ರಾಂಬನ್, 04 ಮೇ (ಹಿ.ಸ.) :
ಆ್ಯಂಕರ್ : ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ರಾಂಬನ್ ಜಿಲ್ಲೆಯ ಬ್ಯಾಟರಿ ಚಶ್ಮಾ ಬಳಿ ಭಾನುವಾರ ಬೆಳಿಗ್ಗೆ ಸೇನಾ ವಾಹನವು 700 ಅಡಿ ಆಳದ ಕಂದಕಕ್ಕೆ ಬಿದ್ದು ಮೂವರು ಸೈನಿಕರು ಹುತಾತ್ಮರಾದರು. ಸೈನಿಕರಾದ ಅಮಿತ್ ಕುಮಾರ್, ಸುಜೀತ್ ಕುಮಾರ್ ಮತ್ತು ಮಾನ್ ಬಹದ್ದೂರ್ ಮೃತರು ಎಂದು ಗುರುತಿಸಲಾಗಿದೆ. ಸೇನೆ, ಪೊಲೀಸರು, ಎಸ್‌ಡಿಆರ್‌ಎಫ್ ಹಾಗೂ ಸ್ಥಳೀಯರು ರಕ್ಷಣಾ ಕಾರ್ಯಾಚರಣೆ ನಡೆಸಿದರೂ ಸಾವನ್ನು ತಪ್ಪಿಸಲಾಗಿಲ್ಲ. ಅಪಘಾತದ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa