ನಾಡೋಜ ಬೆಳಗಲ್ಲು ವೀರಣ್ಣ ಸ್ಮರಣೆ ; ಕಲಾವಿದರ ಅಭಿನಂದನೆ
ಬಳ್ಳಾರಿ, 03 ಏಪ್ರಿಲ್ (ಹಿ.ಸ.) : ಆ್ಯಂಕರ್ : ನಾಡೋಜ ಬೆಳಗಲ್ಲು ವೀರಣ್ಣ ಅವರ ಎರಡೆನೆಯ ಪುಣ್ಯ ಸ್ಮರಣೆಯ ಅಂಗವಾಗಿ ಹಿರಿಯ ರಂಗಭೂಮಿ ಸಾಧಕರಿಗೆ ಸನ್ಮಾನ ಹಾಗೂ ಸಂಗನಕಲ್ಲು ಗ್ರಾಮದ ಆದರ್ಶ ವೃದ್ಧಾಶ್ರಮದ ನಿವಾಸಿಗಳಿಗೆ ಸಿಹಿ ಊಟವನ್ನು ಬಡಿಸಲಾಯಿತು. ಐವತ್ತು ವರ್ಷಗಳ ಕಾಲ ರಂಗಭೂಮಿಯಲ್ಲಿ ಸೇವೆ ಸಲ್ಲಿಸಿ
ನಾಡೋಜ ಬೆಳಗಲ್ಲು ವೀರಣ್ಣ ಸ್ಮರಣೆ ; ಕಲಾವಿದರ ಅಭಿನಂದನೆ


ನಾಡೋಜ ಬೆಳಗಲ್ಲು ವೀರಣ್ಣ ಸ್ಮರಣೆ ; ಕಲಾವಿದರ ಅಭಿನಂದನೆ


ನಾಡೋಜ ಬೆಳಗಲ್ಲು ವೀರಣ್ಣ ಸ್ಮರಣೆ ; ಕಲಾವಿದರ ಅಭಿನಂದನೆ


ನಾಡೋಜ ಬೆಳಗಲ್ಲು ವೀರಣ್ಣ ಸ್ಮರಣೆ ; ಕಲಾವಿದರ ಅಭಿನಂದನೆ


ಬಳ್ಳಾರಿ, 03 ಏಪ್ರಿಲ್ (ಹಿ.ಸ.) :

ಆ್ಯಂಕರ್ : ನಾಡೋಜ ಬೆಳಗಲ್ಲು ವೀರಣ್ಣ ಅವರ ಎರಡೆನೆಯ ಪುಣ್ಯ ಸ್ಮರಣೆಯ ಅಂಗವಾಗಿ ಹಿರಿಯ ರಂಗಭೂಮಿ ಸಾಧಕರಿಗೆ ಸನ್ಮಾನ ಹಾಗೂ ಸಂಗನಕಲ್ಲು ಗ್ರಾಮದ ಆದರ್ಶ ವೃದ್ಧಾಶ್ರಮದ ನಿವಾಸಿಗಳಿಗೆ ಸಿಹಿ ಊಟವನ್ನು ಬಡಿಸಲಾಯಿತು.

ಐವತ್ತು ವರ್ಷಗಳ ಕಾಲ ರಂಗಭೂಮಿಯಲ್ಲಿ ಸೇವೆ ಸಲ್ಲಿಸಿ, 80 ವರ್ಷ ವಯಸ್ಸಾದ ಕಲಾವಿದರಾದ ಶ್ರೀಮತಿ ಸುಜಾತಮ್ಮ, ಶ್ರೀಮತಿ ಕೊಟ್ನೇಕಲ್ ರಂಗಮ್ಮ ಹಾಗೂ ಶ್ರೀ ಚನ್ನಬಸಪ್ಪ ಅವರ ಮನೆಗಳಿಗೆ ನಾಡೋಜ ಬೆಳಗಲ್ಲು ವೀರಣ್ಣ ಅವರ ಕುಟುಂಬದ ಸದಸ್ಯರು - ಅಭಿಮಾನಿಗಳು ಹೋಗಿ, ಕಲಾವಿದರ ಕುಟುಂಬದ ಸದಸ್ಯರ ಸಮ್ಮುಖದಲ್ಲಿಯೇ ಸನ್ಮಾನಿಸಿ, ಅಭಿನಂದಿಸಿದರು.

ಸನ್ಮಾನಿತ ಕಲಾವಿದರ ಜೊತೆಯಲ್ಲಿ ದಿ. ನಾಡೋಜ ಬೆಳಗಲ್ಲು ವೀರಣ್ಣ ಅವರ ಸಾಧನೆ, ಜೀವನ ಹಾಗೂ ತಮ್ಮ ರಂಗಭೂಮಿಯ ಸುದೀರ್ಘ ಪಯಣದ ನೆನಪುಗಳನ್ನು ನೆನೆದರು.

ಶ್ರೀಮತಿ ಸುಜಾತಮ್ಮ ಅವರು ರಕ್ತರಾತ್ರಿ ನಾಟಕದ ಅಶ್ವತ್ಥಾಮನ ಸಂಭಾಷಣೆಯನ್ನು ಆವೇಶ ಭರಿತರಾಗಿ ಹೇಳಿ, ನಾಡೋಜ ಬೆಳಗಲ್ಲು ವೀರಣ್ಣ ಅವರ ಸೇವೆಯನ್ನು ಸ್ಮರಿಸಿ, ಕೃತಜ್ಞತೆ ಸಲ್ಲಿಸಿದರು.

ಶ್ರೀಮತಿ ಕೊಟ್ನೇಕಲ್ ರಂಗಮ್ಮನವರು ವೃತ್ತಿ ನಾಟಕ ಕಂಪನಿಯ ನೋವು ನಲಿವುಗಳನ್ನು ಹಂಚಿಕೊಂಡು, ನಾಡೋಜ ಬೆಳಗಲ್ಲು ವೀರಣ್ಣ ಅವರ ಸರಳತೆ, ಸೌಮ್ಯತೆಗಳನ್ನು ಸ್ಮರಿಸಿದರು.

ಬೆಳಗಲ್ಲು ವೀರಣ್ಣ ಅವರ ಮಗ ಮಲ್ಲಿಕಾರ್ಜುನ ಬೆಳಗಲ್ಲು ಹಾಗೂ ಕುಟುಂಬದವರು ಕಲಾ ಬಳಗದವರು, ಹಿರಿಯ ಕಲಾವಿದರಾದ ಎಚ್.ಎಂ. ಚಂದ್ರಶೇಖರ, ಮೋಕಾ ರಾಮೇಶ್ವರ ಹಾಗೂ ಕೆ. ಜಗದೀಶ್ ಈ ಸಂದರ್ಭದಲ್ಲಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande