ಬೆಂಗಳೂರು, 18 ಮೇ (ಹಿ.ಸ.) :
ಆ್ಯಂಕರ್ : 2025-26ನೇ ಶೈಕ್ಷಣಿಕ ಸಾಲಿಗೆ ಕೈಮಗ್ಗ ಮತ್ತು ಜವಳಿ ತಂತ್ರಜ್ಞಾನದಲ್ಲಿ ಡಿಪ್ಲೋಮಾ ಕೋರ್ಸ್‌ಗಳಿಗೆ 39 ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳಿಗೆ ರೂ.2,500 ಶಿಷ್ಯವೇತನ ಹಾಗೂ ವಸತಿನಿಲಯ ಸೌಲಭ್ಯ ಲಭ್ಯವಿದೆ.
ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾಗಿರುವ, 15-23 ವಯೋಮಿತಿಯ ಸಾಮಾನ್ಯ ವರ್ಗದ ಮತ್ತು 15-25 ವಯೋಮಿತಿಯ ಪರಿಶಿಷ್ಟ ವರ್ಗದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆಯ್ಕೆ ಮೆರಿಟ್ ಆಧಾರಿತವಾಗಿದ್ದು, ಕೋರ್ಸ್ ಗದಗ, ಸೇಲಂ, ವೆಂಕಟಗಿರಿ ಹಾಗೂ ಕಣ್ಣೂರುನ ಕೈಮಗ್ಗ ಸಂಸ್ಥೆಗಳಲ್ಲಿ ಲಭ್ಯವಿದೆ.
ಆಸಕ್ತ ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು khtigadag.ac.inನಲ್ಲಿ ಡೌನ್‌ಲೋಡ್ ಮಾಡಿಕೊಂಡು, ಜೂನ್ 15ರೊಳಗೆ ಗದಗ-ಬೆಟಗೇರಿ ಕೈಮಗ್ಗ ತಂತ್ರಜ್ಞಾನ ಸಂಸ್ಥೆಗೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗೆ ಮೊಬೈಲ್: 9449162822 ಅನ್ನು ಸಂಪರ್ಕಿಸಬಹುದು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa