ಜೀನೋಮ್ ಎಡಿಟಿಂಗ್‌ನಲ್ಲಿ ಭಾರತದ ಐತಿಹಾಸಿಕ ಸಾಧನೆ
ನವದೆಹಲಿ, 04 ಮೇ (ಹಿ.ಸ.) : ಆ್ಯಂಕರ್ : ಭಾರತವು ಜೀನೋಮ್ ಎಡಿಟಿಂಗ್ ತಂತ್ರಜ್ಞಾನ ಬಳಸಿ ಅಭಿವೃದ್ಧಿಪಡಿಸಿದ ಮೊದಲ ಭತ್ತದ ಎರಡು ಪ್ರಭೇದಗಳನ್ನು ಬಿಡುಗಡೆ ಮಾಡಿದೆ. ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಡಿಆರ್ಆರ್ ಧನ್ 100 (ಕಮಲಾ) ಮತ್ತು ಪೂಸಾ ಡಿಎಸ್ಟಿ ರೈಸ್ 1 ಎಂಬ ಹೊಸ ವಿಧಗಳನ್ನು ಬಿಡ
Chavan


ನವದೆಹಲಿ, 04 ಮೇ (ಹಿ.ಸ.) :

ಆ್ಯಂಕರ್ : ಭಾರತವು ಜೀನೋಮ್ ಎಡಿಟಿಂಗ್ ತಂತ್ರಜ್ಞಾನ ಬಳಸಿ ಅಭಿವೃದ್ಧಿಪಡಿಸಿದ ಮೊದಲ ಭತ್ತದ ಎರಡು ಪ್ರಭೇದಗಳನ್ನು ಬಿಡುಗಡೆ ಮಾಡಿದೆ. ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಡಿಆರ್ಆರ್ ಧನ್ 100 (ಕಮಲಾ) ಮತ್ತು ಪೂಸಾ ಡಿಎಸ್ಟಿ ರೈಸ್ 1 ಎಂಬ ಹೊಸ ವಿಧಗಳನ್ನು ಬಿಡುಗಡೆ ಮಾಡಿದರು. ಈ ಪ್ರಭೇದಗಳು ಶೇಕಡಾ 19ರಷ್ಟು ಹೆಚ್ಚು ಉತ್ಪಾದನೆ ನೀಡುವ ಸಾಮರ್ಥ್ಯ ಹೊಂದಿದ್ದು, ನೀರಾವರಿ ನೀರನ್ನು ಉಳಿಸುತ್ತವೆ ಮತ್ತು ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತವೆ.

ಕಮಲಾ ವಿಧವು ಬೇಗನೆ ಹಣ್ಣಾಗುತ್ತದೆ ಮತ್ತು ಬಲವಾದ ಕಾಂಡ ಹೊಂದಿದೆ. ಪೂಸಾ ಡಿಎಸ್ಟಿ ರೈಸ್ 1 ಲವಣಯುಕ್ತ ಮತ್ತು ಕ್ಷಾರೀಯ ಮಣ್ಣಿಗೆ ಸೂಕ್ತವಾಗಿದೆ. ಈ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವವನ್ನು ಸಚಿವರು ಪ್ರಶಂಸಿಸಿದರು. ಜೀನೋಮ್ ಎಡಿಟಿಂಗ್ ಸಂಶೋಧನೆಗೆ ಸರ್ಕಾರ ₹500 ಕೋಟಿ ಅನುದಾನ ನೀಡಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande