ಸರ್ವಪಕ್ಷ ಸಭೆಯಲ್ಲಿ ಒಗ್ಗಟ್ಟು ಪ್ರದರ್ಶನ
ನವದೆಹಲಿ, 08 ಮೇ (ಹಿ.ಸ.) : ಆ್ಯಂಕರ್ : ಪಾಕಿಸ್ತಾನದಲ್ಲಿನ ಭಯೋತ್ಪಾದಕ ಅಡಗುತಾಣಗಳ ವಿರುದ್ಧ ಭಾರತೀಯ ಸೇನೆ ನಡೆಸಿದ ಯಶಸ್ವಿ ‘ಆಪರೇಷನ್ ಸಿಂಧೂರ್’ ಕುರಿತು ಕೇಂದ್ರ ಸರ್ಕಾರ ಗುರುವಾರ ನಡೆದ ಸರ್ವಪಕ್ಷ ಸಭೆಯಲ್ಲಿ ವಿವರ ನೀಡಿತು. ಈ ಸಂದರ್ಭದಲ್ಲಿ ಎಲ್ಲ ರಾಜಕೀಯ ಪಕ್ಷಗಳು ಸೇನೆಯ ಕ್ರಮವನ್ನು ಶ್ಲಾಘಿಸುತ್ತ
Rijiju


ನವದೆಹಲಿ, 08 ಮೇ (ಹಿ.ಸ.) :

ಆ್ಯಂಕರ್ : ಪಾಕಿಸ್ತಾನದಲ್ಲಿನ ಭಯೋತ್ಪಾದಕ ಅಡಗುತಾಣಗಳ ವಿರುದ್ಧ ಭಾರತೀಯ ಸೇನೆ ನಡೆಸಿದ ಯಶಸ್ವಿ ‘ಆಪರೇಷನ್ ಸಿಂಧೂರ್’ ಕುರಿತು ಕೇಂದ್ರ ಸರ್ಕಾರ ಗುರುವಾರ ನಡೆದ ಸರ್ವಪಕ್ಷ ಸಭೆಯಲ್ಲಿ ವಿವರ ನೀಡಿತು. ಈ ಸಂದರ್ಭದಲ್ಲಿ ಎಲ್ಲ ರಾಜಕೀಯ ಪಕ್ಷಗಳು ಸೇನೆಯ ಕ್ರಮವನ್ನು ಶ್ಲಾಘಿಸುತ್ತಾ ಸಂಪೂರ್ಣ ಬೆಂಬಲ ನೀಡುವುದಾಗಿ ಸ್ಪಷ್ಟಪಡಿಸಿದವು.

ಸಂಸತ್ ಭವನದ ಸಂಕೀರ್ಣದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿವಿಧ ಪಕ್ಷಗಳ ಮುಖಂಡರು ಭಾಗವಹಿಸಿದ್ದರು. ಸಭೆ ಬಳಿಕ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಮಾಧ್ಯಮಗಳಿಗೆ ಮಾತನಾಡಿ, ಭದ್ರತಾ ಕಾರಣಗಳಿಂದ ಕಾರ್ಯಾಚರಣೆಯ ತಾಂತ್ರಿಕ ವಿವರಗಳನ್ನು ಹಂಚಿಕೊಳ್ಳಲಾಗಿಲ್ಲ. ಆದರೆ ಪ್ರಸ್ತುತ ಪರಿಸ್ಥಿತಿ, ಸರ್ಕಾರದ ಉದ್ದೇಶಗಳ ಬಗ್ಗೆ ಎಲ್ಲ ನಾಯಕರಿಗೂ ಮಾಹಿತಿ ನೀಡಲಾಯಿತು, ಎಂದರು.

ಸಭೆಯಲ್ಲಿ ಎಲ್ಲ ಪಕ್ಷಗಳು ರಾಷ್ಟ್ರೀಯ ಹಿತಾಸಕ್ತಿಯ ಬಗ್ಗೆ ಯೋಚಿಸುವ ಅಗತ್ಯವಿದೆ ಎಂಬ ವಿಚಾರದಲ್ಲಿ ಒಗ್ಗಟ್ಟನ್ನು ತೋರಿಸಿವೆ. ನಾಯಕರ ಒಗ್ಗಟ್ಟು ನಮ್ಮ ಪ್ರಜಾಸತ್ತಾತ್ಮ ಶಕ್ತಿಯ ಸಂಕೇತ. ಸೇನೆಯ ಯಶಸ್ಸು ಎಲ್ಲಾ ಭಾರತೀಯರ ಹೆಮ್ಮೆಯ ವಿಷಯವಾಗಿದೆ, ಎಂದು ರಿಜಿಜು ಹೇಳಿದರು.

ಇಂದು ನಡೆದ ಸರ್ವಪಕ್ಷ ಸಭೆ ರಾಜಕೀಯಕ್ಕೂ ಮೀರಿದ ರಾಷ್ಟ್ರ ಹಿತದ ಪ್ರತಿ ಧ್ವನಿಯಾಗಿದೆ, ಎಂದು ರಕ್ಷಣಾ ಸಚಿವರು ಸಭೆಯಲ್ಲಿ ಹೇಳಿರುವುದಾಗಿ ರಿಜಿಜು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande