ಹೊಸಪೇಟೆ, 07 ಮೇ (ಹಿ.ಸ.) :
ಆ್ಯಂಕರ್ : ಕಮಲಾಪುರ ಪಟ್ಟಣಕ್ಕೆ ಅಮೃತ-2 ಯೋಜನೆಯಡಿ ನಿರಂತರ ಕುಡಿಯುವ ನೀರು ಪೂರೈಸುವ ಕಾಮಗಾರಿಗೆ ಮೇ 9 ರಂದು ಸಂಜೆ 5 ಗಂಟೆಗೆ ಕಮಲಾಪುರದಲ್ಲಿ ಶಾಸಕರಾದ ಹೆಚ್.ಆರ್.ಗವಿಯಪ್ಪನವರು ಭೂಮಿಪೂಜೆ ನರೆವೇರಿಸುವರು.
ರೂ.26.17 ಕೋಟಿ ವೆಚ್ಚದ ಕಾಮಗಾರಿ ಇದಾಗಿದ್ದು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಧಾರಿತ ಶುದ್ದ ಕುಡಿಯುವ ನೀರನ್ನು ಸರಬರಾಜು ಮಾಡುವ ಯೋಜನೆ ಇದಾಗಿದೆ. 2055 ಕ್ಕೆ ನಿರೀಕ್ಷಿತ 43 ಸಾವಿರ ಜನಸಂಖ್ಯೆಗನುಗುಣವಾಗಿ 7.03 ಎಂಎಲ್‍ಡಿ ಪ್ರಮಾಣದ ನೀರು ಸರಬರಾಜು ಮಾಡಲು ವಿನ್ಯಾಸಗೊಳಿಸಲಾಗಿದೆ.
ಪೈಪ್‍ಲೈನ್, ಮೇಲ್ಮಟ್ಟ ಜಲಸಂಗ್ರಹಗಾರ ನಿರ್ಮಾಣ, ವಿತರಣಾ ಕೊಳವೆ ಮಾರ್ಗ, ಒಟ್ಟು 6 ಸಾವಿರ ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸುವುದು ಇದರ ಉದ್ದೇಶವಾಗಿರುತ್ತದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್