ಬಾಗಲಕೋಟೆ, 15 ಮೇ (ಹಿ.ಸ.) :
ಆ್ಯಂಕರ್ : ಕ್ಷುಲ್ಲಕ ಕಾರಣಕ್ಕೆ ಯುವಕನೋರ್ವ ಶಿಕ್ಷಕರೊಬ್ಬರ ಮೇಲೆ ಬಿಯರ್ ಬಾಟಲನಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದಲ್ಲಿ ಜರುಗಿದೆ.
ಶಿಕ್ಷಕನ ಮೇಲೆ ಹಲ್ಲೆ ಮಾಡುವ ವೀಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಾವಳಗಿ ಗ್ರಾಮದ ಬಿ.ಎಲ್.ಡಿ.ಇ ಶಾಲೆಯ ಶಿಕ್ಷಕ ರಾಮು ಪೂಜಾರಿ ಹಾಗೂ ಶಿಕ್ಷಕನ ಮನೆಯ ಪಕ್ಕದ ಯುವಕ ಪವನ ಜಾಧವ ನಡುವೆ ಕ್ರಿಕೆಟ್ ಬಾಲ್ ವಿಚಾರವಾಗಿ ಮಾತಿನ ಚಕಮಕಿ ಯಾಗಿತ್ತು ಎಂದು ತಿಳಿದು ಬಂದಿದೆ.
ಬಾಲ್ ಶಿಕ್ಷಕನ ಮನೆಯ ಒಳಗೆ ಬಿದ್ದಿದ್ದರಿಂದ ಶಿಕ್ಷಕ ಬೈದು ಬುದ್ದಿವಾದ ಹೇಳಿದ್ದರೆಂದು ತಿಳಿದು ಬಂದಿದೆ. ಇದೇ ದ್ವೇಷವನ್ನಿಟ್ಟುಕೊಂಡಿದ್ದ ಯುವಕ ಪವನ ಶಾಲೆಗೆ ಬಂದು ಶಿಕ್ಷಕನ ಮೇಲೆ ಬಿಯರ್ ಬಾಟಲನಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾರೆಂದು ತಿಳಿದು ಬಂದಿದೆ.
ಹೊಡೆಯುವ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಾರಣಾಂತಿಕ ಹಲ್ಲೆಗೆ ಒಳಗಾಗಿರುವ ಶಿಕ್ಷಕ ರಾಮು ಅವರನ್ನ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ತಿಳಿದು ಬಂದಿದೆ.
ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಸಾವಳಗಿ ಠಾಣೆಯ ಪೊಲೀಸರು ಯುವಕನನ್ನ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.ಸಾವಳಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / jyothi deshpande