ಕಲಬುರಗಿ, 26 ಮೇ (ಹಿ.ಸ.) :
ಆ್ಯಂಕರ್ : ವದದಕ್ಷಿಣೆ ಕಿರುಕುಳ, ಅನೈತಿಕ ಸಂಬಂಧ ಅನುಮಾನ ಹಿನ್ನಲೆ ಪತ್ನಿ ಮನೆಯವರು ಗೃಹಿಣಿ ಕೊಲೆ ಆರೋಪ ಕೇಳಿ ಬಂದಿದ್ದು, ಕಲಬುರಗಿ ತಾಲೂಕಿನ ಶ್ರೀನಿವಾಸ ಸರಡಗಿ ಗ್ರಾಮದಲ್ಲಿ ಘಟನೆ ನಡೆದಿದೆ.
ಸುಧಾಬಾಯಿ ರಾಠೋಡ್ (35), ಮೃತ ಗೃಹಿಣಿಯಾಗಿದ್ದು, ಗಂಡ ಹೇಮು ರಾಠೋಡ್, ಅತ್ತೆ ಸೋನಿಬಾಯಿ, ನಾದಿನಿ ಮಂಗಿಬಾಯಿ ವಿರುದ್ಧ ಮಾರಣಾಂತಿಕವಾಗಿ ಹಲ್ಲೆಗೈಯ್ದು ವಿಷಪ್ರಾಷನ ಮಾಡಿಸಿ ಕೊಲೆಗೈಯ್ದಿರೋದಾಗಿ ಸುಧಾಬಾಯಿ ಕುಟುಂಬಸ್ಥರು ಆರೋಪ ಮಾಡಿದ್ದಾರೆ.
ಇನ್ನು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸುಧಾಬಾಯಿ ರಾಠೋಡ್ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ. ಅನೈತಿಕ ಸಂಬಂಧ ಹೋದಿರುವುದಾಗಿ ಹಾಗೂ ವರದಕ್ಷಿಣೆ ತರುವಂತೆ ನಿತ್ಯ ಪತಿ ಹೇಮು ಹಾಗೂ ಕುಟುಂಬಸ್ಥರು ಕಿರುಕುಳ ಕಿರಿಕುಳ ನೀಡುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ.
ಈ ಕುರಿತು ಕಲಬುರಗಿ ಮಹಿಳಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Samarth biral