ಸಂಡೂರು ವ್ಯಕ್ತಿ ಕಾಣೆ
ಸಂಡೂರು, 21 ಜೂನ್ (ಹಿ.ಸ.) : ಆ್ಯಂಕರ್ : ಸಂಡೂರು ತಾಲ್ಲೂಕಿನ ಸ್ವಾಮಿಹಳ್ಳಿ ಗ್ರಾಮದ ಕೆ.ತಿಪ್ಪೇರುದ್ರ ಗೌಡ(32) ಜೂ.12 ರಂದು ಕಾಣೆಯಾಗಿರುವ ಕುರಿತು ಚೋರನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಠಾಣಾಧಿಕಾರಿ ತಿಳಿಸಿದ್ದಾರೆ. ಚಹರೆ ಗುರುತು ಅಂದಾಜು 5.6 ಅಡಿ ಎತ್ತರ, ದುಂಡು ಮುಖ,
ಸಂಡೂರು : ವ್ಯಕ್ತಿ ಕಾಣೆ


ಸಂಡೂರು, 21 ಜೂನ್ (ಹಿ.ಸ.) :

ಆ್ಯಂಕರ್ : ಸಂಡೂರು ತಾಲ್ಲೂಕಿನ ಸ್ವಾಮಿಹಳ್ಳಿ ಗ್ರಾಮದ ಕೆ.ತಿಪ್ಪೇರುದ್ರ ಗೌಡ(32) ಜೂ.12 ರಂದು ಕಾಣೆಯಾಗಿರುವ ಕುರಿತು ಚೋರನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಠಾಣಾಧಿಕಾರಿ ತಿಳಿಸಿದ್ದಾರೆ.

ಚಹರೆ ಗುರುತು

ಅಂದಾಜು 5.6 ಅಡಿ ಎತ್ತರ, ದುಂಡು ಮುಖ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು, ಕಪ್ಪು-ಕೆಂಪು ಮಿಶ್ರಿತ ಗುಂಗುರು ತಲೆ ಕೂದಲು ಹೊಂದಿದ್ದು, ಕಾಣೆಯಾದ ಸಂದರ್ಭದಲ್ಲಿ ನೀಲಿ ಬಣ್ಣದ ತುಂಬು ತೋಳಿನ ಅಂಗಿ ಹಾಗೂ ಬಾದಾಮಿ ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ.

ವ್ಯಕ್ತಿಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ಚೋರನೂರು ಪೊಲೀಸ್ ಠಾಣೆಯ ದೂ.08395-295100, ಪಿಎಸ್‍ಐ ಮೊ.9480803063, ಸಂಡೂರು ಸಿಪಿಐ ಮೊ.9480803036, ತೋರಣಗಲ್ಲು ಡಿಎಸ್‍ಪಿ ಮೊ.9480803010 ಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande