ಹೈನುರಾಸು ಘಟಕ ಮತ್ತು ಮೇವು ಕತ್ತರಿಸುವ ಯಂತ್ರಕ್ಕೆ ಅರ್ಜಿ ಆಹ್ವಾನ
ಹೊಸಪೇಟೆ , 17 ಜೂನ್ (ಹಿ.ಸ.) : ಆ್ಯಂಕರ್ : 2025-26 ನೇ ಸಾಲಿನ ಗಣಿ ಭಾದಿತ, ಪ್ರಭಾವಕ್ಕೊಳಗಾದ ಗ್ರಾಮಗಳಲ್ಲಿ ಫಲಾನುಭವಿಗಳಿಗೆ ಹೈನುರಾಸು (1+1) ಘಟಕ ಮತ್ತು 2 ಹೆಚ್‍ಪಿ ಸಾಮಥ್ರ್ಯವುಳ್ಳ ಮೇವು ಕತ್ತರಿಸುವ ಯಂತ್ರ ಕಾರ್ಯಕ್ರಮದಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಸಾಮಾನ್ಯ ವರ್ಗದ ಫಲಾನ
ಹೈನುರಾಸು ಘಟಕ ಮತ್ತು ಮೇವು ಕತ್ತರಿಸುವ ಯಂತ್ರಕ್ಕೆ ಅರ್ಜಿ ಆಹ್ವಾನ


ಹೊಸಪೇಟೆ , 17 ಜೂನ್ (ಹಿ.ಸ.) :

ಆ್ಯಂಕರ್ : 2025-26 ನೇ ಸಾಲಿನ ಗಣಿ ಭಾದಿತ, ಪ್ರಭಾವಕ್ಕೊಳಗಾದ ಗ್ರಾಮಗಳಲ್ಲಿ ಫಲಾನುಭವಿಗಳಿಗೆ ಹೈನುರಾಸು (1+1) ಘಟಕ ಮತ್ತು 2 ಹೆಚ್‍ಪಿ ಸಾಮಥ್ರ್ಯವುಳ್ಳ ಮೇವು ಕತ್ತರಿಸುವ ಯಂತ್ರ ಕಾರ್ಯಕ್ರಮದಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಹೊಸಪೇಟೆ ತಾಲೂಕು ವ್ಯಾಪ್ತಿಯಲ್ಲಿ ಹೈನುಗಾರಿಕೆ ಘಟಕ ನಿರ್ಮಾಣ ಮತ್ತು 2 ಹೆಚ್‍ಪಿ ಸಾಮಥ್ರ್ಯವುಳ್ಳ ಮೇವು ಕತ್ತರಿಸುವ ಯಂತ್ರಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಜೂ.25 ರೊಳಗೆ ಅರ್ಜಿಗಳನ್ನು ಪಡೆಯಬಹುದಾಗಿದೆ. ಘಟಕದ ಮೊತ್ತ 1.20 ಲಕ್ಷ ರೂ ವೆಚ್ಚದಲ್ಲಿ, ಎರಡು ಮಿಶ್ರತಳಿ ಹಸು, ಸುಧಾರಿತ ಎಮ್ಮೆ ಘಟಕ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವರ್ಗದವರಿಗೆ ಶೇ.90 ರಷ್ಟು ಸಹಾಯ ಧನದೊಂದಿಗೆ ಹಾಗೂ ಸಾಮಾನ್ಯ ವರ್ಗದವರಿಗೆ ಶೇ.60 ರಷ್ಟು ಸಹಾಯಧನ ಉಳಿದ ಮೊತ್ತ ಫಲಾನುಭವಿಯ ವಂತಿಕೆ ಅಥವಾ ಬ್ಯಾಂಕ್ ಸಾಲ ಹಾಗೂ ಉಚಿತ 2 ಹೆಚ್‍ಪಿ ಸಾಮಥ್ರ್ಯದ ಮೇವು ಕತ್ತರಿಸುವ ಯಂತ್ರವನ್ನು ಪಡೆಯಬಹುದಾಗಿದೆ. ಸರ್ಕಾರದ ನಿಯಮಗಳಂತೆ ಮಹಿಳೆಯರಿಗೆ ಶೇ.33 ರಷ್ಟು, ವಿಶೇಷ ಚೇತನರಿಗೆ ಶೇ.3 ರಷ್ಟು ಆದ್ಯತೆ ನೀಡಲಾಗುವುದು. ತಾಲೂಕಿನಲ್ಲಿ ಒಟ್ಟು 1323 ಹೈನುಗಾರಿಕೆ ಘಟಕ ನಿರ್ಮಾಣದ ಗುರಿ, ಒಟ್ಟು 104 ಮೇವು ಕತ್ತರಿಸುವ ಯಂತ್ರದ ಗುರಿಯನ್ನು ಹೊಂದಲಾಗಿದೆ ಎಂದು ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande