ಪಾಕ್ ಪರ ಬೇಹುಗಾರಿಕೆ ; ಬಂಧಿತ ದೇವೇಂದ್ರ ವಿಚಾರಣೆ
ಚಂಡೀಗಡ, 18 ಮೇ (ಹಿ.ಸ.) : ಆ್ಯಂಕರ್ : ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ಪಂಜಾಬ್ ಪೋಲಿಸರಿಂದ ಬಂಧಿತನಾಗಿರುವ ದೆವೇಂದ್ರ ಸಿಂಗ್ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ ಕಣ್ಣುಹಾಯಿಸಿದೆ. ಹರಿಯಾಣದ ಕೈತಾಲ್ ನಿವಾಸಿಯಾದ ದೇವೇಂದ್ರ ಸಿಂಗ್ ಅವರನ್ನು ಭಾನುವಾರ ಎನ್ಐಎ ಅಧಿಕಾರಿಗಳು
ಪಾಕ್ ಪರ ಬೇಹುಗಾರಿಕೆ ; ಬಂಧಿತ ದೇವೇಂದ್ರ ವಿಚಾರಣೆ


ಚಂಡೀಗಡ, 18 ಮೇ (ಹಿ.ಸ.) :

ಆ್ಯಂಕರ್ : ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ಪಂಜಾಬ್ ಪೋಲಿಸರಿಂದ ಬಂಧಿತನಾಗಿರುವ ದೆವೇಂದ್ರ ಸಿಂಗ್ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ ಕಣ್ಣುಹಾಯಿಸಿದೆ. ಹರಿಯಾಣದ ಕೈತಾಲ್ ನಿವಾಸಿಯಾದ ದೇವೇಂದ್ರ ಸಿಂಗ್ ಅವರನ್ನು ಭಾನುವಾರ ಎನ್ಐಎ ಅಧಿಕಾರಿಗಳು ಕೈತಾಲಿಗೆ ಆಗಮಿಸಿ ವಿಚಾರಣೆ ನಡೆಸಿದರು.

ಪೊಲೀಸರ ಪ್ರಕಾರ, ದೇವೇಂದ್ರ ಸಿಂಗ್ ಪಾಕಿಸ್ತಾನಕ್ಕೆ ಧಾರ್ಮಿಕ ಯಾತ್ರೆಗೆ ತೆರಳಿದ್ದಾಗ, ಅಲ್ಲಿನ ಹುಡುಗಿ ಒಬ್ಬಳು ಅವನನ್ನು ಹನಿಟ್ರ್ಯಾಪ್‌ಗೆ ಆಕರ್ಷಿಸಿ ಏಳು ದಿನ ತನ್ನ ಜೊತೆ ಇರಿಸಿಕೊಂಡಿದ್ದಳು. ಆಕೆಯ ಮೂಲಕ ದೇವೇಂದ್ರನಿಗೆ ಗುಪ್ತಚರ ತರಬೇತಿ ನೀಡಲಾಗಿದ್ದು, ನಂತರ ಐಎಸ್‌ಐ ಏಜೆಂಟ್‌ಗಳ ಸಂಪರ್ಕಕ್ಕೆ ತರಲಾಗಿದೆ. ಆಕೆ ದೇವೇಂದ್ರನಿಗೆ ಹಣ ಮತ್ತು ಯುವತಿಯರ ಆಮಿಷ ನೀಡಿರುವುದು ತನಿಖೆ ವೇಳೆ ಬಯಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ದೇವೇಂದ್ರನಿಂದ ಐಎಸ್‌ಐ ಸಂಪರ್ಕದ ಪ್ರಗತಿಯ ಮಾಹಿತಿ ಕಲೆ ಹಾಕಿದ್ದು, ಹಂಚಿಕೊಂಡ ಮಾಹಿತಿಯ ಪ್ರಕಾರ ಮತ್ತು ತಂತ್ರಜ್ಞಾನ ಬಳಕೆಯ ಕುರಿತು ವಿಚಾರಣೆ ನಡೆಸಿದೆ. ದೇವೇಂದ್ರ ಈಗಾಗಲೇ ಪಟಿಯಾಲ ಕ್ಯಾಂಟ್‌ನ ಚಿತ್ರಗಳು ಹಾಗೂ ಮಾಹಿತಿಗಳನ್ನು ಐಎಸ್‌ಐ ಏಜೆಂಟ್‌ಗಳಿಗೆ ಕಳುಹಿಸಿದ್ದಾನೆ ಎಂಬುದು ತನಿಖೆಯಲ್ಲಿ ತಿಳಿದು ಬಂದಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande