ಕೋಲಾರ, ೧೩ ಜೂನ್ (ಹಿ.ಸ.) :
ಆ್ಯಂಕರ್ : 41 ವರ್ಷಗಳಿಂದ ರಾಜಕೀಯದಲ್ಲಿ ಇದ್ದೀನಿ. ಇಂತಹ ದರಿದ್ರ ಭ್ರಷ್ಟಾಚಾರದ ಸರ್ಕಾರವನ್ನು ಯಾವತ್ತೂ ನೋಡಿಲ್ಲ. ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ ಮುಂದಿನ ಪ್ರತಿಯೊಂದು ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆ ನೀಡಬೇಕಾಗಿದೆ ಎಂದು ಜೆಡಿಎಸ್ ಜಿಲ್ಲಾ ಅಧ್ಯಕ್ಷ ಹಾಗೂ ಶಾಸಕ ಜಿಕೆ ವೆಂಕಟಶಿವಾರೆಡ್ಡಿ ತಿಳಿಸಿದರು
ಕೋಲಾರ ತಾಲೂಕಿನ ಚಲುವನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಕೋಮುಲ್ ಚುನಾವಣೆಯ ನೈರುತ್ಯ ಕ್ಷೇತ್ರದಿಂದ ಚಲುವನಹಳ್ಳಿ ನಾಗರಾಜ್ ಹಾಗೂ ಮಹಿಳಾ ಕ್ಷೇತ್ರದಿಂದ ಲಕ್ಷ್ಮೀಪ್ರಿಯಾ ಪರವಾಗಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು ಜಿಲ್ಲೆಯ ೧೩ ಕ್ಷೇತ್ರಗಳಲ್ಲಿ ಕನಿಷ್ಠ ೧೧ ಸ್ಥಾನ ಗೆಲ್ಲಬೇಕು ಕೋಮುಲ್ ಚುನಾವಣೆ ಮುಂದಿನ ಜಿಪಂ ತಾಪಂ ಚುನಾವಣೆಗೆ ಬುನಾದಿಯಾಗಲಿದೆ ನಮ್ಮ ಮೈತ್ರಿ ಪಕ್ಷದ ಅಭ್ಯರ್ಥಿಗಳನ್ನು ಕೈಹಿಡಿಯುವ ಮೂಲಕ ಆಶೀರ್ವಾದ ಮಾಡಬೇಕು ಎಂದರು
ಮಾಜಿ ಸಚಿವ ವರ್ತೂರು ಪ್ರಕಾಶ್ ಮಾತನಾಡಿ ಜೆಡಿಎಸ್ ಮತ್ತು ಬಿಜೆಪಿ ಅಂತೇನಿಲ್ಲ ಬರಿ ಮೈತ್ರಿ ಅಭ್ಯರ್ಥಿಗಳು ಗೆಲ್ಲಬೇಕು ನಾವೆಲ್ಲ ಒಂದೇ ಕುಮಾರಣ್ಣ ಹೇಗೆ ಹೇಳಿದರೆ. ಹಾಗೆ ಮಾಡಬೇಕು. ಕಾಂಗ್ರೆಸ್ ಪಕ್ಷ ಭ್ರಷ್ಡ ಆಡಳಿತ ನಡೆಯುತ್ತಿದೆ. ಕೋಮುಲ್‌ನಲ್ಲಿ ಸಾವಿರಾರು ಕೋಟಿ, ನುಂಗಿ ಇಡಿ ತನಿಖೆಗೆ ಸಿಕ್ಕಿ ಒದ್ದಾಡುತ್ತಿದ್ದಾರೆ. ಅವರನ್ನು ಕೆಲವರು ಬಚಾವ್ ಮಾಡಿದ್ದಾರೆ ಮುಂದೆ ಇದೇ ಅವರಿಗೆ ಮಾರಿಹಬ್ಬ ಬಿಜೆಪಿಯ ರಕ್ತ ಜೆಡಿಎಸ್‌ಗೆ ಹಾಕಿದ್ದೇವೆ. ನಮ್ಮನ್ನ ಒಟ್ಟಿಗೆ ಕರೆದುಕೊಂಡು ಹೋಗಬೇಕು ಗೆದ್ದ ಮೇಲೆ ಕೋಟೆಗಳನ್ನು ಕೊಡುವುದಕ್ಕೆ ಆಮಿಷ ಒಡ್ಡುತ್ತಾರೆ ಯಾರು ಹೋಗಬಾರದು ಎಂದರು.
ಸAಸದ ಎಂ.ಮಲ್ಲೇಶ್ ಬಾಬು ಮಾತನಾಡಿ ಕೋಮುಲ್ ಚುನಾವಣೆ ನಮಗೆ ಪ್ರತಿಷ್ಠೆಯಾಗಿದೆ ನಾಲ್ಕು ದಿನ ಕಷ್ಟ ಪಟ್ಟು ಕೆಲಸ ಮಾಡೋಣ ಮೈತ್ರಿ ಅಭ್ಯರ್ಥಿಗಳನ್ನು ಗೆಲ್ಲಿಸೋಣ ಚುನಾವಣೆಯಲ್ಲಿ ಎಲ್ಲರ ತೀರ್ಮಾನದಂತೆ ಅಭ್ಯರ್ಥಿ ಆಯ್ಕೆ ಮಾಡಿದ್ದು ಅವರ ಗೆಲುವು ಮುಖ್ಯವಾಗಬೇಕು ಎಂದರು.
ಶಾಸಕ ಸಮೃದ್ದಿ ಮಂಜುನಾಥ್ ಮಾತನಾಡಿ ನಮ್ಮಲ್ಲಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಗೊಂದಲ ಇತ್ತು ನಿಷ್ಠಾವಂತರನ್ನು ಗುರುತಿಸಿ ಆಯ್ಕೆ ಮಾಡಿದ್ದಾರೆ ಕಾಂಗ್ರೆಸ್ ಪಕ್ಷದಲ್ಲಿ ಎರಡು ಗುಂಪುಗಳು ಇದ್ದು ಅವರು ಒಡೆದಾಟ ಮಾಡಲಿ ನಾವು ಚುನಾವಣೆ ಮಾಡೋಣ ಎಂದರು.
ಸಭೆಯಲ್ಲಿ ಎಂಎಲ್ಸಿ ಇಂಚರ ಗೋವಿಂದರಾಜು, ಜಿಪಂ ಮಾಜಿ ಅಧ್ಯಕ್ಷೆ ಮಂಗಮ್ಮ ಮುನಿಸ್ವಾಮಿ, ಮುಖಂಡರಾದ ವಡಗೂರು ಡಿ.ವಿ ಹರೀಶ್, ಕೆ.ಬಿ.ಗೋಪಾಲಕೃಷ್ಣ, ಸಿಎಂಆರ್ ಶ್ರೀನಾಥ್, ಬೆಗ್ಲಿ ಪ್ರಕಾಶ್, ಪಾಲಾಕ್ಷಗೌಡ, ಅರುಣ್ ಪ್ರಸಾದ್, ಮಂಜುನಾಥ್, ಸುಧಾಕರ್, ರಘುಪತಿರೆಡ್ಡಿ, ಬಣಕನಹಳ್ಳಿ ನಟರಾಜ್, ವೆಂಕಟರಾಮೇಗೌಡ ಭಾಗವಹಿಸಿದ್ದರು.
ಚಿತ್ರ : ಕೋಲಾರ ತಾಲ್ಲೂಕಿನ ಚಲುವನಹಳ್ಳಿ ಗ್ರಾಮದಲ್ಲಿ ಶ್ರೀನಿವಾಶಪುರ ಶಾಸಕ ವೆಂಕಟಶಿವಾರೆಡ್ಡಿ ಹಾಲು ಉತ್ಪಾದಕರ ಒಕ್ಕೂಟದ ಚುನಾವಣೆಗೆ ಸ್ಪರ್ಧಿಸಿರುವ ಜೆಡಿಎಸ್ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್