ಹೊಸಪೇಟೆ, 17 ಜೂನ್ (ಹಿ.ಸ.) :
ಆ್ಯಂಕರ್ : ಶ್ರೀಶಿವಕುಮಾರ ರಂಗ ಪ್ರಯೋಗ ಶಾಲೆಯ 2025-26 ನೇ ಸಾಲಿನ ರಂಗಶಿಕ್ಷಣಕ್ಕೆ (ಡಿಪ್ಲೋಮಾ ಇನ್ ಡ್ರಾಮಾ ಅರ್ಟ್ಸ್)ಗೆ ಆಸಕ್ತಿ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ ಎಂದು ಸಾಣೇಹಳ್ಳಿಯ ಶ್ರೀಶಿವಕುಮಾರ ರಂಗಪ್ರಯೋಗ ಶಾಲೆಯ ಪ್ರಾಚಾರ್ಯರು ತಿಳಿಸಿದ್ದಾರೆ.
ಪ್ರವೇಶಕ್ಕೆ ಕನಿಷ್ಠ ವಿದ್ಯಾರ್ಹತೆ ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾಗಿರಬೇಕು. ಪದವಿಧರರಿಗೆ ಅದ್ಯತೆ ನೀಡಲಾಗುವುದು. ರಂಗಭೂಮಿಯಲ್ಲಿ ಆಸಕ್ತಿಯಿದ್ದು, ಸ್ವಲ್ಪಮಟ್ಟಿನ ಅನುಭವ ಇರಬೇಕಾದದ್ದು ಅಗತ್ಯ. ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಉಚಿತ ಊಟ, ವಸತಿ ಸೌಲಭ್ಯವಿದೆ.
ಕರ್ನಾಟಕ ಹಾಗೂ ಭಾರತದ ರಂಗತಜ್ಞರಿಂದ ಮತ್ತು ಅತಿಥಿ ಉಪನ್ಯಾಸಕರಿಂದ ತರಗತಿಗಳು ನಡೆಯುತ್ತವೆ. ಗ್ರಂಥ ಭಂಡಾರ ಹಾಗೂ ದೃಶ್ಯ, ಶ್ರವ್ಯ ಪರಿಕರಗಳ ಅನುಕೂಲತೆ ಇದೆ. ರಂಗ ಶಾಲೆಯ ವಿದ್ಯಾರ್ಥಿಗಳಿಗೆ ಭಾರತೀಯ ರಂಗಭೂಮಿ, ಕನ್ನಡ ಮತ್ತು ನಾಟಕ ಸಾಹಿತ್ಯ ಪರಂಪರೆ, ಪಾಶ್ಚಾತ್ಯ ರಂಗಭೂಮಿ, ಆಹಾರ್ಯ, ಶಿಕ್ಷಣದಲ್ಲಿ ರಂಗಭೂಮಿ ಕುರಿತಾದ ಸೈದ್ಧಾಂತಿಕ ಮತ್ತು ಪ್ರಾಯೋಗಿಕ ತರಗತಿಗಳು ನಡೆಯುತ್ತವೆ. ಅರ್ಜಿಗಾಗಿ ರಂಗಶಾಲೆಯ ವೆಬ್‌ಸೈಟ್ www.theatreschoolsanehalli.org ನಲ್ಲಿ ಪ್ರವೇಶ ಅರ್ಜಿಯನ್ನು ಡೌನ್‌ಲೋಡ್ ಮಾಡಿಕೊಂಡು ಜೂ.25 ರೊಳಗಾಗಿ ಅರ್ಜಿಯನ್ನು ಭರ್ತಿ ಮಾಡಿ ಪ್ರಾಚಾರ್ಯರು ಶ್ರೀಶಿವಕುಮಾರ ರಂಗಪ್ರಯೋಗ ಶಾಲೆ, ಸಾಣೇಹಳ್ಳಿ, ಹೊಸದುರ್ಗ ತಾಲೂಕು, ಚಿತ್ರದುರ್ಗ ಜಿಲ್ಲೆ -577515 ವಿಳಾಸಕ್ಕೆ ಕಳುಹಿಸಬೇಕು. ಜೂ.27, 28 ರಂದು ಸಂದರ್ಶನವನ್ನು ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್