ಕೋಲಾರ ಜೂ.೦೧, (ಹಿ.ಸ) :
ಆ್ಯಂಕರ್ : ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ವತಿಯಿಂದ ಪೋಕ್ಸೋ ಮತ್ತು ಬಾಲ್ಯ ವಿವಾಹ ನಿಷೇಧ ಕಾಯ್ದೆಗಳ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಕ್ಯಾಸಂಬಳ್ಳಿ ಪೊಲೀಸ್ ಠಾಣೆಯ ಪಿಎಸ್‌ಐ ಸಂಗಮೇಶ್‌ರವರು ನೀಲಗಿರಿಹಳ್ಳಿ ಗ್ರಾಮದಲ್ಲಿ, ಉರಿಗಾಂ ಪೊಲೀಸ್ ಠಾಣೆಯ ಪಿ.ಎಸ್.ಐ ರಾಜೇಶ್ವರಿ ರವರು ಮಾರಿಕುಪ್ಪಂನಲ್ಲಿ ಹಾಗೂ ಬೆಮೆಲ್‌ನಗರ ಪೊಲೀಸ್ ಠಾಣೆಯ ಪಿಎಸ್‌ಐ ಕು.ವಿದ್ಯಾಶ್ರೀ ಕುಮಾರಸ್ವಾಮಿ ರವರು ಪಿಚ್ಚಹಳ್ಳಿ ಗ್ರಾಮದಲ್ಲಿ ಅರಿವು ಕಾರ್ಯಕ್ರಮವನ್ನು ನಡೆಸಿದರು.
ಪೋಕ್ಸೋ ಕಾಯ್ದೆ, ಬಾಲ್ಯ ವಿವಾಹ ನಿರ್ಮೂಲನೆ, ಮಹಿಳೆಯರ ಮತ್ತು ಮಕ್ಕಳ ಹಕ್ಕುಗಳ ಕುರಿತು ಕಾನೂನು ಅರಿವು ಮೂಡಿಸಿದರು. ಇದೇ ಸಂದರ್ಭದಲ್ಲಿ ಮನೆಗಳ್ಳತನ, ಸರಗಳ್ಳತನದ ಬಗ್ಗೆ ಎಚ್ಚರದಿಂದಿರಲು ಅಪ್ರಾಪ್ತರ ವಾಹನ ಚಾಲನೆಯಿಂದ ಮಾದಕ ವಸ್ತುಗಳ ಸೇವನೆಯಿಂದ ಆಗುವಂತಹ ಅನಾಹುತಗಳ ಬಗ್ಗೆ, ಸೈಬರ್ ಅಪರಾಧಗಳ ಬಗ್ಗೆ ಸಂಚಾರ ಮತ್ತು ರಸ್ತೆ ಸುರಕ್ಷತೆಯ ಕುರಿತು ಅಗತ್ಯ ತಿಳುವಳಿಕೆ ನೀಡಿ ಜಾಗೃತಿ ಮೂಡಿಸಲಾಯಿತು.
ಚಿತ್ರ : ಕೆಜಿಎಫ್ ಪೊಲೀಸ್ ಜಿಲ್ಲೆಯ ಕ್ಯಾಸಂಬಳ್ಳಿ, ಉರಿಗಾಂ ಮತ್ತು ಬೆಮೆಲ್‌ನಗರ ಪೊಲೀಸರಿಂದ ಪೋಕ್ಸೋ ಕಾಯ್ಕೆಯ ಬಗ್ಗೆ ಅರಿವು ಮೂಡಿಸಲಾಯಿತು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್