ಮನೋಜ್ ಕುಮಾರ್ ಅಂತ್ಯಕ್ರಿಯೆ ; ಚಿತ್ರರಂಗದ ಗಣ್ಯರ ಅಂತಿಮ ನಮನ
ಮುಂಬಯಿ, 05 ಏಪ್ರಿಲ್ (ಹಿ.ಸ.) : ಆ್ಯಂಕರ್ : ಹಿಂದಿ ಚಲನಚಿತ್ರರಂಗದ ದಿಗ್ಗಜ ನಟ, 'ಭಾರತ್ ಕುಮಾರ್' ಎಂದೇ ಪ್ರಸಿದ್ಧರಾದ ಮನೋಜ್ ಕುಮಾರ್ ಅವರು 87ನೇ ವಯಸ್ಸಿನಲ್ಲಿ ನಿಧನರಾದರು. ಕಳೆದ ಕೆಲವು ವಾರಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಶುಕ್ರವಾರ ಮುಂಜಾನೆ 3:30ಕ್ಕೆ ಮುಂಬೈನ ಕೊಕಿಲಾಬೆನ್ ಆಸ್ಪತ್
Death


ಮುಂಬಯಿ, 05 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಹಿಂದಿ ಚಲನಚಿತ್ರರಂಗದ ದಿಗ್ಗಜ ನಟ, 'ಭಾರತ್ ಕುಮಾರ್' ಎಂದೇ ಪ್ರಸಿದ್ಧರಾದ ಮನೋಜ್ ಕುಮಾರ್ ಅವರು 87ನೇ ವಯಸ್ಸಿನಲ್ಲಿ ನಿಧನರಾದರು. ಕಳೆದ ಕೆಲವು ವಾರಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಶುಕ್ರವಾರ ಮುಂಜಾನೆ 3:30ಕ್ಕೆ ಮುಂಬೈನ ಕೊಕಿಲಾಬೆನ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ಶನಿವಾರ ಮಧ್ಯಾಹ್ನ ವಿಲೆ ಪಾರ್ಲೆಯ ಪವನ್ಹಂಸ್ ಶ್ಮಶಾನದಲ್ಲಿ ಸಕಲ‌ ಗೌರವದೊಂದಿಗೆ ಅಂತಿಮ ಸಂಸ್ಕಾರ ನೆರವೇರಿತು. ಅವರ ಪತ್ನಿ ಶಶಿ ಗೋಸ್ವಾಮಿ, ಪುತ್ರ ಕುಣಾಲ್ ಸೇರಿದಂತೆ ಕುಟುಂಬದ ಸದಸ್ಯರು, ಚಿತ್ರರಂಗದ ಅನೇಕ ತಾರಾಗಣರು ಭಾಗಿಯಾಗಿ ಅಂತಿಮ ನಮನ ಸಲ್ಲಿಸಿದರು.

ಅಮಿತಾಭ್ ಬಚ್ಚನ್, ಅಭಿಷೇಕ್ ಬಚ್ಚನ್, ಅನು ಮಲಿಕ್, ಪ್ರೇಮ್ ಚೋಪ್ರಾ, ಬಿಂದು ದಾರಾ ಸಿಂಗ್, ಜಾಯದ್ ಖಾನ್, ಸಲೀಂ ಖಾನ್ ಮತ್ತು ರಾಜಪಾಲ್ ಯಾದವ್ ಸೇರಿದಂತೆ ಹಲವಾರು ಗಣ್ಯರು ಹಾಜರಿದ್ದು, ನಟನಿಗೆ ಗೌರವದ ಅಂತಿಮ ನಮನ ಸಲ್ಲಿಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande