ಅಮೆರಿಕ ಜೊತೆ ಕತಾರ್ ಏರ್ವೇಸ್ 200 ಬಿಲಿಯನ್ ಡಾಲರ್‌ ಖರೀದಿ ಒಪ್ಪಂದಕ್ಕೆ ಸಹಿ
ದೋಹಾ, 15 ಮೇ (ಹಿ.ಸ.) : ಆ್ಯಂಕರ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಗಲ್ಫ್ ರಾಷ್ಟ್ರಗಳ ಭೇಟಿಯ ಸಂದರ್ಭದಲ್ಲಿ 160 ಜೆಟ್ ವಿಮಾನಗಳನ್ನು ಖರೀದಿಸಲು ಕತಾರ್ ಏರ್ವೇಸ್ ಅಮೆರಿಕದ ವಿಮಾನ ತಯಾರಕ ಬೋಯಿಂಗ್ ಕಂಪನಿ ಜೊತೆ 200 ಬಿಲಿಯನ್ ಡಾಲರ್ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಐತಿಹಾಸಿಕ ಒಪ್ಪಂದಕ್ಕೆ
ಅಮೆರಿಕ ಜೊತೆ ಕತಾರ್ ಏರ್ವೇಸ್ 200 ಬಿಲಿಯನ್ ಡಾಲರ್‌ ಖರೀದಿ ಒಪ್ಪಂದಕ್ಕೆ ಸಹಿ


ದೋಹಾ, 15 ಮೇ (ಹಿ.ಸ.) :

ಆ್ಯಂಕರ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಗಲ್ಫ್ ರಾಷ್ಟ್ರಗಳ ಭೇಟಿಯ ಸಂದರ್ಭದಲ್ಲಿ 160 ಜೆಟ್ ವಿಮಾನಗಳನ್ನು ಖರೀದಿಸಲು ಕತಾರ್ ಏರ್ವೇಸ್ ಅಮೆರಿಕದ ವಿಮಾನ ತಯಾರಕ ಬೋಯಿಂಗ್ ಕಂಪನಿ ಜೊತೆ 200 ಬಿಲಿಯನ್ ಡಾಲರ್ ಒಪ್ಪಂದಕ್ಕೆ ಸಹಿ ಹಾಕಿದೆ.

ಈ ಐತಿಹಾಸಿಕ ಒಪ್ಪಂದಕ್ಕೆ ದೋಹಾದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಕತಾರ್ ಎಮಿರ್ ಶೇಖ್ ತಮೀಮ್ ಬಿನ್ ಹಮದ್ ಅಲ್-ಥಾನಿ ಅವರ ಸಮ್ಮುಖದಲ್ಲಿ ಸಹಿ ಹಾಕಲಾಯಿತು.

ಇದು 200 ಶತಕೋಟಿ ಡಾಲರ್‌ಗಳಿಗೂ ಹೆಚ್ಚು ಮೌಲ್ಯದ ಒಪ್ಪಂದವಾಗಿದ್ದು, ಇದರಲ್ಲಿ 160 ವಿಮಾನಗಳು ಸೇರಿವೆ. ಇದು ದಾಖಲೆಯ ಒಪ್ಪಂದ ಎಂದು ಅಧ್ಯಕ್ಷ ಟ್ರಂಪ್ ಸಮಾರಂಭದಲ್ಲಿ ಹೇಳಿದರು.

ಇದೇ ವೇಳೆ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಅವರು ಕತಾರ್ ಜೊತೆಗಿನ ರಕ್ಷಣಾ ಸಹಕಾರಕ್ಕೆ ಸಂಬಂಧಿಸಿದಂತೆ ಹಲವಾರು ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande