ಬೆಂಗಳೂರು, 15 ಮೇ (ಹಿ.ಸ.) :
ಆ್ಯಂಕರ್ : ಐಪಿಎಲ್ 2025 ಪ್ಲೇಆಫ್ ಹಂತದ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಬಲ ಬಂದಿದೆ. ವೆಸ್ಟ್ ಇಂಡೀಸ್ ಆಲ್‌ರೌಂಡರ್ ರೊಮಾರಿಯೊ ಶೆಫರ್ಡ್ ಮತ್ತು ಇಂಗ್ಲೆಂಡ್ ಆಟಗಾರ ಲಿಯಾಮ್ ಲಿವಿಂಗ್‌ಸ್ಟೋನ್ ತಂಡಕ್ಕೆ ಮರಳಿದ್ದಾರೆ.
ಶೆಫರ್ಡ್ ಇಂಗ್ಲೆಂಡ್ ವಿರುದ್ಧದ ಸರಣಿಗೆ ಆಯ್ಕೆಯಾದರೂ, ವೆಸ್ಟ್ ಇಂಡೀಸ್ ಮಂಡಳಿಯಿಂದ ಅಂತಿಮ ಅನುಮತಿ ಇನ್ನೂ ಬಾಕಿ. ಇದರಿಂದಾಗಿ ಅವರ ಲಭ್ಯತೆಯ ಕುರಿತು ಸ್ಪಷ್ಟತೆ ಇಲ್ಲ. ಆದರೆ ಲಿವಿಂಗ್‌ಸ್ಟೋನ್ ಆರ್‌ಸಿಬಿಗೆ ಪೂರ್ಣ ಕಾಲ ಲಭ್ಯವಿದ್ದು, ತಂಡಕ್ಕೆ ದೊಡ್ಡ ಬಲವಾಗಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa