ಮುಂಬಯಿ, 6 ಏಪ್ರಿಲ್ (ಹಿ.ಸ.):
ಆ್ಯಂಕರ್:
ಸಲ್ಮಾನ್ ಖಾನ್ ನಟನೆಯ ‘ಸಿಕಂದರ್’ ಚಿತ್ರ ಗಲ್ಲಾ ಪೆಟ್ಟಿಗೆಯಲ್ಲಿ ನಿರೀಕ್ಷಿತ ಯಶಸ್ಸು ಪಡೆಯಲು ವಿಫಲವಾಗಿದೆ. ಬಿಡುಗಡೆಗೊಂಡು ಏಳು ದಿನಗಳು ಕಳೆದರೂ ಚಿತ್ರವು ಇನ್ನೂ ₹100 ಕೋಟಿ ಕ್ಲಬ್‌ಗೆ ಸೇರಿಲ್ಲ.
ಚಿತ್ರದ ಆರಂಭಿಕ ದಿನಗಳಲ್ಲಿ ಉತ್ಸಾಹದಂತೆ ಕಾಣಿಸಿಕೊಂಡರೂ, ದಿನೇ ದಿನೇ ಗಳಿಕೆಯಲ್ಲಿ ಹಿಂದೆ ಬಿದ್ದಿದೆ. ಮೊದಲ ದಿನ ₹26 ಕೋಟಿ ಗಳಿಸಿದ ಚಿತ್ರ, ಏಳನೇ ದಿನಕ್ಕೆ ₹3.75 ಕೋಟಿ ಮಾತ್ರ ಗಳಿಸಿದೆ. ಈದ್ ಹಬ್ಬದ ಆದಾಯ ಕೂಡ ನಿರೀಕ್ಷೆಗೂ ಕಡಿಮೆಯಾಗಿದೆ.
ಸಲ್ಮಾನ್ ಖಾನ್, ರಶ್ಮಿಕಾ ಮಂದಣ್ಣ, ಪ್ರತೀಕ್ ಬಬ್ಬರ್ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ ಈ ಚಿತ್ರವನ್ನು ಎ.ಆರ್. ಮುರುಗದಾಸ್ ನಿರ್ದೇಶಿಸಿದ್ದಾರೆ. ಪ್ರೇಕ್ಷಕರ ನಿರೀಕ್ಷೆಗೆ ತಕ್ಕ ಮಟ್ಟದ ಮನರಂಜನೆ ನೀಡದಿರುವ ಕಾರಣ ಚಿತ್ರವು ನಿರಾಸೆ ಮೂಡಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa