ಮುಂಬಯಿ, 30 ಮಾರ್ಚ್ (ಹಿ.ಸ.) :
ಆ್ಯಂಕರ್ : ಸಲ್ಮಾನ್ ಖಾನ್ ಅಭಿನಯದ ಬಹುನಿರೀಕ್ಷಿತ 'ಸಿಕಂದರ್' ಚಿತ್ರ ಮಾರ್ಚ್ 30ರಂದು ಬಿಡುಗಡೆಯಾಗಿದೆ. ಆದರೆ, ಚಲನಚಿತ್ರ ಬಿಡುಗಡೆಯಕ್ಕೂ ಮುನ್ನವೇ 600ಕ್ಕೂ ಹೆಚ್ಚು ಖಾಸಗಿ ಜಾಲತಾಣಗಳಲ್ಲಿ ಸೋರಿಕೆಯಾಗಿದ್ದು ನಿರ್ಮಾಪಕರಿಗೆ ಭಾರೀ ಆಘಾತವಾಗಿದೆ.
ಚಿತ್ರ ಬಿಡುಗಡೆಗೂ ಮೊದಲು ಸೋರಿಕೆಯಾಗಿರುವುದು ನಿರ್ಮಾಪಕರಿಗೆ ದೊಡ್ಡ ನಷ್ಟ ಎಂದು ವಿಶ್ಲೇಷಿಸಲಾಗುತ್ತಿದೆ.
ಸಾಜಿದ್ ನಾಡಿಯಾಡ್ವಾಲಾ ನಿರ್ಮಿತ ಈ ಚಿತ್ರವನ್ನು ಎ.ಆರ್. ಮುರುಗದಾಸ್ ನಿರ್ದೇಶಿಸಿದ್ದಾರೆ.
ಚಿತ್ರದಲ್ಲಿ ಸಲ್ಮಾನ್ ಖಾನ್ ಜತೆಗೆ ರಶ್ಮಿಕಾ ಮಂದಣ್ಣ, ಪ್ರತೀಕ್ ಬಬ್ಬರ್, ಕಾಜಲ್ ಅಗರ್ವಾಲ್, ಸತ್ಯರಾಜ್ ಮತ್ತು ಶರ್ಮಾನ್ ಜೋಶಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa