ ಪ್ರಾಮುಖ್ಯತೆ, ಲಿಂಗ ಸಮಾನತೆ, ಬಡತನ, ತಾಯಿ ಆರೋಗ್ಯ ಮತ್ತು ಮಾನವ ಹಕ್ಕುಗಳಂತಹ ಜನಸಂಖ್ಯಾ ಸಮಸ್ಯೆಗಳ ಬಗ್ಗೆ ಜನರಿಗೆ ಅರಿವು ಮೂಡಿಸುವುದರ ಜೊತೆಗೆ ವ್ಯಕ್ತಿ ಮತ್ತು ಕುಟುಂಬಗಳಿಗೆ ತಮ್ಮ ಸಂತಾನೋತ್ಪತ್ತಿ ಆಯ್ಕೆಗಳ ಮೇಲೆ ನಿಯಂತ್ರಣ ಸಾಧಿಸಲು ಸಹಾಯ ಮಾಡುತ್ತದೆ.

ವಿಶ್ವದ ಜನಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇರುವ ಇಂದಿನ ದಿನಮಾನಗಳಲ್ಲಿ ಜನಸಂಖ್ಯೆ ಹೆಚ್ಚಳದಿಂದಾಗುವ ದುಷ್ಪರಿಣಾಮಗಳ ಕುರಿತು ನಾವು ಎಚ್ಚೆತ್ತುಕೊಳ್ಳಬೇಕಿದೆ. ಚಿಕ್ಕ ಕುಟುಂಬ ಚೊಕ್ಕ ಕುಟುಂಬ. ಮನೆಗೊಂದು ಮಗು ಊರಿಗೊಂದು ವನ. ಸುಖ ಸಂಸಾರಕ್ಕೆ ಒಂದು ಮಗು ಬೇಕು ಎರಡು ಸಾಕು ಎನ್ನುವ ಉಕ್ತಿಯನ್ನು ನಾವೆಲ್ಲರೂ ಪಾಲಿಸಬೇಕಾಗಿದೆ. ಜಾಗತಿಕ ಮಟ್ಟದಲ್ಲಿ ಜನಸಂಖ್ಯೆ ಹೆಚ್ಚಳದಿಂದ ಉಂಟಾಗುವ ಹಲವಾರು ಸಮಸ್ಯೆಗಳನ್ನು ತಡೆಗಟ್ಟಲು ಕುಟುಂಬ ಯೋಜನೆ ಮತ್ತು ಮಾನವ ಹಕ್ಕುಗಳು ಹಾಗೂ ತಾಯಂದಿರ ಆರೋಗ್ಯದ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ.

ಪ್ರಸ್ತುತ ವಿಶ್ವದ ಜನಸಂಖ್ಯೆ 8.23 ಬಿಲಿಯನ್‍ನಷ್ಟಿದ್ದು, ಭಾರತದ ಜನಸಂಖ್ಯೆ 146 ಕೋಟಿಯಾಗಿದೆ. ಭಾರತವು ವಿಶ್ವದಲ್ಲಿಯೇ ಅತೀ ಹೆಚ್ಚು ಜನಸಂಖ್ಯೆಯನ್ನು ಹೊಂದಿದ ದೇಶವಾಗಿದ್ದು, ಜನಸಂಖ್ಯೆ ಹೆಚ್ಚಳದಿಂದ ನಿರುದ್ಯೋಗ, ಬಡತನ, ಆಹಾರ, ವಸತಿ ಸಮಸ್ಯೆಗಳು ಹಾಗೂ ದೇಶದ ಆರ್ಥಿಕತೆಯ ಬೆಳವಣಿಗೆ ಮೇಲೆ ದುಷ್ಪರಿಣಾಮ ಬೀರುತ್ತದೆ.

2025ರ ವಿಶ್ವ ಜನಸಂಖ್ಯಾ ದಿನದ ಘೋಷವಾಕ್ಯ ``ಮೊದಲ ಗರ್ಭಧಾರಣೆಗೆ ಹಾಗೂ ನಂತರದ ಯೋಜಿತ ಗರ್ಭದಾರಣೆಗೆ ಆರೋಗ್ಯಕರ ದೇಹ, ಮನಸ್ಸು ಮತ್ತು ವಯಸ್ಸು ಅತ್ಯವಶ್ಯಕ'' ಎಂಬುದಾಗಿದೆ.

ಸರಿಯಾದ ವಯಸ್ಸಿಗೆ ಮದುವೆ, ಮಕ್ಕಳ ಜನನದ ನಡುವಿನ ಅಂತರ ಕಾಪಾಡಿಕೊಳ್ಳುವುದು ಮುಖ್ಯವಾಗಿದೆ. ಚಿಕ್ಕ ವಯಸ್ಸಿನಲ್ಲಿ ಮೇಲಿಂದ ಮೇಲೆ ಗರ್ಭಧರಿಸುವುದು ತಾಯಿ ಮತ್ತು ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಒಂದು ಮಗುವಿನ ನಂತರ ಇನ್ನೊಂದು ಮಗು ಪಡೆಯಬೇಕಾದರೆ ಕನಿಷ್ಠ 2 ರಿಂದ 3 ವರ್ಷಗಳ ಅಂತರವನ್ನು ಕಾಯ್ದುಕೊಳ್ಳಬೇಕು ಮತ್ತು ಮಕ್ಕಳನ್ನು ಪಡೆಯಲು ಬಯಸದೆ ಇದ್ದಲ್ಲಿ ದೀರ್ಘಕಾಲಿನ ಮತ್ತು ಶಾಶ್ವತ ಗರ್ಭನಿರೋಧಕ ವಿಧಾನಗಳನ್ನು ಪಾಲಿಸಬೇಕು.

ಜನಸಂಖ್ಯಾ ನಿಯಂತ್ರಣಕ್ಕಾಗಿ ತಾತ್ಕಾಲಿಕ ಮತ್ತು ದೀರ್ಘಕಾಲಿನ ವಿಧಾನಗಳನ್ನು ಅನುಸರಿಸುವುದು;

ತಾತ್ಕಾಲಿಕ ವಿಧಾನಗಳಾದ ಅನಪೇಕ್ಷಿತ ಗರ್ಭಧಾರಣೆ ಮತ್ತು ಲೈಂಗಿಕ ಸೋಂಕುಗಳು ಇವೆರಡನ್ನೂ ತಡೆಯಲು ಕಾಂಡೋಮ್‍ಗಳ(ನಿರೋಧ್) ಉಪಯೋಗ, ಸಂಯೋಜಿತ ಗರ್ಭನಿರೋಧಕ ಮಾತ್ರೆಗಳು(ಮಾಲಾ-ಎನ್) ಹಾರ್ಮೋನ್ ಸಹಿತ ಮಾತ್ರೆಗಳು, ಸೆಂಟ್ ಕ್ರೋಮನ್(ಛಾಯಾ) ಹಾರ್ಮೋನ್ ರಹಿತ ಮಾತ್ರೆಗಳು ಎದೆ ಹಾಲುಣಿಸುವ ಮತ್ತು ಎದೆ ಹಾಲುಣಿಸದೆ ಇರುವ ಮಹಿಳೆಯರಿಗಾಗಿ ಸುರಕ್ಷಿತ ಮತ್ತು ಪರಿಣಾಮಕಾರಿ ವಿಧಾನ ಇದಾಗಿದ್ದು ಯಾವುದೇ ವಯಸ್ಸಿನ ಮಹಿಳೆಯು ಆಕೆಗೆ ಮಕ್ಕಳಿದ್ದರೂ ಅಥವಾ ಇಲ್ಲದಿದ್ದರೂ ಇದನ್ನು ಬಳಸಬಹುದಾಗಿದ್ದು, ಮೊದಲ ಡೋಸ್‍ಗಾಗಿ ಆರೋಗ್ಯ ಸಹಾಯಕಿ ಅಥವಾ ವೈದ್ಯರನ್ನು ಸಂಪರ್ಕಿಸಿ ತೆಗೆದುಕೊಳ್ಳಬೇಕು. ತುರ್ತು ಗರ್ಭನಿರೋಧಕ ಮಾತ್ರೆಗಳು(ಇಜಿ ಪಿಲ್ಸ್) ಅಸುರಕ್ಷಿತ ಲೈಂಗಿಕ ಸಂಭೋಗ ಅಥವಾ ಇತರೆ ಗರ್ಭನಿರೋಧಕಗಳ ಬಳಕೆಯ ವೈಫಲ್ಯಗಳಾದ ಸಂದರ್ಭದಲ್ಲಿ ಲೈಂಗಿಕ ಕ್ರಿಯೆಯ 72 ಗಂಟೆಗಳ ಒಳಗೆ ಅಥವಾ ಶೀಘ್ರವೇ ತೆಗೆದುಕೊಂಡಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಮತ್ತು ಗರ್ಭಪಾತಕ್ಕೆ ಕಾರಣವಾಗುವುದಿಲ್ಲ.

ದೀರ್ಘಕಾಲೀನ ವಿಧಾನಗಳಾದ ಅಂತರ ಚುಚ್ಚುಮದ್ದು ಮೂರು ತಿಂಗಳಿಗಾಗಿ ಸುರಕ್ಷಿತ ಮತ್ತು ಪರಿಣಾಮಕಾರಿ. ಮುಂದಿನ ಚುಚ್ಚುಮದನ್ನು ಸಮಯಕ್ಕೆ ಸರಿಯಾಗಿ ಪಡೆಯಬೇಕು. ತೂಕದಲ್ಲಿ ಸ್ವಲ್ಪ ಬದಲಾವಣೆ ಆಗಬಹುದು. ಕೊನೆಯ ಚುಚ್ಚುಮದ್ದು ಪಡೆದ ನಂತರ ಪುನಃ ಗರ್ಭಧರಿಸಲು ಚುಚ್ಚುಮದ್ದು ಪಡೆದ ನಂತರ ಪುನಃ ಗರ್ಭಧರಿಸಲು 7 ರಿಂದ 10 ತಿಂಗಳು ಬೇಕಾಗುತ್ತದೆ. ವಂಕಿ(ಐಯುಸಿಡಿ) ಅಳವಡಿಸಿಕೊಳ್ಳುವುದು ಅತ್ಯಂತ ಸುರಕ್ಷಿತ ಹಾಗೂ ಪರಿಣಾಮಕಾರಿ ವಿಧಾನಗಳಲ್ಲೊಂದಾಗಿದ್ದು, 5 ರಿಂದ 10 ವರ್ಷಗಳ ಕಾಲ ಗರ್ಭಧಾರಣೆಯಿಂದ ಕಾಪಾಡುತ್ತದೆ ಮತ್ತು ಗರ್ಭಧರಿಸಲು ಬಯಸಿದರೆ ಯಾವುದೇ ಸಮಯದಲ್ಲಿ ತೆಗೆಸಿಕೊಳ್ಳಬಹುದು. ಮಹಿಳಾ ಸಂತಾನ ನಿರೋಧಕ ಶಸ್ತ್ರಚಿಕಿತ್ಸೆ (ಟ್ಯುಬೆಕ್ಟಮಿ) ಮತ್ತು ಪುರುಷ ಸಂತಾನ ನಿರೋಧಕ ಶಸ್ತ್ರಚಿಕಿತ್ಸೆ (ವ್ಯಾಸಕ್ಟಮಿ)ಯು ಮಕ್ಕಳು ಸಾಕೆಂದು ಬಯಸಿದಲ್ಲಿ ಮಹಿಳೆ ಅಥವಾ ದಂಪತಿಗಳಿಗಾಗಿ ಇರುವ ಸುರಕ್ಷಿತ ಮತ್ತು ಶಾಶ್ವತ ವಿಧಾನ. ಇವುಗಳನ್ನು ಅನುಸರಿಸುವ ಮೂಲಕ ಜನಸಂಖ್ಯೆ ನಿಯಂತ್ರಣ ವಿಧಾನಗಳನ್ನು ಪಾಲಿಸಬಹುದಾಗಿದೆ.

ಜನಸಂಖ್ಯಾ ಸ್ಪೋಟದಿಂದ ಆಹಾರ, ನೀರು, ವಸತಿ ಹಾಗೂ ಸಸ್ಯ ಸಂಪತ್ತಿನ ಕೊರತೆ ಜೊತೆಗೆ ವಾಯು, ಜಲ ಮತ್ತು ಶಬ್ಧ ಮಾಲಿನ್ಯ, ಸಾಮಾಜಿಕ ಅಸಮಾನತೆ ಹಾಗೂ ನಗರ ಪ್ರದೇಶಗಳಲ್ಲಿ ಕೊಳಚೆ ಪ್ರದೇಶಗಳ ಉಲ್ಭಣದಿಂದಾಗಿ ಸಾಂಕ್ರಾಮಿಕ ರೋಗಗಳ ಹೆಚ್ಚಳ ಸೇರಿದಂತೆ ಇತರೆ ಸಮಸ್ಯೆಗಳು ಉಂಟಾಗುತ್ತವೆ.

ಜನಸಂಖ್ಯೆಯಿಂದಾಗುವ ಈ ದುಷ್ಪರಿಣಾಮಗಳ ಕುರಿತು ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವಿವಿಧ ಸರ್ಕಾರ ಮತ್ತು ಸರ್ಕಾರೇತರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಜುಲೈ 11ರ ವಿಶ್ವ ಜನಸಂಖ್ಯೆ ದಿನದಂದು ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜನರಲ್ಲಿ ಅರಿವು ಮೂಡಿಸಲಾಗುತ್ತದೆ. ದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ಸರ್ಕಾರ ಜಾರಿಗೆ ತರುವ ಕುಟುಂಬ ಕಲ್ಯಾಣ ಯೋಜನೆಗಳನ್ನು ನಾವೆಲ್ಲರು ಪಾಲನೆ ಮಾಡುವ ಮೂಲಕ ಜನಸಂಖ್ಯಾ ನಿಯಂತ್ರಣಕ್ಕೆ ಕಡಿವಾಣ ಹಾಕೋಣ.

ಲೇಖನ :- ಡಾ. ಸುರೇಶ ಜಿ.

ಸಹಾಯಕ ನಿರ್ದೇಶಕರು,

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕೊಪ್ಪಳ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande