ಸೀತಾಮರ್ಹಿಯ ಪುನೌರಾಧಂನಲ್ಲಿ ಮೇ 10ರಂದು ಸೀತಾ ಮಹೋತ್ಸವ
ಸೀತಾಮರ್ಹಿ,8 ಮೇ (ಹಿ.ಸ.): ಆ್ಯಂಕರ್:ಬಿಹಾರದ ಸೀತಾಮರ್ಹಿ ಜಿಲ್ಲೆಯ ಪುನೌರಾಧಂನಲ್ಲಿ ಮೇ 10, ಶನಿವಾರದಂದು ಸೀತಾ ಮಹೋತ್ಸವವನ್ನು ಆಯೋಜಿಸಲಾಗಿದೆ. ಬಹುಭಾಷಾ ಸುದ್ದಿ ಸಂಸ್ಥೆ ಹಿಂದೂಸ್ತಾನ್ ಸಮಾಚಾರ್‌ನ ಸೌಜನ್ಯದಿಂದ ನಡೆಯುವ ಈ ಕಾರ್ಯಕ್ರಮದಲ್ಲಿ ಬಿಹಾರ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಮುಖ್ಯ ಅತಿಥಿಯಾಗ
ಸೀತಾ ಮಹೋತ್ಸವ


ಸೀತಾ ಮಹೋತ್ಸವ


ಸೀತಾಮರ್ಹಿ,8 ಮೇ (ಹಿ.ಸ.):

ಆ್ಯಂಕರ್:ಬಿಹಾರದ ಸೀತಾಮರ್ಹಿ ಜಿಲ್ಲೆಯ ಪುನೌರಾಧಂನಲ್ಲಿ ಮೇ 10, ಶನಿವಾರದಂದು ಸೀತಾ ಮಹೋತ್ಸವವನ್ನು ಆಯೋಜಿಸಲಾಗಿದೆ. ಬಹುಭಾಷಾ ಸುದ್ದಿ ಸಂಸ್ಥೆ ಹಿಂದೂಸ್ತಾನ್ ಸಮಾಚಾರ್‌ನ ಸೌಜನ್ಯದಿಂದ ನಡೆಯುವ ಈ ಕಾರ್ಯಕ್ರಮದಲ್ಲಿ ಬಿಹಾರ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿಂದೂಸ್ತಾನ್ ಸಮಾಚಾರ ಸುದ್ದಿ ಸಂಸ್ಥೆಯ ಸಮೂಹದ ಅಧ್ಯಕ್ಷ ಅರವಿಂದ್ ಭಾಲಚಂದ್ರ ಮರ್ಡಿಕರ್ ವಹಿಸಲಿದ್ದು, ರಾಜ್ಯಪಾಲರು ಸೀತಾ ಮಾತೆಯ ಪವಿತ್ರ ಜೀವನ ಹಾಗೂ ಐತಿಹಾಸಿಕ ಕೊಡುಗೆಯ ಕುರಿತು ಮಾತನಾಡಲಿದ್ದಾರೆ.

ಈ ಸಂದರ್ಭ, ಹಿಂದೂಸ್ತಾನ್ ಸಮಾಚಾರ ಸಮೂಹದ ಪ್ರಕಟಣೆಯಾದ ನವೋತನ್ ಮತ್ತು ಯುಗವರ್ತ ನಿಯತಕಾಲಿಕೆಗಳ ಜೊತೆ ‘ತೇಜಸ್ವಿನಿ ಸೀತಾ’ ಎಂಬ ಪುಸ್ತಕವನ್ನು ಬಿಡುಗಡೆ ಮಾಡಲಾಗುವುದು. ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪೀಠಾಧೀಶ್ವರ ಶ್ರೀ ಜಾನಕಿ ಜನ್ಮಭೂಮಿ ದೇವಸ್ಥಾನ ಪುನೌರಧಾಮದ ಶ್ರೀಮಹಾಂತ ಕೌಶಲ ಕಿಶೋರ್ ದಾಸ್ ಜೀ ಮಹಾರಾಜ್ ಆಶೀರ್ವಚನ ನೀಡಲಿದ್ದಾರೆ.

ಉತ್ಸವದಲ್ಲಿ ಪ್ರಮುಖ ಧಾರ್ಮಿಕ ಉಪನ್ಯಾಸಕರಾಗಿ ಸಿದ್ಧಪೀಠ ಹನುಮಾನ್ ನಿವಾಸ ಅಯೋಧ್ಯಾ ಧಾಮದ ಶ್ರೀಮಹಾಂತ ಆಚಾರ್ಯ ಮಿಥಿಲೇಶನಂದಿನಿಶರಣ್ ಜೀ ಮಹಾರಾಜ್, ಬಾಘಿಧಾಮ ಸೀತಾಮರ್ಹಿಯ ಶ್ರೀಮಹಾಂತ ಡಾ. ಶುಕ್‌ದೇವ್ ದಾಸ್ ಜೀ ಮಹಾರಾಜ್, ಹಾಗೂ ಅನಂತ ಶ್ರೀ ವಿಭೂಷಿತ್ ಯೋ ಯೋ ಪಂ. ದಶನಂ ಜುನ ಅಖಾರ ಉಪಸ್ಥಿತರಿರಲಿದ್ದಾರೆ.

ವಿಶೇಷ ಅತಿಥಿಗಳಾಗಿ ಉತ್ತರ ಪ್ರದೇಶ ಸರ್ಕಾರದ ರಾಜ್ಯ ಮಾಹಿತಿ ಆಯುಕ್ತ ಪದುಮ್ ನಾರಾಯಣ್ ದ್ವಿವೇದಿ, ಭಾಗ್ಯ ವಿಧಾತ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ರಾಮ್ ಸುರೇಶ್ ಚೌಧರಿ, ಕಾರ್ಯನಿರ್ವಾಹಕ ಅಧ್ಯಕ್ಷ ಸಂತೋಷ್ ಸುರೇಶ್ ಚೌಧರಿ, ನಿರ್ದೇಶಕ ಭಾಸ್ಕರ್ ಝಾ ಅವರು ಭಾಗವಹಿಸಲಿದ್ದಾರೆ.

ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ, ಬಿಹಾರದ ಪ್ರಸಿದ್ಧ ಶಾಸ್ತ್ರೀಯ ಗಾಯಕ ಪಂಡಿತ್ ಉದಯ್ ಕುಮಾರ್ ಮಲಿಕ್ ಮತ್ತು ಭಜನೆ ಗಾಯಕ ಡಾ. ಸುರೇಂದ್ರ ಕನೌಜಿಯಾ ತಮ್ಮ ಗಾಯನ ಪ್ರಸ್ತುತಪಡಿಸಲಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande