ನವದೆಹಲಿ, 03 ಏಪ್ರಿಲ್ (ಹಿ.ಸ.) :
ಆ್ಯಂಕರ್ : ವಿಶ್ವದ ಎರಡನೇ ಶ್ರೇಣಿಯ ಟೆನಿಸ್ ತಾರೆ ಇಗಾ ಸ್ವೀಟೆಕ್ ಮುಂಬರುವ ಬಿಲ್ಲಿ ಜೀನ್ ಕಿಂಗ್ ಕಪ್ ಅರ್ಹತಾ ಪಂದ್ಯಾವಳಿಯಿಂದ ಹಿಂದೆ ಸರಿಯುತ್ತಿದ್ದಾರೆ.
ಆರೋಗ್ಯ ಮತ್ತು ವೃತ್ತಿಜೀವನದ ಸಮತೋಲನಕ್ಕಾಗಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಅವರು ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿದ್ದಾರೆ.
ಈ ನಿರ್ಧಾರದೊಂದಿಗೆ, ಏಪ್ರಿಲ್ 10-12ರಂದು ಪೋಲ್ಯಾಂಡ್‌ನ ರಾಡೋಮ್‌ನಲ್ಲಿ ಸ್ವಿಟ್ಜರ್ಲೆಂಡ್ ಹಾಗೂ ಉಕ್ರೇನ್ ವಿರುದ್ಧದ ಪಂದ್ಯಗಳಿಗೆ ಅವರು ಗೈರಾಗಲಿದ್ದಾರೆ. 23 ವರ್ಷದ ಸ್ವಿಯೆಟೆಕ್, ನನ್ನ ದೇಶವನ್ನು ಪ್ರತಿನಿಧಿಸುವುದು ಹೆಮ್ಮೆ, ಆದರೆ ಪ್ರಸ್ತುತ ಸಮತೋಲನ ಅಗತ್ಯ ಎಂದು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa