ಇಸ್ಲಾಮಾಬಾದ್, 17 ಮೇ (ಹಿ.ಸ.) :
ಆ್ಯಂಕರ್ : ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಸರ್ಗೋಧಾದಲ್ಲಿ ಅಹ್ಮದೀಯ ಸಮುದಾಯದ ಹಿರಿಯ ವೈದ್ಯ ಡಾ. ಶೇಖ್ ಮಹಮೂದ್ ಅವರನ್ನು ಅಪರಿಚಿತ ದಾಳಿಕೋರನೋರ್ವ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ.
ಡಾ. ಮಹಮೂದ್ ಅವರು ತಮ್ಮ ಕ್ಲಿನಿಕ್‌ನಲ್ಲಿ ಇದ್ದಾಗ ಈ ದಾಳಿ ನಡೆದಿದೆ. ಕಳೆದ ಎರಡು ತಿಂಗಳಲ್ಲಿ ಅಹ್ಮದೀಯ ಸಮುದಾಯದ ವ್ಯಕ್ತಿಗಳ ಮೂರನೇ ಹತ್ಯೆ ಇದಾಗಿದೆ.
ಈ ಹತ್ಯೆಯಲ್ಲಿ ಉಗ್ರ ಸಂಘಟನೆ ತೆಹ್ರೀಕ್-ಇ-ಪಾಕಿಸ್ತಾನದ ಪಾತ್ರವಿದೆ ಎಂದು ಶಂಕಿಸಲಾಗಿದೆ. ಮಾನವ ಹಕ್ಕು ಸಂಘಟನೆಗಳು ಈ ಹತ್ಯೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa