ದಿವಾಳಿಯಾಗಿರುವ ಪಿಎಸಿಗಳಿಗೆ ಶೀಘ್ರದಲ್ಲೇ ಪರಿಹಾರ : ಅಮಿತ್ ಶಾ
ಅಹಮದಾಬಾದ್, 18 ಮೇ (ಹಿ.ಸ.) : ಆ್ಯಂಕರ್ : ದೇಶದ ಎಲ್ಲ ಗ್ರಾಮ ಪಂಚಾಯತ್‌ಗಳಲ್ಲಿ 2029ರೊಳಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ನೋಂದಣಿ ಖಚಿತಗೊಳಿಸಲು ಕೇಂದ್ರ ಸರ್ಕಾರ ಕಠಿಣ ಯೋಜನೆ ರೂಪಿಸಿದೆ. ಇದಕ್ಕೆ ಸಂಭಂಧಿಸಿದಂತೆ, ದೇಶಾದ್ಯಂತ 2 ಲಕ್ಷ ಹೊಸ ಸಹಕಾರಿ ಸಂಘಗಳು ಹಾಗೂ ಡೈರಿಗಳನ್ನು ಸ್ಥಾಪಿಸಲು
Amita  sha


ಅಹಮದಾಬಾದ್, 18 ಮೇ (ಹಿ.ಸ.) :

ಆ್ಯಂಕರ್ : ದೇಶದ ಎಲ್ಲ ಗ್ರಾಮ ಪಂಚಾಯತ್‌ಗಳಲ್ಲಿ 2029ರೊಳಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ನೋಂದಣಿ ಖಚಿತಗೊಳಿಸಲು ಕೇಂದ್ರ ಸರ್ಕಾರ ಕಠಿಣ ಯೋಜನೆ ರೂಪಿಸಿದೆ. ಇದಕ್ಕೆ ಸಂಭಂಧಿಸಿದಂತೆ, ದೇಶಾದ್ಯಂತ 2 ಲಕ್ಷ ಹೊಸ ಸಹಕಾರಿ ಸಂಘಗಳು ಹಾಗೂ ಡೈರಿಗಳನ್ನು ಸ್ಥಾಪಿಸಲು ಅಭಿಯಾನ ಆರಂಭಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.

ಗುಜರಾತ್ ರಾಜ್ಯ ಸಹಕಾರಿ ಒಕ್ಕೂಟದ ಆಶ್ರಯದಲ್ಲಿ ವಿಜ್ಞಾನನಗರ, ಅಹಮದಾಬಾದ್‌ನಲ್ಲಿ ಆಯೋಜಿಸಿದ್ದ ಅಭಿವೃದ್ಧಿ ಹೊಂದಿದ ಭಾರತದಲ್ಲಿ ಸಹಕಾರದ ಪಾತ್ರ ಕುರಿತ ಸಮ್ಮೇಳನದಲ್ಲಿ ಮಾತನಾಡಿದ ಅವರು, ದಿವಾಳಿಯಾಗಿರುವ ಪಿಎಸಿಗಳನ್ನು ಪುನಶ್ಚೇತನಗೊಳಿಸಿ, ಅವುಗಳ ಬದಲಿಗೆ ಹೊಸ ಪಿಎಸಿಗಳನ್ನು ನೋಂದಾಯಿಸಲು ಶೀಘ್ರದಲ್ಲಿ ಹೊಸ ನೀತಿ ತರಲಾಗುತ್ತಿದೆ ಎಂದು ಘೋಷಿಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande