ನವದೆಹಲಿ, 04 ಮೇ (ಹಿ.ಸ.) :
ಆ್ಯಂಕರ್ : ಭಾರತೀಯ ಚುನಾವಣಾ ಆಯೋಗ ಶೀಘ್ರದಲ್ಲೇ ‘ಇಸಿಐನೆಟ್‌ನ ’ ಎಂಬ ಏಕಬಿಂದು ಡಿಜಿಟಲ್ ವೇದಿಕೆಯನ್ನು ಪ್ರಾರಂಭಿಸಲಿದೆ. ಈ ವೇದಿಕೆಯಲ್ಲಿ ಸಿವಿಐಜಿಐಎಲ್, ಮತದಾರರ ಸಹಾಯವಾಣಿ, ಮತದಾರರ ಮತದಾನ ಸೇರಿದಂತೆ 40ಕ್ಕೂ ಹೆಚ್ಚು ಐಟಿ ಅಪ್ಲಿಕೇಶನ್‌ಗಳನ್ನು ಒಗ್ಗೂಡಿಸಲಾಗಿದೆ.
ಮುಂಬರುವ ಬಿಹಾರ ಚುನಾವಣೆಗೂ ಮುನ್ನ ಇದನ್ನು ಪ್ರಾರಂಭಿಸುವ ಸಾಧ್ಯತೆ ಇದೆ. ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಮಾರ್ಚ್‌ನಲ್ಲಿ ನಡೆದ ಸಿಇಒ ಸಮ್ಮೇಳನದಲ್ಲಿ ಈ ಯೋಜನೆಯನ್ನು ಮಂಡಿಸಿದ್ದರು.
ಈ ವೇದಿಕೆ ಮೂಲಕ ನಾಗರಿಕರು, ಚುನಾವಣೆ ಅಧಿಕಾರಿಗಳು ಹಾಗೂ ರಾಜಕೀಯ ಪಕ್ಷಗಳು ಒಂದೇ ವೇದಿಕೆಯಲ್ಲಿ ಎಲ್ಲ ಸೇವೆಗಳನ್ನು ಬಳಸಿಕೊಳ್ಳಬಹುದಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa