ಬಳ್ಳಾರಿ, 23 ಏಪ್ರಿಲ್ (ಹಿ.ಸ.)
ಆ್ಯಂಕರ್ : ಕ್ರೀಡೆಗಳು ವಿದ್ಯಾರ್ಥಿಗಳಿಗೆ ಮತ್ತು ಮಕ್ಕಳಿಗೆ ದೈಹಿಕ - ಮಾನಸಿಕ ಸ್ಥಿತಿಯನ್ನು ಉತ್ತಮಪಡಿಸುತ್ತವೆ ಎಂದು ಬಳ್ಳಾರಿ ಜಿಲ್ಲಾ ಚೆಸ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಬಿ.ಎಚ್.ಎಂ. ವಿರೂಪಾಕ್ಷಯ್ಯ ಅವರು ತಿಳಿಸಿದ್ದಾರೆ.
ಬಳ್ಳಾರಿ ಜಿಲ್ಲಾ ಚೆಸ್ ಅಸೋಸಿಯೇಷನ್ ಬೇಸಿಗೆಯ ರಜಾ ದಿನಗಳಂದು ಏಳು ಮತ್ತು ಒಂಬತ್ತು ವರ್ಷಗಳ ಮಕ್ಕಳಿಗೆ ಏರ್ಪಡಿಸಿರುವ ಚೆಸ್ ಪಂದ್ಯಾವಳಿಗೆ ಚಾಲನೆ ನೀಡಿ ಪ್ರಾಸ್ತಾವಿಕ ಭಾಷಣ ಮಾಡಿದರು.
ಚೆಸ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ಚೆಸ್ ಅಸೋಸಿಯೇಷನ್ ಗೌರವ ಅಧ್ಯಕ್ಷ ಪೆÇೀಲಾ ಪ್ರವೀಣ್ ಅವರು, ಮಕ್ಕಳ ಬೌದ್ಧಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಚೆಸ್ ಪಂದ್ಯಾವಳಿ ಅತ್ಯಂತ ಉತ್ತಮ. ಚೆಸ್ ಪಂದ್ಯಾವಳಿಯನ್ನು ಆಯೋಜಿಸಿರುವ ಬಳ್ಳಾರಿ ಜಿಲ್ಲಾ ಚೆಸ್ ಅಸೋಸಿಯೇಷನ್‍ಗೆ ಅಭಿನಂದನೆಗಳು ಎಂದರು.
ಬೆಳಗಲ್ಲು ವೀರಣ್ಣನವರ ಮಗ ಬೆಳಗಲ್ಲು ಹನುಮಂತ, ನಾಗರಾಜ್ ಕೋರಿ ಜಗದೀಶ್, ಬಸವರಾಜ್ ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್