ಯತ್ನಾಳ್ ಉಚ್ಛಾಟನೆ : ಪಂಚಮಸಾಲಿ ಮುಖಂಡರ ಸ್ವಾಗತ
ವಿಜಯಪುರ, 02 ಏಪ್ರಿಲ್ (ಹಿ.ಸ.) : ಆ್ಯಂಕರ್ : ಬಸನಗೌಡ ಪಾಟೀಲ್ ಯತ್ನಾಳ್ ಒಬ್ಬ ಸ್ವಾರ್ಥಿ. ಅವರ ಎದುರು ಪಂಚಮಸಾಲಿ ಸಮಾಜದ ಯಾವೊಬ್ಬ ವ್ಯಕ್ತಿ ಅಥವಾ ಮುಖಂಡ ಬೆಳೆಯಬಾರದು. ಅಷ್ಟು ಕೀಳು ಮಟ್ಟದ ಸ್ವಾರ್ಥ ರಾಜಕಾರಣಿ ಎಂದು ಪಂಚಮಸಾಲಿ ಸಮಾಜದ ಮುಖಂಡ ರವಿ ಬಗಲಿ ವಿಜಯಪುರದಲ್ಲಿ ಪತ್ರಿಕಾಗೋಷ್ಠಿ ನಡೆಸುವ ಮೂಲಕ
ಯತ್ನಾಳ್ ಉಚ್ಛಾಟನೆ- ಸ್ಪಾಗತಿಸಿದ ಪಂಚಮಸಾಲಿ


ವಿಜಯಪುರ, 02 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಬಸನಗೌಡ ಪಾಟೀಲ್ ಯತ್ನಾಳ್ ಒಬ್ಬ ಸ್ವಾರ್ಥಿ. ಅವರ ಎದುರು ಪಂಚಮಸಾಲಿ ಸಮಾಜದ ಯಾವೊಬ್ಬ ವ್ಯಕ್ತಿ ಅಥವಾ ಮುಖಂಡ ಬೆಳೆಯಬಾರದು. ಅಷ್ಟು ಕೀಳು ಮಟ್ಟದ ಸ್ವಾರ್ಥ ರಾಜಕಾರಣಿ ಎಂದು ಪಂಚಮಸಾಲಿ ಸಮಾಜದ ಮುಖಂಡ ರವಿ ಬಗಲಿ ವಿಜಯಪುರದಲ್ಲಿ ಪತ್ರಿಕಾಗೋಷ್ಠಿ ನಡೆಸುವ ಮೂಲಕ ಯತ್ನಾಳ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ಹಿಂದೆ ಪಂಚಮಸಾಲಿ 2ಎ ಹೋರಾಟವನ್ನು ತಮ್ಮ ರಾಜಕೀಯ ಲಾಭಕ್ಕೆ ಬಳೆಸಿಕೊಂಡು ನಮ್ಮ ಹೋರಾಟವನ್ನು ದುರುಪಯೋಗ ಪಡಸಿಕೊಂಡ ಮಹಾನ್ ನಾಯಕ ಯತ್ನಾಳ್ ಎಂದು ಕಿಡಿ ಕಾರಿದರು.

ಶಾಸಕ ವಿಜಯಾನಂದ‌ ಕಾಶಪ್ಪನವರ್ ಅವರ ವಿರುದ್ಧ ಬಾಯಿಗೆ ಬಂದಂಗೆ ಮಾತನಾಡುವ ಯತ್ನಾಳ್ ಕಾಶಪ್ಪನವರ್ ತಂದೆ ಪಂಚಮಸಾಲಿ ಸಮಾಜಕ್ಕೆ ಎಷ್ಟು ಶ್ರಮಿಸಿದವರು ಎಂಬ ಬಗ್ಗೆ ಯತ್ನಾಳ್ ಗೆ ಏನು ಗೊತ್ತು ಎಂದು ಹರಿಹಾಯ್ದರು.

ಈವರೆಗೂ ಯಾರೊಬ್ಬರನ್ನು ಬೆಳೆಸದ ಯತ್ನಾಳ್ ಮುಂದೆ ಬರುವ ನಾಯಕರನ್ನು ಹತ್ತಿಕ್ಕುವುದೇ ಇವರ ಉದ್ದೇಶ ಎಂದ ರವಿ ಬಗಲಿ, ಹಲವು ಪಂಚಮಸಾಲಿ ನಾಯಕರ ವಿರುದ್ಧ ಮಾತನಾಡುವ ಮೂಲಕ ಅವರ ತೇಜೋವಧೆ ಮಾಡುತ್ತಲೇ ಬಂದಿದ್ದಾರೆ. ಪಂಚಮಸಾಲಿ ಸಮಾಜದ ನಾಯಕರಾದ ಮುರಗೇಶ ನಿರಾಣಿ ಅವರ‌ನ್ನು ಅವಹೇಳನ ಮಾಡುತ್ತಲೇ ಬಂದಿರುವ ಯತ್ನಾಳ್, ಯಡಿಯೂರಪ್ಪ ಅವರನ್ನು ಬಿಡಲಿಲ್ಲ‌. ಅವರ ಪುತ್ರ ವಿಜಯೇಂದ್ರ, ಲಕ್ಷ್ಮಿ‌ ಹೆಬ್ಬಾಳಕರ್, ವಿಜಯಾನಂದ‌ ಕಾಶಪ್ಪನವರ್, ಶೋಭಾ ಕರಂದ್ಲಾಜೆ, ಹೀಗೆ ಪಂಚಮಸಾಲಿ ಸಮಾಜದ ನಾಯಕರ ವಿರುದ್ಧ ಮಾತನಾಡುತ್ತಲೇ ಬಂದಿದ್ದಾರೆ.

ಹೀಗಾಗಿ ಯತ್ನಾಳ್ ಉಚ್ಛಾಟನೆ ಸ್ವಾಗತಿಸುತ್ತೆವೆ ಎಂದರು.

ಯತ್ನಾಳ್ ಅವರ ಹಿಂದೆ ಇರುವವರು ಬಿಜೆಪಿ ಕಾರ್ಯಕರ್ತರಲ್ಲ, ಅವರೆಲ್ಲ ಯತ್ನಾಳ್ ಅವರ ಬೆಂಬಲಿಗರು. ಅವರಿಗೆ ಹಿಂದುತ್ವದ ಬಗ್ಗೆ ಆಗಲಿ ಪಂಚಮಸಾಲಿ ಸಮಾಜದ ಬಗ್ಗೆ ಗೌರವ ಇಲ್ಲದವರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರವಿ ಬಗಲಿ, ಬಸವರಾಜ ಹಳ್ಳಿ ಸೇರಿದಂತೆ ಹಲವು ಪಂಚಮಸಾಲಿ ಸಮಾಜದ ಮುಖಂಡರು ಭಾಗಿ ಆಗಿದ್ದರು.

ಹಿಂದೂಸ್ತಾನ್ ಸಮಾಚಾರ್ / ಪ್ರಸನ್ನ


 rajesh pande