ಕುಕನೂರು, 18 ಮೇ (ಹಿ.ಸ.) :
ಆ್ಯಂಕರ್ : ಜಿಲ್ಲೆಯ ಕುಕನೂರು ಪಟ್ಟಣದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಕರ್ನಾಟಕ ರಾಜ್ಯ ಬೇಡ ಜಂಗಮ ಸಂಘಟನೆಯ ಕಾರ್ಯದರ್ಶಿ ರವಿ ಹಿರೇಮಠ ಮಾತನಾಡುತ್ತ ಮೂಲತಃ ಜಂಗಮರು ಭಿಕ್ಷಾಟನೆ ಮತ್ತು ಧಾರ್ಮಿಕ ಪ್ರಚಾರ ಕಾರ್ಯ ಮಾಡುತ್ತಾ ಬದುಕು ಕಟ್ಟಿಕೊಳ್ಳುತ್ತಾ ಸಾಗಿ ಬಂದಿದ್ದು ಇಂದಿಗೂ ಸಹ ಬಹುತೇಕರು ನಮ್ಮ ಕುಲಕಸಬನ್ನೇ ನಂಬಿ ಜೀವನ ಸಾಗಿಸುತ್ತಾ ಬಂದಿದ್ದು ಸೌಲಭ್ಯ ವಂಚಿತರಾಗಿ ಬದುಕುತ್ತಿದ್ದೇವೆ. ಆದ್ದರಿಂದ ಬಡವರ್ಗದಿಂದ ಕೂಡಿದ ಜಂಗಮ ಸಮುದಾಯದ ಮಕ್ಕಳ ಶೈಕ್ಷಣಿಕ ಸೇರಿದಂತೆ ಇನ್ನಿತರ ಸೌಲಭ್ಯ ಪಡೆದುಕೊಳ್ಳುವ ಉದ್ದೇಶಕ್ಕಾಗಿ ಸರ್ಕಾರ ನಡೆಸುತ್ತಿರುವ ಜಾತಿಗಣಿತಿ ಸಮೀಕ್ಷೆಯಲ್ಲಿ ಕಾಲಂ 19ರಲ್ಲಿ ಜಾತಿಯನ್ನು ಬೇಡ ಜಂಗಮ ಎಂದು ನಮೂದಿಸುತ್ತ ಬಿಕ್ಷಾಟನೆ ಅಥವಾ ಕೂಲಿ ಕಾಯಕವನ್ನು ನಮೂದಿಸಬೇಕು ಎಂದು ಜಂಗಮ ಬಾಂಧವರಿಗೆ ಕರೆ ನೀಡಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್