ಕೋಲಾರ, ೧೭ ಜೂನ್ (ಹಿ.ಸ) :
ಆ್ಯಂಕರ್ : ಕೋಲಾರದಲ್ಲಿ ದಾಖಲೆ ಹಾಗೂ ಕಟಿಪಿ ನಂಬರ್ ಇಲ್ಲದೆ ಸಂಚಚರಿಸುತ್ತಿದ್ದ ಆಟೋಗಳನ್ನು ತಡೆದು ತಪಾಸಣೆ ನಡೆಸಿ, ದಂಡ ವಿಧಿಸಿ ಸಂಚಾರಿ ನಿಯಮಗಳ ಕುರಿತು ಆಟೋ ಚಾಲಕರಿಗೆ ಸಂಚಾರಿ ಪೋಲೀಸರು ಜಾಗೃತಿ ಮೂಡಿಸಿದರು.
ಕೋಲಾರ ನಗರದಲ್ಲಿ ಇತ್ತೀಚೆಗೆ ಕಾರ್ಯಪ್ರವೃತ್ತರಾಗಿರುವ ಸಂಚಾರಿ ಪೋಲೀಸರು ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ದ ಪ್ರಕರಣ ದಾಖಲಿಸಿ ಎಚ್ಚರಿಕೆ ನೀಡುವ ಮೂಲಕ ವಾಹನ ದಟ್ಟಣೆ ಹಾಗೂ ನಿಯಮಗಳ ಉಲ್ಲಂಘಿಸುವ ವಾಹನ ಸವಾರರಿಗೆ ಬಿಸಿ ಮುಟ್ಟಿಸುವ ಮೂಲಕ ಕಾರ್ಯಕ್ಕೆ ಮುಂದಾಗಿದ್ದಾರೆ.
ಕೋಲಾರದಲ್ಲಿ ದಾಖಲೆ ಇಲ್ಲದೆ ಕೆಟಿಪಿ ನಂಬರ್ ಅಳವಡಿಸಿಕೊಳ್ಳದೆ, ಸಾಮರ್ಥ್ಯ ಕ್ಕೂ ಹೆಚ್ಚಿನ ಜನರನ್ನು ಕೂರಿಸಿಕೊಂಡು ಸಂಚರಿಸುತ್ತಿದ್ದ ೮೦ ಆಟೋಗಳನ್ನು ತಡೆದು ತಪಾಸಣೆ ನಡೆಸಿದ್ದಾರೆ ಅಲ್ಲದೆ ಅಂತಹ ಆಟೋಗಳನ್ನು ವಶಕ್ಕೆ ಪಡೆದು ದಾಖಲೆಗಳನ್ನು ಪರಿಶೀಲನೆ ನಡೆಸಿ ಸುಮಾರು ೪೦ ಸಾವಿರ ದಂಡ ವಿಧಿಸಿ ಎಚ್ಚರಿಕೆ ನೀಡಿದ್ದಾರೆ.
ಮುಂದೆ ಇದೇ ರೀತಿ ಕೋಲಾರದಲ್ಲಿ ಕಾರ್ಯಾಚರಣೆಯನ್ನು ಕೈಗೊಳ್ಳಲಾಗುವುದು. ವಾಹನ ಸವಾರರು ಕಡ್ಡಾಯವಾಗಿ ಚಾಲನಾ ಪರವಾನಗಿ, ವಾಹನಗಳ ಇನ್ಶೂರೆನ್ಸ್, ವಾಯು ಮಾಲಿನ್ಯ ತಪಾಸಣೆ ಇತರೆ ದಾಖಲೆ ಹೊಂದಿರಬೇಕು. ವಾಹನಗಳಲ್ಲಿ ಕರ್ಕಶ ಧ್ವನಿ ಸೂಸುವ ಸೈಲೆನ್ಸರ್ ಕರ್ಕಶ ಧ್ವನಿ ಹೊರಡಿಸುವ ಹಾರ್ನ್ಗಳನ್ನು ಹಾಕಬಾರದು. ದ್ವಿಚಕ್ರ ವಾಹನ ಚಾಲಕರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಟ್ರಿಪಲ್ ರೈಡಿಂಗ್, ಏಕಮುಖ ಸಂಚಾರ ಮಾಡಬಾರದು. ವಾಹನ ಸವಾರರು ಸೀಟ್ ಬೆಲ್ಟ್ ಧರಿಸಿರಬೇಕು. ಕಡ್ಡಾಯವಾಗಿ ಸಂಚಾರಿ ನಿಯಮಗಳನ್ನು ಪಾಲನೆ ಮಾಡುವ ಮೂಲಕ ವಾಹನ ಸವಾರರು ಪೋಲೀಸರೊಂದಿಗೆ ಕೈ ಜೊಡಿಸಬೇಕು ಎಂದು ಸಂಚಾರಿ ಪೋಲೀಸ್ ಠಾಣೆಯ ಪಿ.ಎಸ್.ಐ ಭಾರತಿ ವಾಹನ ಸವಾರರಿಗೆ ಹಾಗೂ ಆಟೋಚಾಲಕರಿಗೆ ಎಚ್ಚರಿಕೆ ನೀಡಿದರು.
ವಿಶೇಷ ಕಾರ್ಯಾಚರಣೆಯಲ್ಲಿ ಸಂಚಾರಿ ಪೋಲೀಸ್ ಠಾಣೆಯ ಪಿಎಸ್ಐ ನಾಗರತ್ನ, ಸಿಬ್ಬಂದಿ ಬಾಗಿಯಾಗಿದ್ದರು.
ಚಿತ್ರ : ಕೋಲಾರ ಸಂಚಾರಿ ಪೊಲೀಸರು ಆಟೋ ರಿಕ್ಷಗಳ ತಪಾಸಣೆ ನಡೆಸಿ ನಿಯಮ ಉಲ್ಲಂಘಿಸಿದ ಚಾಲಕರಿಗೆ ದಂಡ ವಿಧಿಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್