ಪಕ್ಷಿಗಳನ್ನು ದತ್ತು ಪಡೆದು ದೇವೇಗೌಡರ ಜನ್ಮದಿನಾಚರಣೆ ಆಚರಿಸಿದ ಜೆಡಿಎಸ್ ವಕ್ತಾರ
ಗದಗ, 18 ಮೇ (ಹಿ.ಸ.) : ಆ್ಯಂಕರ್ : ಕನ್ನಡ ನಾಡಿನ ಏಕೈಕ ಪ್ರಧಾನಿ, ಜೆಡಿಎಸ್ ಪಕ್ಷದ ವರಿಷ್ಠ ಎಚ್ ಡಿ ದೇವೇಗೌಡ ಅವರ ಜನ್ಮ ದಿನಾಚರಣೆಯನ್ನು ಇಂದು ಜೆಡಿಎಸ್ ಪಕ್ಷದ ರಾಜ್ಯ ವಕ್ತಾರ ವೆಂಕನಗೌಡ ಆರ್ ಗೋವಿಂದಗೌಡ್ರ ಅವರ ನೇತೃತ್ವದಲ್ಲಿ ಬಿಂಕದಕಟ್ಟಿಯ ಮೃಗಾಲಯದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ಎಚ
ಪೋಟೋ


ಗದಗ, 18 ಮೇ (ಹಿ.ಸ.) :

ಆ್ಯಂಕರ್ : ಕನ್ನಡ ನಾಡಿನ ಏಕೈಕ ಪ್ರಧಾನಿ, ಜೆಡಿಎಸ್ ಪಕ್ಷದ ವರಿಷ್ಠ ಎಚ್ ಡಿ ದೇವೇಗೌಡ ಅವರ ಜನ್ಮ ದಿನಾಚರಣೆಯನ್ನು ಇಂದು ಜೆಡಿಎಸ್ ಪಕ್ಷದ ರಾಜ್ಯ ವಕ್ತಾರ ವೆಂಕನಗೌಡ ಆರ್ ಗೋವಿಂದಗೌಡ್ರ ಅವರ ನೇತೃತ್ವದಲ್ಲಿ ಬಿಂಕದಕಟ್ಟಿಯ ಮೃಗಾಲಯದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಎಚ್ ಡಿ ದೇವೇಗೌಡ ಅವರ 93ನೇಯ ಜನ್ಮದಿನಾಚರಣೆಯನ್ನು ಪಕ್ಷಿಗಳನ್ನು ದತ್ತು ಪಡೆಯುವುದರ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು . ಈ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ಪಕ್ಷದ ರಾಜ್ಯ ವಕ್ತರ ವೆಂಕನಗೌಡ ಆರ್ ಗೋವಿಂದಗೌಡ್ರ ಛಲಕ್ಕೆ, ರಾಜಕೀಯ ಚಾಣಾಕ್ಷತನಕ್ಕೆ, ಹೆಸರಾದ, ಮಾಜಿ ಪ್ರಧಾನಿಗಳು, ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು, ಹೋರಾಟಗಾರ ಹಾಗೂ ರೈತರ ಹಿತಚಂತಕರಾದ ಎಚ್ ಡಿ ದೇವೇಗೌಡ ಅವರು ಯುವಕರಿಗೆ ಮಾದರಿಯಾಗಿದ್ದಾರೆ ಎಂದು ವೆಂಕನಗೌಡ ಆರ್ ಗೋವಿಂದಗೌಡ್ರ ಹೇಳಿದರು.

ದೇವೇಗೌಡರ ಜೀವನ ಅನುಕರಣೆಯವಾಗಿದೆ ಅವರ ಅಧಿಕಾರದ ಕಾಲದಲ್ಲಿ ರೈತರಿಗೆ ನೀರಾವರಿ ಯೋಜನೆಗಳು, ಮಹಿಳಾ ಮೀಸಲಾತಿ, ಅಲ್ಪಸಂಖ್ಯಾತರಿಗೆ ಮೀಸಲಾತಿ, ಹೀಗೆ ಹತ್ತು ಹಲವು ಯೋಜನೆಗಳನ್ನು ಸಾಮಾಜಿಕ ಕಳಕಳಿ ಉಳ್ಳ ಯೋಜನೆಗಳನ್ನು ಅವರ ಅಧಿಕಾರದ ಉದ್ದಕ್ಕೂ ಮಾಡಿಕೊಂಡು ಬಂದಿರುತ್ತಾರೆ ಎಂದು ವೆಂಕನಗೌಡ ಆರ್ ಗೋವಿಂದಗೌಡ್ರ ಹೇಳಿದರು.

ಛಲಕ್ಕೆ ಮತ್ತೊಂದು ಹೆಸರೇ ದೇವೇಗೌಡ ಎಂದು ಅವರು ಬಣ್ಣಿಸಿದರು. ಎಲ್ಲರೂ ತಮ್ಮ ಜನ್ಮ ದಿನಾಚರಣೆಯನ್ನಾಗಲಿ ತಮ್ಮ ನಾಯಕರ, ಮನೆಯ ಸದಸ್ಯರ ಜನ್ಮದಿನಾಚರಣೆ ಹಾಗೂ ವಿಶೇಷ ದಿನಗಳನ್ನು ಪ್ರಾಣಿ ಪಕ್ಷಿಗಳನ್ನು ದತ್ತು ಪಡೆಯುವುದರ ಮೂಲಕ ಆಚರಿಸಬೇಕೆಂದು ಅವರು ಮನವಿ ಮಾಡಿಕೊಂಡರು.

ಈ ಭಾಗದಲ್ಲಿರುವ ಏಕೈಕ ಮೃಗಾಲಯ ಹಾಗೂ ಉದ್ಯಾನವನವನ್ನು ಕಾಪಾಡಿಕೊಳ್ಳುವ ಜವಾಬ್ದರಿ ನಮ್ಮ ಮೇಲೆಯೂ ಇದೆ ಎಂದು ಜೆಡಿಎಸ್ ಪಕ್ಷದ ರಾಜ್ಯಭಕ್ತರ ವೆಂಕನಗೌಡ ಆರ್ ಗೋವಿಂದಗೌಡ್ರ ಹೇಳಿದರು. ಈ ಸಂದರ್ಭದಲ್ಲಿ ವಲಯ ಅರಣ್ಯ ಅಧಿಕಾರಿಯಾದ ಸ್ನೇಹ ಕೊಪ್ಪಳ ಅವರಿಗೆ ಎಚ್ ಡಿ ದೇವೇಗೌಡ ಅವರ ಹುಟ್ಟು ಹಬ್ಬದ ನಿಮಿತ್ಯ ಒಂತಿಗೆಯನ್ನು ನೀಡಿ ಪಕ್ಷಿಗಳನ್ನು ದತ್ತು ಪಡೆಯಲಾಯಿತು.

ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಹಿರಿಯರಾದ ಎಂಎಸ್ ಪರ್ವತಗೌಡ್ರ, ಬಸವರಾಜ ಅಪ್ಪಣ್ಣವರ, ಪ್ರಫುಲ್ಲ ಪುನೇಕರ, ಜೋಸೆಫ್ ಉದೋಜಿ, ಸಂತೋಷ್ ಪಾಟೀಲ, ಉಪಸ್ಥಿತರಿದ್ದ ಪ್ರಮುಖರಾಗಿದ್ದರು.

ಹಿಂದೂಸ್ತಾನ್ ಸಮಾಚಾರ್ / Lalita MP


 rajesh pande