18 Jun 2025, 19:17 HRS IST

ಬಾಲಕಿ ಅಪಹರಣ : ಪ್ರಕರಣ ದಾಖಲು
ಕೊಪ್ಪಳ, 19 ಮೇ (ಹಿ.ಸ.) : ಆ್ಯಂಕರ್ : ಕೊಪ್ಪಳ ತಾಲೂಕಿನ ಬಿ.ಹೊಸಳ್ಳಿ ಗ್ರಾಮದ ನಾಗರತ್ನ ತಂದೆ ಹನುಮಂತಪ್ಪ ಕ್ಯಾಶಪ್ಪನವರ್ ಎಂಬ 11 ವರ್ಷ ಬಾಲಕಿ ಮೇ 5 ರಂದು ಸಂಜೆ 7 ಗಂಟೆಗೆ ಸುಮಾರಿಗೆ ಅಪಹರಣಕ್ಕೊಳಗಾಗಿದ್ದು, ಕೊಪ್ಪಳ ಮಹಿಳಾ ಪೊಲೀಸ್ ಠಾಣೆಯ ಗುನ್ನೆ ನಂ: 24/2025 ಕಲಂ:137(2) ಬಿ.ಎನ್.ಎಸ್ ಕಾಯ್ದೆ
Kidnapping of a girl: Case registered


ಕೊಪ್ಪಳ, 19 ಮೇ (ಹಿ.ಸ.) :

ಆ್ಯಂಕರ್ : ಕೊಪ್ಪಳ ತಾಲೂಕಿನ ಬಿ.ಹೊಸಳ್ಳಿ ಗ್ರಾಮದ ನಾಗರತ್ನ ತಂದೆ ಹನುಮಂತಪ್ಪ ಕ್ಯಾಶಪ್ಪನವರ್ ಎಂಬ 11 ವರ್ಷ ಬಾಲಕಿ ಮೇ 5 ರಂದು ಸಂಜೆ 7 ಗಂಟೆಗೆ ಸುಮಾರಿಗೆ ಅಪಹರಣಕ್ಕೊಳಗಾಗಿದ್ದು, ಕೊಪ್ಪಳ ಮಹಿಳಾ ಪೊಲೀಸ್ ಠಾಣೆಯ ಗುನ್ನೆ ನಂ: 24/2025 ಕಲಂ:137(2) ಬಿ.ಎನ್.ಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಬಾಲಕಿಯು ಬುದ್ಧಿಮಾಂದ್ಯವಿದ್ದು, ತನ್ನ ಅಜ್ಜಿಯಾದ ಶಿವಮ್ಮ ಕುಕ್ಕೆಪ್ಪನವರ್ ಅವರು ಸಂತೆ ಮಾಡುವ ಸಲುವಾಗಿ ಮೇ. 5 ರಂದು ಮದ್ಯಾಹ್ನ 3 ಗಂಟೆಗೆ ಬಾಲಕಿಯನ್ನು ತನ್ನ ಜೊತೆ ಕರೆದುಕೊಂಡು ಕೊಪ್ಪಳಕ್ಕೆ ಬಂದಿದ್ದು, ನಂತರ ಊರಿಗೆ ಹಿಂದಿರುಗಲು ಬಸ್ ನಿಲ್ದಾಣದಲ್ಲಿ ಬಂದಿರುತ್ತಾರೆ. ಸಂಜೆ 7 ಗಂಟೆಗೆ ಅಜ್ಜಿಗೆ ಸ್ವಲ್ಪ ನಿದ್ದೆ ಬಂದಿದ್ದು, ನಂತರ ಎಚ್ಚರವಾದಾಗ ಬಾಲಕಿಯು ಕಾಣಲಿಲ್ಲ ಹಾಗೂ ಎಲ್ಲಾ ಕಡೆ ಹುಡುಕಿದರು ಸಿಕ್ಕಿರುವುದಿಲ್ಲ. ಅಪಹರಣ ಶಂಕೆ ಹಿನ್ನೆಲೆಯಲ್ಲಿ ಬಾಲಕಿಯ ತಂದೆ ಹನುಮಂತಪ್ಪ ಕುಕ್ಕೆಪ್ಪನವರ್ ಕೊಪ್ಪಳ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಬಾಲಕಿಯು 4 ಫಿಟ್ ಎತ್ತರ, ಗೋಧಿ ಮೈಬಣ್ಣ ಸಾಧಾರಣ ಮೈಕಟ್ಟು, ಹೊಂದಿದ್ದು, ಕಾಣೆಯಾದಾಗ ಕೆಂಪು ಬಣ್ಣದ ಚೂಡಿದಾರ, ಪ್ಯಾಂಟ್ ಧರಿಸಿದ್ದಳು. ಈ ಬಾಲಕಿಯು ಕಂಡುಬಂದಲ್ಲಿ ಕೊಪ್ಪಳ ಮಹಿಳಾ ಠಾಣೆ ದೂ.ಸಂ: 08539-221233, ಮಹಿಳಾ ಠಾಣೆ ಪಿ.ಐ ಮೊ.ಸಂ 8861116999, ತನಿಖಾಧಿಕಾರಿ ಶಶಿಕಲಾ ಮೊ.ಸಂ: 8217391502 ಹಾಗೂ ಕೊಪ್ಪಳ ಪೊಲೀಸ್ ಕಂಟ್ರೋಲ್ ರೂಂ ದೂ.ಸಂ: 9480803700 ಗೆ ಮಾಹಿತಿ ನೀಡುವಂತೆ ಮಹಿಳಾ ಪೊಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande