ನವದೆಹಲಿ, 18 ಮೇ (ಹಿ.ಸ.) :
ಆ್ಯಂಕರ್ : ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರು ಮೇ 19ರಿಂದ 24ರ ವರೆಗೆ ನೆದರ್ಲ್ಯಾಂಡ್ಸ್, ಡೆನ್ಮಾರ್ಕ್ ಮತ್ತು ಜರ್ಮನಿಗೆ ಅಧಿಕೃತ ಭೇಟಿ ನೀಡಲಿದ್ದಾರೆ. ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ ನಂತರ ಅವರ ಮೊದಲ ವಿದೇಶ ಪ್ರವಾಸವಾಗಿದ್ದು, ಇದು ರಾಜತಾಂತ್ರಿಕ ದೃಷ್ಟಿಯಿಂದ ಮಹತ್ತ್ವಪೂರ್ಣವಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಈ ದೇಶಗಳಿಗೆ ನಿಗದಿಪಡಿಸಿದ್ದ ಭೇಟಿ ಮುಂದೂಡಲ್ಪಟ್ಟ ಹಿನ್ನೆಲೆಯಲ್ಲಿ, ಜೈಶಂಕರ್ ಅವರ ಈ ಪ್ರವಾಸ ಇತ್ತೀಚಿನ ಬೆಳವಣಿಗೆಗಳನ್ನು ಪಶ್ಚಿಮ ಯೂರೋಪ್ ಪಾಲುದಾರರಿಗೆ ವಿವರಿಸುವ ಅವಕಾಶವನ್ನು ಒದಗಿಸುತ್ತದೆ. ಪಾಕಿಸ್ತಾನವೊಂದಿಗಿನ ಉದ್ವಿಗ್ನತೆ ಮತ್ತು ಭಯೋತ್ಪಾದನೆ ವಿರುದ್ಧದ ಶೂನ್ಯ ಸಹಿಷ್ಣುತೆಯ ನಿಲುವು ಭಾರತವು ಈ ಭೇಟಿಯಲ್ಲಿ ಉನ್ನತ ಮಟ್ಟದಲ್ಲಿ ಹಂಚಿಕೊಳ್ಳಲಿದೆ.
ವಿದೇಶಾಂಗ ಸಚಿವಾಲಯ ನೀಡಿದ ಮಾಹಿತಿಯಂತೆ, ಜೈಶಂಕರ್ ಅವರು ಮೂರು ದೇಶಗಳ ಉನ್ನತ ನಾಯಕರೊಂದಿಗೆ ದ್ವಿಪಕ್ಷೀಯ ಸಂಬಂಧ, ವ್ಯಾಪಾರ, ಹೂಡಿಕೆ, ಪರಿಸರ ಸಂರಕ್ಷಣೆ ಮತ್ತು ಜಾಗತಿಕ ಸಮಸ್ಯೆಗಳ ಕುರಿತು ಸಭೆ ನಡೆಸಲಿದ್ದಾರೆ. ಈ ಭೇಟಿಯಿಂದ ಭಾರತ-ಯುರೋಪ್ ನಡುವಿನ ವ್ಯವಹಾರ ಮತ್ತು ಭದ್ರತಾ ಸಂಬಂಧಗಳು ಮತ್ತಷ್ಟು ಗಾಢಗೊಳ್ಳಲಿವೆ.
ನೆದರ್ಲ್ಯಾಂಡ್ಸ್, ಡೆನ್ಮಾರ್ಕ್ ಮತ್ತು ಜರ್ಮನಿಯು ಭಾರತದ ಪ್ರಮುಖ ಯುರೋಪಿಯನ್ ಪಾಲುದಾರ ದೇಶಗಳಾಗಿದ್ದು, ಈ ಸಹಕಾರದಿಂದ ಎರಡೂ ಕಡೆಯ ಪಾಲುದಾರರಿಗೆ ಉಭಯ ಲಾಭ ಉಂಟಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa