ಟ್ರಂಪ್ ಸುಂಕ ಘೋಷಣೆ : ಅಮೆರಿಕದ ಷೇರು ಮಾರುಕಟ್ಟೆಗೆ ಆಘಾತ
ವಾಷಿಂಗ್ಟನ್, 03 ಏಪ್ರಿಲ್ (ಹಿ.ಸ.) : ಆ್ಯಂಕರ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿರುವ ವ್ಯಾಪಕ ಸುಂಕ ನೀತಿಯ ಪರಿಣಾಮವಾಗಿ ಅಮೆರಿಕದ ಷೇರು ಮಾರುಕಟ್ಟೆ ತೀವ್ರ ಕುಸಿತ ಕಂಡಿದೆ. ಬುಧವಾರ ಸಂಜೆಗೆ ಡೌ ಜೋನ್ಸ್ 1,100 ಅಂಕಗಳಷ್ಟು (ಶೇ. 2.7) ಕುಸಿದರೆ, ಎಸ್ ಪಿ 500 ಶೇ. 3.9 ಮತ್ತು ನಾಸ್ಡಾ
America


ವಾಷಿಂಗ್ಟನ್, 03 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿರುವ ವ್ಯಾಪಕ ಸುಂಕ ನೀತಿಯ ಪರಿಣಾಮವಾಗಿ ಅಮೆರಿಕದ ಷೇರು ಮಾರುಕಟ್ಟೆ ತೀವ್ರ ಕುಸಿತ ಕಂಡಿದೆ.

ಬುಧವಾರ ಸಂಜೆಗೆ ಡೌ ಜೋನ್ಸ್ 1,100 ಅಂಕಗಳಷ್ಟು (ಶೇ. 2.7) ಕುಸಿದರೆ, ಎಸ್ ಪಿ 500 ಶೇ. 3.9 ಮತ್ತು ನಾಸ್ಡಾಕ್-100 ಶೇ. 4.7ರಷ್ಟು ಕುಸಿದಿವೆ.

ಟ್ರಂಪ್ ಈ ಸುಂಕಗಳು ಅಮೆರಿಕವನ್ನು ವಿದೇಶಿ ಉತ್ಪನ್ನಗಳ ಅವಲಂಬನೆಯಿಂದ ಮುಕ್ತಗೊಳಿಸುತ್ತವೆ ಎಂದು ಹೇಳಿದ್ದಾರೆ. ಆದರೆ, ಅನೇಕ ಆರ್ಥಶಾಸ್ತ್ರಜ್ಞರು ಈ ನೀತಿ ಆರ್ಥಿಕ ಹಿಂಜರಿತಕ್ಕೆ ಕಾರಣವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ನೈಕ್, ಆಪಲ್, ಅಮೆಜಾನ್, ಎನ್ವಿಡಿಯಾ ಮತ್ತು ಟೆಸ್ಲಾ ಸೇರಿದಂತೆ ಪ್ರಮುಖ ಕಂಪನಿಗಳ ಷೇರುಗಳು ಶೇ. 5-7ರಷ್ಟು ಕುಸಿದಿವೆ. ಆಮದು ಉತ್ಪನ್ನಗಳ ಮೇಲೆ ಅವಲಂಬಿತ ಕಂಪನಿಗಳಾದ ಡಾಲರ್ ಟ್ರೀ ಮತ್ತು ಫೈವ್ ಬಿಲೋ ಶೇ. 11-15ರಷ್ಟು ಕುಸಿದಿವೆ.

ಅಂತಾರಾಷ್ಟ್ರೀಯ ವ್ಯಾಪಾರ ಯುದ್ಧ ತೀವ್ರಗೊಳ್ಳುವ ಭೀತಿಯಿಂದ ಮಾರುಕಟ್ಟೆಯಲ್ಲಿ ತೀವ್ರ ಅಸ್ಥಿರತೆ ಉಂಟಾಗಿದೆ. ಇದು ಅಮೆರಿಕ ಆರ್ಥಿಕತೆಗೆ ಹಿನ್ನಡೆಯಾಗಬಹುದು ಎಂದು ಮೂಡೀಸ್ ಅನಾಲಿಟಿಕ್ಸ್‌ನ ಅರ್ಥಶಾಸ್ತ್ರಜ್ಞ ಮಾರ್ಕ್ ಝಂಡಿ ಹೇಳಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande